Advertisement
ಪಾಲಿಕೆಯ ಬಜೆಟ್ ಗಾತ್ರ ಹಿಗ್ಗುತ್ತಿದ್ದರೂ ಅನುಷ್ಠಾನ ಮಾತ್ರ ಇಳಿಮುಖವಾಗುತ್ತಿರುವ, ಇಲ್ಲವೇ ಸ್ಥಿರವಾಗಿರುವುದು ಸ್ಪಷ್ಟವಾಗಿದೆ. 2011-12ನೇ ಸಾಲಿನಲ್ಲಿ ಶೇ. 37ರಷ್ಟಿದ್ದ ಬಜೆಟ್ ಅನುಷ್ಠಾನ ಪ್ರಮಾಣ, ಪ್ರಸಕ್ತ ಸಾಲಿನಲ್ಲಿ (ಮಾರ್ಚ್ 31ಕ್ಕೆ 2017-18ನೇ ಸಾಲಿನ ಹಣಕಾಸು ವರ್ಷದ ಅವಧಿ ಮುಗಿಯಲಿದೆ) ಶೇ. 60ಕ್ಕೆ ಏರಿಕೆಯಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.
ಆದರೆ, ಆಸ್ತಿ ತೆರಿಗೆ ಸಂಗ್ರಹ, ರಹಸ್ಯ ಖಾತೆಗಳನ್ನ ರದ್ದುಪಡಿಸಿ ಹಣ ಹಿಂಪಡೆದಿದ್ದು, ಪಾಲಿಕೆಯ ಬ್ಯಾಂಕ್ ಖಾತೆಗಳನ್ನು ಚಾಲ್ತಿಯಿಂದ ಉಳಿತಾಯ ಖಾತೆಗಳಾಗಿ ಪರಿವರ್ತಿಸುವಂತಹ ಕ್ರಮಗಳ ಮೂಲಕ ಪಾಲಿಕೆಯ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ.
Related Articles
Advertisement
ಜತೆಗೆ ಹುಡ್ಕೊà ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಪೈಕಿ 465 ಕೋಟಿ ರೂ. ಮರುಪಾವತಿಸಿದ್ದು, ಯಾವುದೇ ರೀತಿಯ ಹೊಸ ಸಾಲಕ್ಕೆ ಮುಂದಾಗಿಲ್ಲ. ಜತೆಗೆ ಬ್ಯಾಂಕ್ ಖಾತೆಗಳನ್ನು ಉಳಿತಾಯ ಖಾತೆಗಳಾಗಿ ಪರಿವರ್ತಿಸಿದರಿಂದ ಪಾಲಿಕೆಗೆ 104 ಕೋಟಿ ರೂ. ಬಡ್ಡಿ ರೂಪದಲ್ಲಿ ಸಂಗ್ರಹವಾಗಿದೆ.
2017-18ರ ಬಜೆಟ್‌ನಲ್ಲಿ ಆದಾಯ ನಿರೀಕ್ಷೆ (ಕೋಟಿ ರೂ.)-ಆಸ್ತಿ ತೆರಿಗೆ-ಇತರೆ 4199.82
-ಒಎಫ್ಸಿ ಕೇಬಲ್ 350
-ನಗರ ಯೋಜನೆ 461.85
-ಜಾಹೀರಾತು 82.50
-ಘನತ್ಯಾಜ್ಯ ನಿರ್ವಹಣೆ ಕರ 50
-ಕೇಂದ್ರ, ರಾಜ್ಯ ಸರ್ಕಾರದ ಅನುದಾನ 3891.36 ಬಿಬಿಎಂಪಿ ಬಜೆಟ್‌ಗಳ ಅನುಷ್ಠಾನ ವಿವರ
ವರ್ಷ ಬಜೆಟ್ ಗಾತ್ರ ಅನುಷ್ಠಾನ ಶೇಕಡಾವಾರು
-2011-12 9380 3546 37.80
-2012-13 9937 4198 37.65
-2013 -14 8520 4431 42.24
-2014- 15 6500 3402 52.33
-2015- 16 5729 5005 87.36
-2016- 17 9,353 5,611 58
-2017-18 9,816 – 60 (ಅಂದಾಜು) ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಆಡಳಿತ ಬಿಗಿಯಿಲ್ಲದ ಕಾರಣದಿಂದ ಪ್ರಸಕ್ತ ಸಾಲಿನ ಬಜೆಟ್ ಸಮಪರ್ಕವಾಗಿ ಅನುಷ್ಠಾನಗೊಂಡಿಲ್ಲ. ಬಜೆಟ್‌ನಲ್ಲಿ ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆದರೆ, ಈವರೆಗೆ ಅವುಗಳನ್ನು ಅನುಷ್ಠಾನಗೊಳಿಸಲು ಮುಂದಾಗದಿರುವುದು ಅವರಿಗೆ ಮಾಡಿದ ವಂಚನೆಯಾಗಿದೆ. ಇದೀಗ ಸರ್ಕಾರದಿಂದ ಅನುದಾನ ನೀಡದಿದ್ದರೂ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ.
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ ಬಿಬಿಎಂಪಿ * ವೆಂ.ಸುನೀಲ್ ಕುಮಾರ್