Advertisement

Moon: ಚಂದ್ರನ ಮೇಲೆ ಯಶಸ್ವಿಯಾಗಿಳಿದ ಜಪಾನಿನ ಸ್ಲಿಮ್‌

08:46 PM Jan 20, 2024 | Team Udayavani |

ನವದೆಹಲಿ: ಜಪಾನಿನ ಚಂದ್ರಾಧ್ಯಯನ ನೌಕೆ “ಸ್ಲಿಮ್‌’ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ತಾನು ಎಲ್ಲಿ ನೌಕೆಯನ್ನು ಇಳಿಸಬೇಕೆಂದು ಜಪಾನ್‌ ಅಂದುಕೊಂಡಿತ್ತೋ, ಅದೇ ಜಾಗದ 100 ಮೀಟರ್‌ ಆಸುಪಾಸಲ್ಲಿ ನಿಖರವಾಗಿ ಇಳಿಸಲು ಯಶಸ್ವಿಯಾಗಿದೆ. ಈ ಮೂಲಕ ಸುಗಮವಾಗಿ ಚಂದ್ರನ ಮೇಲಿಳಿದ ಜಗತ್ತಿನ ಐದನೇ ದೇಶ ಎಂಬ ದಾಖಲೆ ನಿರ್ಮಿಸಿದೆ. ಆತಂಕಕಾರಿಯಾದ ಸಂಗತಿಯೇನೆಂದರೆ ನೌಕೆಗೆ ಇಂಧನ ಪೂರೈಸುವ ಸೌರಫ‌ಲಕ ವಿದ್ಯುತ್‌ ಉತ್ಪಾದಿಸಲು ವಿಫ‌ಲವಾಗಿದೆ! ತಕ್ಷಣಕ್ಕೆ ಜಪಾನಿನ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ, ಸ್ಲಿಮ್‌ ಸಂಗ್ರಹಿಸಿರುವ ಮಾಹಿತಿ ತರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ.

Advertisement

ಸದ್ಯ ಬ್ಯಾಟರಿ ಮೂಲಕ ಸ್ಲಿಮ್‌ಗೆ ವಿದ್ಯುತ್‌ ಪೂರೈಕೆಯಾಗುತ್ತಿದೆ, ಈ ಬ್ಯಾಟರಿಯ ಒಟ್ಟಾರೆ ಅವಧಿ ಕೆಲವೇ ಗಂಟೆಗಳು ಮಾತ್ರ. ಆದ್ದರಿಂದ ಜಾಕ್ಸಾ ಅಪಾಯಕಾರಿ ಸಾಹಸಗಳಿಗೆ ಕೈಹಾಕದೇ ಲಭ್ಯವಿರುವ ಮಾಹಿತಿ ಪಡೆಯಲು ಆದ್ಯತೆ ನೀಡಿದೆ. ಸೂರ್ಯನ ಕಿರಣಗಳು ಬೀಳುವ ಕೋನ ಬದಲಾದ ನಂತರ, ಸ್ಲಿಮ್‌ನ ಸೌರಫ‌ಲಕ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ. ಅಷ್ಟಾಗಲೂ ಇನ್ನೂ 30 ದಿನಗಳು ಬೇಕು. ಅಲ್ಲಿಯವರಿಗೆ ಸ್ಲಿಮ್‌ ಉಪಗ್ರಹ ಸಕ್ರಿಯವಾಗಿರುವುದು ಅಸಾಧ್ಯ!

ದಕ್ಷಿಣ ಧ್ರುವದಲ್ಲಿಳಿದ ಮೊದಲ ದೇಶ ಭಾರತ: ಕಳೆದ ವರ್ಷ ಭಾರತದ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಚಂದ್ರನ ಮೇಲಿಳಿದಿತ್ತು. ಅದರ ಮೂಲಕ ಈ ಸಾಧನೆ ಮಾಡಿದ ಜಗತ್ತಿನ 4ನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ದಕ್ಕಿತ್ತು. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿಳಿಸಿದ ಜಗತ್ತಿನ ಮೊದಲ ಭಾರತ ಎನ್ನುವುದು ಇಲ್ಲಿನ ಹೆಗ್ಗಳಿಕೆ.

 

Advertisement

Udayavani is now on Telegram. Click here to join our channel and stay updated with the latest news.

Next