Advertisement

ಗ್ಯಾಪ್‌ನಲ್ಲೊಂದ್‌ ಸಿನಿಮಾ!

06:06 PM Oct 20, 2017 | Team Udayavani |

“ಆ ದಿನಗಳು’ ಚೇತನ್‌ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದರು ಪಿ.ಸಿ. ಶೇಖರ್‌. ಇಷ್ಟರಲ್ಲಿ ಚಿತ್ರ ಶುರುವಾಗಿರಬೇಕಿತ್ತು. ಆದರೆ, ಕಾರಣಾಂತರಗಳಿಮದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಜನವರಿ 15ರಂದು ಆ ಚಿತ್ರ ಪ್ರಾರಂಭವಾಗಲಿದೆ. ಈ ಮಧ್ಯೆ ಗ್ಯಾಪ್‌ನಲ್ಲಿ ಇನ್ನೊಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ಶೇಖರ್‌. ಆ ಚಿತ್ರ ನವೆಂಬರ್‌ನಲ್ಲಿ ಶುರುವಾಗಿ ಜನವರಿ ಹೊತ್ತಿಗೆ ಮುಗಿಯಲಿದೆ.

Advertisement

ಶೇಖರ್‌ ನಿರ್ದೇಶನದ ಈ ಚಿತ್ರದಲ್ಲಿ ಹೀರೋ ಯಾರೂ ಇಲ್ಲ. ಏಕೆಂದರೆ, ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ರಾಗಿಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಶೇಖರ್‌ ನಿರ್ದೇಶನದ “ನಾಯಕ’ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದರು. ಈಗ ನಾಯಕಿ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಚಲಿತ ಸಮಸ್ಯೆಗಳನ್ನಿಟ್ಟುಕೊಂಡು, ಈ ಕಥೆ ಮಾಡಿದ್ದಾರೆ ಪಿ.ಸಿ. ಶೇಖರ್‌

“ದಿನ ಬೆಳಗಾದರೆ ಚಾನಲ್‌ಗ‌ಳಲ್ಲಿ, ಪತ್ರಿಕೆಗಳಲ್ಲಿ ಭಯೋತ್ಪಾದನೆ ಕುರಿತ ಸುದ್ದಿಗಳನ್ನು ಓದುತ್ತಿರುತ್ತೀವಿ. ಇಂಥದ್ದಕ್ಕೆಲ್ಲಾ ಕೊನೆಯೇ ಇಲ್ಲವಾ? ಪರಿಹಾರವೇನು ಎಂಬಂತಹ ಪ್ರಶ್ನೆಗಳು ಎಲ್ಲರಿಗೂ ಬರುವುದು ಸಹಜ. ಈ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಎರಡು ದಿನಗಳ ಕಾಲ ಸುದ್ದಿಯಾಗುತ್ತದೆ. ಆ ನಂತರ ಏನಾಗುತ್ತದೆ ಎಂದು ಯಾರೂ ಯೋಚಿಸುವುದಿಲ್ಲ.

ಒಂದು ಭಯೋತ್ಪಾದನೆ ಚಟುವಟಿಕೆ ಹೇಗೆ ರಾಜಕೀಯವಾಗಿ, ಧಾರ್ಮಿಕವಾಗಿ ಏನೆಲ್ಲಾ ಸಮಸ್ಯೆಗಳಾಗುತ್ತದೆ ಮತ್ತು ಒಬ್ಬ ಮಹಿಳೆಗೆ ಇದರಿಂದ ಸಮಸ್ಯೆಯಾದರೆ, ಏನು ಮಾಡುತ್ತಾಳೆ ಎನ್ನುವುದು ಈ ಚಿತ್ರದ ಕಥೆ. ಚಿತ್ರಕ್ಕೆ ಹೆಸರು ಫಿಕ್ಸ್‌ ಆಗಿಲ್ಲ. ನವೆಂಬರ್‌ 15ರಿಂದ ಚಿತ್ರ ಶುರುವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ ಶೇಖರ್‌.

ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಹಾಂಗ್‌ಕಾಂಗ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಅಲಂಕಾರ್‌ ಸಂತಾನಂ ಎನ್ನುವವರು ಚಿತ್ರ ನಿರ್ಮಿಸಲಿದ್ದಾರೆ. ಚಿತ್ರದಲ್ಲಿ ಹಾಡುಗಳು ಇರುವುದಿಲ್ಲವಂತೆ. ಕಾರಣ, ಇದೊಂದು ನೈಜ ಸಿನಿಮಾ ಆಗಿರುವುದರಿಂದ ಹಾಡುಗಳು ಇರುವುದಿಲ್ಲವಂತೆ. ಅದರ ಬದಲು ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

Advertisement

ಇನ್ನು ಛಾಯಾಗ್ರಹಣದ ವಿಷಯಕ್ಕೆ ಬಂದರೆ ಛಾಯಾಗ್ರಾಹಕ ವೈದಿ ಅವರ ಸಹಾಯಕ ಅಶೋಕ್‌ ಎನ್ನುವವರು ಮಾಡಲಿದ್ದು, ಯಾವುದೇ ಟ್ರಾಲಿ ಅಥವಾ ಇತರೆ ಉಪಕರಣಗಳನ್ನು ಬಳಸದೆ, ಹೆಗಲ ಮೇಲಿಟ್ಟುಕೊಂಡು ಛಾಯಾಗ್ರಹಣ ಮಾಡುತ್ತಿರುವುದು ಈ ಚಿತ್ರದ ವಿಶೇಷ. ಇನ್ನು “ರಾಗ’ ಚಿತ್ರಕ್ಕೆ ಸಂಭಾಷಣೆ ಬರೆದ ಸಚಿನ್‌ ಈ ಚಿತ್ರಕ್ಕೂ ಸಂಭಾಷಣೆ ರಚಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next