Advertisement

ಕೊಂಚ ಎಡವಿದರೆ ವಾಹನ ಸವಾರರ ಜೀವಕ್ಕೆ ಆಪತ್ತು

01:10 AM Jul 07, 2020 | Sriram |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ  ಸಂಪರ್ಕದ ಗ್ರಾಮೀಣ ರಸ್ತೆಯ ಕೊೖಕೂರು ಬೊಬ್ಬರ್ಯ ದೇವಸ್ಥಾನದ ಸಮೀಪ ರಸ್ತೆಗೆ ತಾಗಿಕೊಂಡು ಅಪಾಯಕಾರಿ ಕೆರೆಯೊಂದಿದ್ದು ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ದೊಡ್ಡ ಮಟ್ಟದ ಅವಘಡ ಎದು ರಾಗುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ಪ್ರತಿ ದಿನ ನೂರಾರು ಮಂದಿ ಸಂಚರಿಸುತ್ತಾರೆ ಹಾಗೂ ಶಾಲಾ ಬಸ್ಸು ಸೇರಿದಂತೆ ಕಾರು, ಲಾರಿ ಮುಂತಾದ ವಾಹನಗಳು ಓಡಾಡುತ್ತವೆ. ಮಳೆಗಾಲ ದಲ್ಲಿ ಕೆರೆಯಲ್ಲಿ ಸುಮಾರು 15-20 ಅಡಿ ನೀರು ತುಂಬಿರುವುದರಿಂದ ಕೊಂಚ ಎಚ್ಚರ ತಪ್ಪಿದರೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇರುತ್ತದೆ.

Advertisement

ರಾತ್ರಿ ವೇಳೆ ಹೆಚ್ಚಿನ ಅಪಾಯ
ಕೆರೆಯ ಅಕ್ಕ-ಪಕ್ಕದಲ್ಲಿ ಸರಿ ಯಾದ ಬೀದಿದೀಪದ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿಯ ವೇಳೆ ಕೆರೆಯ ಇರುವಿಕೆ ಗಮನಕ್ಕೆ ಬರುವುದಿಲ್ಲ ಹಾಗೂ ಹೊಸದಾಗಿ ಈ ರಸ್ತೆಯ ಮೂಲಕ ಪ್ರಯಾಣಿಸು ವವರಿಗೆ ಕೆರೆಯ ಮಾಹಿತಿ ಇಲ್ಲದೆ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ.

ತಡೆಗೋಡೆಗೆ ಮನವಿ
ಸಮಸ್ಯೆಯ ಕುರಿತು ಸ್ಥಳೀಯರು ಒಂದೆರಡು ಬಾರಿ ಜನಪ್ರತಿನಿಧಿಗಳ ಗಮನಸೆಳೆದಿದ್ದರೂ ಹೆಚ್ಚಿನ ಪ್ರಯೋ ಜನವಾಗಿಲ್ಲ. ಮುಂದೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಪರಿಶೀಲಿಸಲಾಗುವುದು
ಸಮಸ್ಯೆಯ ಕುರಿತು ಇದುವರೆಗೆ ಗಮನಕ್ಕೆ ಬಂದಿರಲಿಲ್ಲ. ಶೀಘ್ರದಲ್ಲಿ ಸ್ಥಳ ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಕ್ರಮದ ಕುರಿತು ವರದಿ ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಸಲ್ಲಿಸಲಾಗುವುದು.
-ಸುರೇಶ್‌ ಬಂಗೇರ, ಪಿಡಿಒ ಕೋಟ

ಅಪಾಯ ಖಂಡಿತ
ಗ್ರಾಮೀಣ ಮುಖ್ಯರಸ್ತೆಯ ಪಕ್ಕದಲ್ಲೇ ಕೆರೆ ಇರುವುದರಿಂದ ಮುಂದೊಂದು ದಿನ ಅಪಾಯ ಖಂಡಿತ. ತಡೆಗೋಡೆ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎನ್ನುವುದು ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಗ್ರಾಮಸ್ಥರ ವಿನಂತಿಯಾಗಿದೆ.
-ಕೊೖಕೂರು ಜಯಕರ ಶೆಟ್ಟಿ, ನಿವೃತ್ತ ಶಿಕ್ಷಕ, ಸ್ಥಳೀಯ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next