Advertisement

3ನೇ ದಿನವೂ ಪತ್ತೆಯಾಗದ ಯುವಕನ ಸುಳಿವು

11:12 PM Sep 30, 2019 | Team Udayavani |

ಬಂಟ್ವಾಳ: ಮನೆಯ ಯಜಮಾನನ ಸಾವಿನಿಂದ ನೊಂದು ಸೆ. 28ರಂದು ಪಾಣೆ ಮಂಗಳೂರಿಗೆ ಬಂದು ನದಿಗೆ ಹಾರಿದ್ದ ಕೊಡಗು ಮೂಲದ ಕುಟುಂಬದ ಮೂವರ ಪೈಕಿ ಯುವಕನ ಬಗ್ಗೆ ಸೋಮವಾರವೂ ಸುಳಿವು ಸಿಕ್ಕಿಲ್ಲ. ತಾಯಿ ಮತ್ತು ಮಗಳ ಅಂತ್ಯಕ್ರಿಯೆಯನ್ನು ಮಂಗಳೂರಿನಲ್ಲೇ ನಡೆಸಲಾಗಿದೆ.

Advertisement

ಮೂಲತಃ ಕೊಡಗಿನವರಾಗಿದ್ದು, ಪ್ರಸ್ತುತ ಮೈಸೂರು ಜಿಲ್ಲೆಯ ಸರಸ್ವತಿಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿ.ಎಸ್‌.ನಗರದಲ್ಲಿ ನೆಲೆಸಿದ್ದ ಕವಿತಾ ಮಂದಣ್ಣ (55), ಅವರ ಪುತ್ರ ಕೌಶಿಕ್‌ ಮಂದಣ್ಣ (30) ಹಾಗೂ ಪುತ್ರಿ ಕಲ್ಪಿತಾ ಮಂದಣ್ಣ (20) ಅವರು ನದಿಗೆ ಹಾರಿದ್ದರು.

ನೀರಿಗೆ ಬಿದ್ದ ಸ್ವಲ್ಪ ಹೊತ್ತಿನಲ್ಲೇ ಕವಿತಾರನ್ನು ಮೇಲಕ್ಕೆತ್ತಲಾಗಿತ್ತಾದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕಲ್ಪಿತಾ ಮೃತದೇಹ ಭಾನುವಾರ ಇನೋಳಿ ಸಮೀಪ ಪತ್ತೆಯಾಗಿತ್ತು. ಕೌಶಿಕ್‌ಗಾಗಿ ಹುಡುಕಾಟ ಮುಂದುವರಿದಿದೆ. ಸೋಮವಾರ ಪಾಂಡೇಶ್ವರ ಅಗ್ನಿಶಾಮಕ ದಳದ 6 ಮಂದಿ ಸಿಬ್ಬಂದಿ ತುಂಬೆ ಡ್ಯಾಂನ ಕೆಳಭಾಗದಲ್ಲಿ ಹಾಗೂ ಎನ್‌ಡಿಆರ್‌ಎಫ್‌ನ ಸಿಬ್ಬಂದಿ ಉಳ್ಳಾಲ ಸೇತುವೆ ಪ್ರದೇಶದಲ್ಲಿ ಹುಡುಕಾಡಿದರೂ ಸುಳಿವು ಲಭ್ಯವಾಗಿಲ್ಲ.

ಮಂಗಳೂರಲ್ಲೇ ಅಂತ್ಯಕ್ರಿಯೆ: ತುಂಬೆ ಹಾಗೂ ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹಗಳನ್ನು ಸೋಮವಾರ ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ್ದು, ಕುಟುಂಬದವರು ಮಂಗಳೂರಿನ ಚೆಂಬುಗುಡ್ಡೆಯಲ್ಲೇ ಅಂತ್ಯಕ್ರಿಯೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next