Advertisement

ಉತ್ತಮ ಸಮಾಜಕ್ಕಾಗಿ ಧಾರ್ಮಿಕ ಜಾಗೃತಿ ಅಗತ್ಯ

07:25 AM Feb 12, 2019 | |

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಧಾರ್ಮಿಕ ಜಾಗೃತಿ ಅಗತ್ಯ ಎಂದು ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ಹೇಳಿದರು. ಬೆಳಗಾವಿ ಜಿಲ್ಲೆಯ ನಾಂದಿನಿ ಜೈನ ಮಠದ ನೂತನ ಪೀಠಾಧಿಪತಿ ಸ್ವಸ್ತಿ ಶ್ರೀ ಜಿನಸೇನ ಭಟ್ಟಾರಕ ಪಟ್ಟಾ ಚಾರ್ಯ ಮಹಾಸ್ವಾಮೀಜಿಯವರ ಶ್ರವಣಬೆಳಗೊಳ ಪುರ ಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Advertisement

ಗುರುಕುಲಗಳನ್ನು ಆರಂಭಿಸಿ: ಸದಾ ಒಗ್ಗಟ್ಟಿನಿಂದ ಧಾರ್ಮಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವು ದರೊಂದಿಗೆ ಕಾಂತ್ರಿಕಾರರ ಹೆಜ್ಜೆ ಇಟ್ಟ ಶಿಕ್ಷಣ ಸಂಸ್ಥೆಗಳನ್ನು ಪ್ರಾಚೀನ ಪರಂಪರೆಯ ಗುರುಕುಲ ಗಳನ್ನು ಸಮಾಜದ ಹಿತಕ್ಕಾಗಿ ಕೊಡುಗೆಯಾಗಿ ನೀಡಬೇಕಿದೆ ಎಂದರು.

ಬಿಎಸ್ಸಿ ಪದವೀಧರರಾಗಿರುವ ಶ್ರೀಗಳು ಹೊಸದಾಗಿ ಮೂರ್ತಿ, ಬಸದಿಗಳ ನಿರ್ಮಿಸದೇ ಯುವಕರನ್ನು ವಿದ್ಯಾವಂತರನ್ನಾಗಿ ಮಾಡಿ ಉದ್ಯೋಗ ದೊರೆಯು ವಂತೆ ನೋಡಿಕೊಳ್ಳುವುದಲ್ಲದೇ ಸರ್ವರ ಹಿತಕ್ಕಾಗಿ ಆಸ್ಪತ್ರೆ ನಿರ್ಮಾಣ ಮಾಡುವುದರೊಂದಿಗೆ ಧಾರ್ಮಿಕ ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನಿರಂತರವಾಗಿ ಸೇವೆ ನೀಡಲಿದ್ದಾರೆ ಎಂದರು.

ನಾಂದಿನಿ ಶ್ರೀ ಮಠವನ್ನು ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇದೆ. ಈ ನಿಟ್ಟಿನಲ್ಲಿ ಅವರಿಗೆ ಬೇಕಾದ ಎಲ್ಲಾ ಸಲಹೆ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಮಾರ್ಗದರ್ಶನ ಪಡೆಯುವೆ: ನಾಂದಿನ ಮಠದ ನೂತನ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಜಿನಸೇನಾ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಮೊದಲ ಬಾರಿಗೆ ಪೀಠ ಅಲಂಕರಿಸಿದ ನಂತರ ಶ್ರೀಕ್ಷೇತ್ರ ಬೆಳಗೊಳಕ್ಕೆ ಬಂದಿದ್ದು ಸಂತಸ ತಂದಿದೆ. ಮಾತಾಜೀ, ಮುನಿಗಳು ಹಾಗೂ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನ ಪಡೆದು ಉತ್ತಮ ಕಾರ್ಯ ನೆರವೇರಿಸುವುದಾಗಿ ಹೇಳಿದರು.

Advertisement

ಜವಾಬ್ದಾರಿ ಹೆಚ್ಚಿದೆ: ಸಮಾಜವನ್ನು ತಿದ್ದುವ ಜವಾಬ್ದಾರಿ ನಮ್ಮಂತವರ ಮೇಲಿದ್ದು, ಅದನ್ನು ಜವಾಬ್ದಾರಿ ನಿರ್ವಹಿಸುತ್ತೇನೆ. ನಾವು ಆಚಾರ್ಯ ಸುನೀಲ ಸಾಗರ ಮಹಾರಾಜರಿಂದ ದೀಕ್ಷೆ ಪಡೆದು ಮನಿ ಪರಂಪರೆಯಲ್ಲಿ ಸಾಗುವ ಇಚ್ಛೆ ಹೊಂದಿದ್ದೆವು. ಆದರೆ ಈಗ ನಾಂದಿನಿ ಕ್ಷೇತ್ರದ ಭಟ್ಟಾರಕರಾಗಿ ಸೇವೆ ಮಾಡುವಂತೆ ಸಮಾಜ ನೀಡಿರುವ ಜವಾಬ್ದಾರಿಯನ್ನು ಸರ್ವರ ಕಲ್ಯಾಣಕ್ಕಾಗಿ ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದರು.

ಪಾವನ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಉರ್ಜಸಾಗರ ಮಹಾರಾಜರು ಆಶೀರ್ವಚನ ನೀಡಿದರು. ವೇದಿಕೆ ಯಲ್ಲಿ ಉಪಾಧ್ಯಾಯ ಉರ್ಜನ್‌ ಸಾಗರ ಮಹಾ ರಾಜರು, ಮಾತಾಜಿಯವರು ಉಪಸ್ಥಿತರಿದ್ದರು.

ಪುರಪ್ರವೇಶ ಸಮಾರಂಭದಲ್ಲಿ ರಾಜ್ಯ ಜೈನ ಆಸೋಸಿಯೇಷನ್‌ ಅಧ್ಯಕ್ಷ ಎಸ್‌. ಜಿತೇಂದ್ರಕುಮಾರ್‌, ಮಹಾಮಸ್ತಕಾಭೀಷೇಕ ಮಹೋತ್ಸ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿದ್ದ ಸರಿತ ಮಹೇಂದ್ರಕುಮಾರ್‌ ಜೈನ್‌, ಶ್ರವಣಬೆಳಗೊಳ ದಿಗಂಬರ ಜೈನ ಸಮಾಜದ ಮತ್ತು ಕೂಷ್ಮಾಂಡಿನಿ ಮಹಿಳಾ ಸಮಾಜದ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next