Advertisement
ಹಂಪನಕಟ್ಟೆಯಿಂದ ಬಲ್ಮಠ ಕಡೆಗೆ ಮತ್ತು ಬಂಟ್ಸ್ ಹಾಸ್ಟೆಲ್ ಕಡೆಗೆ ತೆರಳುವವರು ಈ ರಸ್ತೆ ಮೂಲಕ ಹೋಗಬೇಕು. ಹಂಪನಕಟ್ಟೆಯಿಂದ ಜ್ಯೋತಿ ಮೂಲಕ ಬಂಟ್ಸ್ ಹಾಸ್ಟೆಲ್ ಗೆ ತಿರುಗುವ ರಸ್ತೆಯಲ್ಲಿ ಈ ಹೊಂಡ ಇದ್ದು, ವಾಹನ ಚಾಲಕರಿಗೆ ಇಲ್ಲಿ ಹೊಂಡ ಇರುವುದು ಗಮನಕ್ಕೆ ಬರುವುದಿಲ್ಲ. ಅಲ್ಲದೆ ಹಂಪನಕಟ್ಟೆಯಿಂದ ಬಂಟ್ಸ್ ಹಾಸ್ಟೆಲ್‌ಗೆ ಹೋಗಲು ಜ್ಯೋತಿ ವೃತ್ತದ ಬಳಿ ಫ್ರೀ ಲೆಫ್ಟ್ ವ್ಯವಸ್ಥೆ ಇರುವುದರಿಂದ ವಾಹನಗಳೂ ವೇಗವಾಗಿ ಸಂಚರಿಸುತ್ತಿರುತ್ತವೆ. ಆದರೆ ರಸ್ತೆಯ ಬಹುತೇಕ ಭಾಗವನ್ನು ಈ ಹೊಂಡ ಆಕ್ರಮಿಸಿಕೊಳ್ಳುವುದರಿಂದ ವಾಹನ ಚಾಲಕರಿಗೆ ಏಕಾಏಕಿ ಹೊಂಡ ಇರುವುದು ತಿಳಿಯದೆ, ವಾಹನ ನಿಲ್ಲಿಸಲೂ ಸಾಧ್ಯವಾಗದೆ ಬೀಳುವ ಅಪಾಯವೇ ಜಾಸ್ತಿ.
ಒಂದು ವೇಳೆ ಹೊಂಡ ಇದೆ ಎಂದು ಗೊತ್ತಾಗಿ ವಾಹನ ಚಾಲಕರು ಹೊಂಡ ತಪ್ಪಿಸಲೆಂದು ವಾಹನವನ್ನು ಬಲಕ್ಕೆ ಕೊಂಡೊಯ್ದರೆ ಅಲ್ಲಿ ಬಲ್ಮಠ ಕಡೆಗೆ ಹೋಗುವ ವಾಹನಗಳು ಸಾಗುವುದರಿಂದ ಅಲ್ಲೂ ಅಪಾಯವೇ ಉಂಟಾಗುತ್ತದೆ. ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ಇಲ್ಲಿ ಇಂಟರ್ ಲಾಕ್ ಎದ್ದು ಹೋಗಿ ಹೊಂಡ ಸೃಷ್ಟಿಯಾಗಿದ್ದರೂ ಸಂಬಂಧಪಟ್ಟವರು ಈ ಕಡೆ ಗಮನ ಹರಿಸುತ್ತಿಲ್ಲ. ಎದ್ದು ಹೋಗಿರುವ ಇಂಟರ್‌ಲಾಕ್ ಕೂಡ ಅಲ್ಲಲ್ಲಿ ಬಿದ್ದುಕೊಂಡಿರುವುದರಿಂದ ದ್ವಿಚಕ್ರ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಅಪಾಯಕೆ ಆಹ್ವಾನ
ಜ್ಯೋತಿ ವೃತ್ತದ ಬಳಿಯ ತಿರುವಿನಲ್ಲಿ ರಸ್ತೆಯಲ್ಲಿಯೇ ಇಂಟರ್‌ಲಾಕ್ ಎದ್ದು ಹೋಗಿ ಬೃಹದಾಕಾರದ ಹೊಂಡ ಸೃಷ್ಟಿಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.