Advertisement
ಚಂದುಸಾಬ ದಂಡಿನ ಎಂಬುವರ ಮನೆಯ ಕಬ್ಬಿಣದ ಅಲ್ಮೇರಾದಲ್ಲಿಟ್ಟಿದ್ದ ನಗ-ನಾಣ್ಯ ಬುಧವಾರ ಕಳುವು ಆಗಿತ್ತು. ಈ ಕುರಿತು ಅವರು ತಮ್ಮ ಹಿರಿಯ ಮಗನ ಮೇಲೆ ಸಂಶಯವಿದೆ ಎಂದು ಗ್ರಾಮೀಣ ಠಾಣೆಯಲ್ಲಿ ದೂರು ಕೊಟ್ಟಿದ್ದರು. ದೂರಿನನ್ವಯ ಎಸ್ಪಿ ಸಂಗೀತಾ ಜಿ., ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ಹಾಗೂ ಠಾಣಾಧಿಕಾರಿ ಎಂ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುಳಾ ಸದಾರಿ ಹಾಗೂ ಸಿಬ್ಬಂದಿಯುಳ್ಳ ತನಿಖಾ ತಂಡ ರಚಿಸಲಾಗಿತ್ತು. ತಂಡವು ಪ್ರಕರಣದ ಜಾಡು ಹಿಡಿದು ರೆಹಿಮಾನಸಾಬನನ್ನು ಅಣ್ಣಿಗೇರಿಯ ಅಂಬಿಗೇರ ಕ್ರಾಸ್ ಬಳಿ ವಶಕ್ಕೆ ಪಡೆದು ವಿಚಾರಿಸಿದಾಗ, ಮನೆಯಲ್ಲಿದ್ದ ಅಂದಾಜು 2.40 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ 3.10 ಲಕ್ಷ ನಗದು ಕಳುವು ಮಾಡಿಕೊಂಡು, ಅಣ್ಣಿಗೇರಿ ಸಮೀಪದ ಸೈದಾಪುರ ಗ್ರಾಮದ ಸದ್ದಾಂಹುಸೇನ ಖುದಾವಂದ ಅವರ ದನದ ಕೊಟ್ಟಿಗೆ ಹಿಂದೆ ಮುಚ್ಚಿಟ್ಟಿದ್ದಾಗಿ ಬಾಯಿಬಿಟ್ಟಿದ್ದ. ನಂತರ ಆತನನ್ನು ಕಳುವಿನ ವಸ್ತುಗಳೊಂದಿಗೆ ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. Advertisement
ತನ್ನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಭೂಪ!
04:44 PM Sep 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.