Advertisement
1. CBNAAT (GENE X PERT) ಫಲಿತಾಂಶದಲ್ಲಿ ಕಫ ಅಥವಾ ದೇಹದ ಇತರ ಯಾವುದೇ ಮಾದರಿಯಲ್ಲಿ ಸೂಕ್ಷ್ಮಾಣುಗಳು ಇವೆ ಮತ್ತು RIFAMPICIN SENSITIVE ಅಂತಿದ್ದರೆ ಆ ರೋಗಿಗೆ CATEGORY I (ONE) ಚಿಕಿತ್ಸೆ (2 ತಿಂಗಳು ದಿನಂಪ್ರತಿ HREZ ಮಾತ್ರೆಗಳು ಅನಂತರ 4 ತಿಂಗಳು ದಿನಂಪ್ರತಿ HRE ಮಾತ್ರೆಗಳು) ಪ್ರಾರಂಭಿಸುವುದು.
Related Articles
ರೋಗಿಯು ಈ ಚಿಕಿತ್ಸೆಯನ್ನು ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ/ಸ್ಥಾಪಿಸುತ್ತಿರುವ DR-TB CENTRE ಗಳಲ್ಲಿ ಉಚಿತವಾಗಿ ಪಡೆಯಬಹುದು.
Advertisement
ಈ ಎಲ್ಲಾ ಪರೀಕ್ಷೆಗಳು, ಚಿಕಿತ್ಸೆಗಳು ಯಾವುದೇ ರೋಗಿಗೆ ಉಚಿತವಾಗಿದ್ದು ರೋಗಿಗೆ ತಿಂಗಳ ಮಾಸಾಶನದೊಂದಿಗೆ ಚಿಕಿತ್ಸಾ ಕೇಂದ್ರಗಳಿಗೆ ಪ್ರಯಾಣಿಸಲು ಪ್ರಯಾಣ ಭತ್ತೆಯನ್ನು ಸಹ ನೀಡಲಾಗುತ್ತದೆ.
ಯಾವುದೇ ಖಾಸಗೀ ವೈದ್ಯರುಗಳು ಕೂಡ ತಮ್ಮ ರೋಗಿಗಳಿಗಾಗಿ ಈ Diagnostic Servicesಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದ್ದು ಸಂಬಂಧಪಟ್ಟ ಔಷಧಗಳನ್ನು ಸಹ ಉಚಿತವಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಂದ ಪಡೆದುಕೊಂಡು ತಮ್ಮ ಆಸ್ಪತ್ರೆಗಳಲ್ಲಿ ಸಹ ಸೂಕ್ತ ಕಾಯಿಲೆ ಹರಡುವ ನಿರೋಧಕ ಕ್ರಮಗಳನ್ನು ಅನುಸರಿಸಿ ನೀಡಬಹುದಾಗಿದೆ. ಚಿಕಿತ್ಸೆ ನೀಡುವ ಪ್ರತೀ ಖಾಸಗಿ ವೈದ್ಯರಿಗೆ ಸಹ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗ ಪ್ರತೀ ವೈದ್ಯರು (ಖಾಸಗಿ ಮತ್ತು ಸರಕಾರಿ) ಕ್ಷಯ ರೋಗವನ್ನು ಪತ್ತೆ ಹಚ್ಚಿದ ಕೂಡಲೇ ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ TB Notification-Resporting Format ಮೂಲಕ ನೀಡುವುದು ಅಗತ್ಯವಾಗಿದೆ. Computer ಅಥವಾ Smart Phone ಇರುವವರು.NIKSHAY ಎಂಬ Software ಉಪಯೋಗಿಸಿ ಆ ಮೂಲಕ Notification ಮಾಡಬಹುದಾಗಿದೆ. ಹೀಗೆ ಮಾಡಿದ ಪ್ರತೀ ರೋಗಿಯ ಮಾಹಿತಿಗೆ ಸರಕಾರದಿಂದ ಪ್ರೋತ್ಸಾಹ ಧನ ಮತ್ತು ಆ ರೋಗಿಯ ಚಿಕಿತ್ಸೆಗೆ ಉಚಿತ ಔಷಧ ಸಹ ಇಲಾಖೆಯಿಂದ ನೀಡಲಾಗುವುದು. ವೈದ್ಯರು ಇಲಾಖೆಗೆ ಹೀಗೆ Notification ಮಾಡಿದ ನಂತರ ಇಲಾಖೆಯ ಕಾರ್ಯಕರ್ತರು ರೋಗಿ ನಿಗದಿತ ಸಮಯದವರೆಗೆ ಈ ಚಿಕಿತ್ಸೆ ಪಡೆದುಕೊಂಡು ರೋಗದಿಂದ ಗುಣಮುಖರಾಗುವುದನ್ನು ಖಾತರಿಪಡಿಸಿಕೊಳ್ಳುತ್ತಾರೆ.
ರೋಗ ಚಿಕಿತ್ಸೆ ಪತ್ತೆ ಹಚ್ಚಲು ಹಾಗೂ ಚಿಕಿತ್ಸೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ಆಯಾ ಜಿಲ್ಲೆಯಲ್ಲಿರುವ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ PPM COORDINATOR, ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕರು ಹಾಗೂ ಕ್ಷಯ ರೋಗ ಆರೋಗ್ಯ ವೀಕ್ಷಕರಿಂದ ಪಡೆಯಬಹುದಾಗಿದೆ.