Advertisement

ಬರಹಗಾರರಿಗೊಂದು ವೇದಿಕೆ

11:53 AM Jun 21, 2019 | Lakshmi GovindaRaj |

ಸಿನಿಮಾವೊಂದಕ್ಕೆ ಬರಹಗಾರ ತುಂಬಾ ಮುಖ್ಯವಾಗುತ್ತಾನೆ. ಒಂದು ಸಿನಿಮಾದ ನಿಜವಾದ ಸತ್ವ ಆತನ ಕೈಯಲ್ಲಿರುತ್ತದೆ. ಆದರೆ, ಎಷ್ಟೋ ಬಾರಿ ಆ ಬರಹಗಾರನೇ ಸಿನಿಮಾ ತಂಡದಲ್ಲಿ ಮೂಲೆಗುಂಪಾಗಿರುತ್ತಾನೆ. ಅಪೂರ್ಣ ಸ್ಕ್ರಿಪ್ಟ್ನೊಂದಿಗೆ ಸಿನಿಮಾ ಮಾಡಿ, ಅದೆಷ್ಟೋ ಸಿನಿಮಾಗಳು ಸೋತಿವೆ. ಆದರೆ, ನಿರ್ಮಾಪಕ ಕೆ.ಮಂಜು ಪ್ರತಿಭಾನ್ವಿತ ಬರಹಗಾರರಿಗೆ ವೇದಿಕೆ ಸಿನಿಮಾದಲ್ಲಿ ವೇದಿಕೆ ಕಲ್ಪಿಸಲು ಮುಂದಾಗಿದ್ದಾರೆ.

Advertisement

ಅದಕ್ಕಾಗಿ ಅವರು “ಕೆ.ಮಂಜು ಸ್ಕ್ರಿಪ್ಟ್’ ಎಂಬ ಯೋಜನೆ ಹೆಸರಿನಲ್ಲಿ ಲೇಖಕರಿಂದ ಸ್ವರಚಿತ ಸ್ಕ್ರಿಪ್ಟ್ಗಳನ್ನು ಆಹ್ವಾನಿಸಲಾಗಿದೆ. ಈ ಸ್ಕ್ರಿಪ್ಟ್ಗಳನ್ನು ನಿರ್ಮಾಪಕರು, ನಿರ್ದೇಶಕರನ್ನೊಳಗೊಂಡ ತಂಡವೂ ಪರಿಶೀಲನೆ ನಡೆಸಿ, ಅತ್ಯುತ್ತಮ ಎನಿಒಸಿದ ಸ್ಕ್ರಿಪ್ಟ್ಗಳನ್ನು ಕೆ.ಮಂಜು ಅವರ ಖರೀದಿಸಿ ಸಿನಿಮಾ ಮಾಡಲಿದ್ದಾರೆ. ಈ ಯೋಜನೆಗೆ ಒಂದಷ್ಟು ಷರತ್ತುಗಳನ್ನು ಕೂಡಾ ವಿಧಿಸಲಾಗಿದೆ.

ಲೇಖಕರು ಯಾವುದೇ ಕಾದಂಬರಿ, ನಾಟಕ ಆಧರಿಸಿದ ಅಥವಾ ಇನ್ಯಾವುದೇ ರೀತಿಯಲ್ಲಿ ಅವಲಂಭಿತವಾದ ಕಥೆಗಳನ್ನು ಸಲ್ಲಿಸುವಂತಿಲ್ಲ. ಸ್ವರಚಿತ ಕಥೆಗಳಿಗಷ್ಟೇ ಆಹ್ವಾನ. ಸ್ಕ್ರಿಪ್ಟ್ನಲ್ಲಿ ಸಂಭಾಷಣೆ ಕಡ್ಡಾಯವೇನಲ್ಲ. ಕೈ ಬರಹದ ಸ್ಕ್ರಿಪ್ಟ್ಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಚಿತ್ರಕಥೆ ಕನ್ನಡದಲ್ಲೇ ಇರಬೇಕು. ಒಬ್ಬರಿಗೆ ಒಂದೇ ಸ್ಕ್ರಿಪ್ಟ್ ಕಳುಹಿಸುವ ಅವಕಾಶವಿರುತ್ತದೆ.

ಆಯ್ಕೆಯಾದ ಚಿತ್ರಕಥೆಗೆ ನಿರ್ಮಾಪಕ ಕೆ.ಮಂಜು ಅವರು ಒಂದು ಲಕ್ಷ ರೂಪಾಯಿ ನೀಡುವ ಜೊತೆಗೆ ಅದರ ಹಕ್ಕುಸ್ವಾಮ್ಯವೂ ಅವರ ಬಳಿಯೇ ಇರಲಿದೆ. ಜುಲೈ 15ರ ಒಳಗಾಗಿ ಸ್ಕ್ರಿಪ್ಟ್ ಕಳುಹಿಸಬೇಕು ಎಂದು ಕೆ.ಮಂಜು ತಿಳಿಸಿದ್ದಾರೆ. ಈ ಮೂಲಕ ಕೆ.ಮಂಜು ಅವರು ಮುಂದಿನ ದಿನಗಳಲ್ಲಿ ಸ್ವರಚಿತ ಕಥೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next