ಬೆಂಗಳೂರು: ಡಿಸೆಂಬರ್ 4ರಿಂದ 6ರ ವರೆಗೆ ಬಿಜೆಪಿ ತಂಡದ ರಾಜ್ಯ ಪ್ರವಾಸ ಮುಗಿಯುತ್ತಿದ್ದಂತೆ ಡಿ. 7ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ನಡೆಸಲಾಗುವುದು.
ಇಲ್ಲಿ ವಕ್ಫ್ ವಿವಾದ ಸೇರಿದಂತೆ ಅಧಿವೇಶನದಲ್ಲಿ ನಡೆಸಬೇಕಾದ ಹೋರಾಟಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಇದೆಲ್ಲದರ ಮಧ್ಯೆ ವಿಪಕ್ಷ ನಾಯಕ ಆರ್. ಅಶೋಕ್ ಮಂಗಳವಾರ ವಿಧಾನಸೌಧದಲ್ಲಿ ಹಿರಿಯ ಶಾಸಕರು ಹಾಗೂ ಮುಖಂಡರ ಜತೆಗೆ ಸಭೆ ನಡೆಸಲಿದ್ದಾರೆ.
ಅಧಿವೇಶನದ ಕಾರ್ಯತಂತ್ರದ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಡಿ. 7ರಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ರಾಜಕೀಯದಲ್ಲಿನ ವಾಸ್ತವಾಂಶದ ಬಗ್ಗೆ ವಿಚಾರ ವಿನಿಮಯ ನಡೆಸಲಿದ್ದು, ಆ ಬಳಿಕ ಸದನದಲ್ಲಿ ನಡೆಸುವ ಹೋರಾಟದ ಬಗ್ಗೆ ತಂತ್ರಗಾರಿಕೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.