Advertisement

Karkala ಬೈಕ್‌ಗೆ ಅಡ್ಡ ಬಂದ ನಾಯಿ: ನವವಿವಾಹಿತೆ ಬಿದ್ದು ಸಾವು

10:09 PM Jun 29, 2024 | Team Udayavani |

ಕಾರ್ಕಳ: ದಂಪತಿ ಸಂಚರಿಸುತ್ತಿದ್ದ ಬೈಕಿಗೆ ನಾಯಿ ಅಡ್ಡ ಬಂದ ಕಾರಣ ನವವಿವಾಹಿತೆ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಹೊಸ್ಮಾರಿನಲ್ಲಿ ಜೂ. 28ರಂದು ಸಂಭವಿಸಿದೆ.

Advertisement

ಈದು ಗ್ರಾಮದ ಕರೆಂಬ್ಯಾಲುವಿನ ವಿಶಾಲ್‌ ಅವರ ಪತ್ನಿ ನೀಕ್ಷಾ (26) ಮೃತ‌ಪಟ್ಟವರು.ವಿಶಾಲ್‌ – ನೀಕ್ಷಾ ಅವರ ವಿವಾಹ 2 ತಿಂಗಳ ಹಿಂದೆ ನೆರವೇರಿತ್ತು.

ನವದಂಪತಿ ಶುಕ್ರವಾರ ಸಂಜೆ ಗುರುವಾಯನಕೆರೆ – ಕಾರ್ಕಳ ರಸ್ತೆಯಲ್ಲಿ ಸಾಗುತ್ತಿದ್ದಾಗ ಹೊಸ್ಮಾರು ಸೇತುವೆ ಬಳಿ ನಾಯಿ ಅಡ್ಡ ಬಂದು ಬೈಕ್‌ ಉರುಳಿಬಿದ್ದಿತು.

ಗಂಭೀರ ಗಾಯಗೊಂಡ ನೀಕ್ಷಾ ಅವರನ್ನು ಕಾರ್ಕಳದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಅವರ ತಂದೆ ಕೂಡ 9 ತಿಂಗಳ ಹಿಂದೆ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next