Advertisement

Udayavani Campaign: ಕಾರ್ಕಳ-ಮೊದಲು 70, ಈಗ 20!

02:44 PM Jun 25, 2024 | Team Udayavani |

ಕಾರ್ಕಳ: ಕಾರ್ಕಳ ತಾಲೂಕಿನ ಹಲವು ಹಳ್ಳಿ ಗಳು ಇದುವರೆಗೂ ಬಸ್‌ ಕಂಡಿಲ್ಲ. ಹೀಗಾಗಿ ಮಕ್ಕಳು ಶಾಲೆಗಳಿಗೆ ಹೋಗಲು ನಡಿಗೆ, ಖಾಸಗಿ ವಾಹನ ಇವುಗಳನ್ನೇ ಅವಲಂಬಿಸಿದ್ದಾರೆ. ತಾಲೂಕಿನ 55 ಹಳ್ಳಿಗಳಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ಮಕ್ಕಳು ಹತ್ತಾರು ವರ್ಷಗಳಿಂದ ಶಿಕ್ಷಣಕ್ಕೆ ಕಷ್ಟಪಡುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ಹೆದ್ದಾರಿ ಬಿಟ್ಟರೆ ಹಳ್ಳಿಗಳ ಪ್ರಮುಖ
ಸ್ಥಳಗಳಿಗಷ್ಟೆ ಖಾಸಗಿ ಬಸ್ಸು ಬರುತ್ತಿದೆ. ಅಲ್ಲಿ ವರೆಗೆ ಮತ್ತು ಅಲ್ಲಿಂದ ದಿನಾ ನಡೆಯುವುದು ಕಡ್ಡಾಯವಾಗಿದೆ.

Advertisement

ತುಂಬಿದ ಬಸ್ಸಲ್ಲಿ ಮಕ್ಕಳ ಜೋಕಾಲಿ
ಹಳ್ಳಿಗಳ ಸಹಸ್ರಾರು ಮಕ್ಕಳು ಇಂದಿಗೂ ಖಾಸಗಿ ಬಸ್ಸುಗಳಲ್ಲಿ ನೇತಾಡಿಕೊಂಡೇ ಬೆಳಗ್ಗೆ ಸಂಜೆ ಹೋಗುತ್ತಿರುತ್ತಾರೆ. ಇದುವ ಒಂದೆರಡು ಬಸ್‌ ತುಂಬಿ ತುಳುಕುತ್ತಿರುತ್ತದೆ. ಗ್ರಾಮಗಳಿಗೆ ಬರುವ ಸೀಮಿತ ಬಸ್ಸು ತಪ್ಪಿದರೆ ಮತ್ತೆ ಅಟೋ, ಖಾಸಗಿ ವಾಹನವನ್ನು ಬಾಡಿಗೆ ಪಡೆದು ಶಾಲೆ ಸೇರಬೇಕು. ಕೆಲವೊಮ್ಮೆ ಸ್ವಂತ ವಾಹವಿರುವ ಪೋಷಕರೇ ಮಕ್ಕಳನ್ನು ಶಾಲಾ ಗೇಟಿನ ತನಕವೂ ಬಿಟ್ಟು ಬರಬೇಕು. ನೆಲ್ಲಿಗುಡ್ಡೆ, ಕಲ್ಕರ್‌, ಕುಂಟಾಡಿ, ಮಲ್ಲೈ„ಬೆಟ್ಟು, ಕಾಂತಾವರ, ಬೇಲಾಡಿ, ಮಾಳ, ಹುಕ್ರಟ್ಟೆ, ಶಿರ್ಲಾಲು, ಅಂಡಾರು, ಯರ್ಲಪ್ಪಾಡಿ, ನಕ್ರೆ ಈ ಭಾಗದ ಗ್ರಾಮೀಣ ಮಕ್ಕಳಿಗೆ ಸಮಸ್ಯೆ ತೀವ್ರವಾ ಗಿದೆ.

70 ಇದ್ದಿದ್ದು ಈಗ 20ರ ಆಸುಪಾಸಿಗೆ
ಕೊರೊನಾ ಪೂರ್ವದಲ್ಲಿ ಗ್ರಾಮಾಂತರಕ್ಕೆ ಸುಮಾರು 70 ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ 20ರ ಆಸುಪಾಸಿನಲ್ಲಿದೆ. ಸಂಜೆ 6 ಗಂಟೆ ಬಳಿಕವಂತೂ ಗ್ರಾಮೀಣ ಭಾಗಕ್ಕೆ ಬಸ್ಸುಗಳೇ ಇಲ್ಲ. ಕತ್ತಲಾಗುವ ಮುಂಚಿತ ಮನೆ ಸೇರದಿದ್ದರೆ ಮನೆಯಲ್ಲಿರುವ ಹಿರಿಯ ಜೀವಗಳಲ್ಲಿ ಭಯ, ನಡುಕ, ಆತಂಕ ಶುರುವಾಗುತ್ತದೆ. ಮಕ್ಕಳು ಮನೆ ಸೇರಿದಾಗಲೇ ಬಿಗಿ ಹಿಡಿದ ಉಸಿರು ಬಿಡುತ್ತಾರೆ.

6ನೇ ತರಗತಿ ಬಳಿಕದ ಮಕ್ಕಳ ಸ್ಥಿತಿ ಹರೋಹರ
ಕುಕ್ಕುಜೆ ಗ್ರಾಮದಲ್ಲಿ ದೊಂಡೆರಂಗಡಿಯಿಂದ ಕುಕ್ಕುಜೆ ವರೆಗೆ ಯಾವುದೇ ಬಸ್‌ ಇರುವುದಿಲ್ಲ. ಈ ಭಾಗದ 6 ನೇ ತರಗತಿಯ ನಂತರ
ವಿದ್ಯಾರ್ಥಿಗಳು 4 ರಿಂದ 5 ಕಿ. ಮೀ. ನಡೆದುಕೊಂಡೆ ಹೋಗುವಂತ ಪರಿಸ್ಥಿತಿಯಿದೆ. ರಾತ್ರಿ ಕೆಲವೊಮ್ಮೆ ತಡವಾದಾಗ ಮನೆಯಿಂದ
ಹೆತ್ತವರು ಟಾರ್ಚ್‌ ಹಿಡಿದುಕೊಂಡು ಬಂದು ಕರೆದುಕೊಂಡು ಹೋಗಬೇಕಾಗುತ್ತದೆ. ಕನಿಷ್ಠ ಒಂದು ಸರಕಾರಿ ಬಸ್‌ ಅನ್ನು ದೊಂಡೆರಂಗಡಿ – ಕುಕ್ಕುಜೆ – ಪೆಲತ್ತಕಟ್ಟೆ ಮಾರ್ಗದಲ್ಲಿ ಹಾಕಬೇಕು ಎನ್ನುತ್ತಾರೆ ಈ ಭಾಗದ ಕಾಲೇಜು ವಿದ್ಯಾರ್ಥಿನಿ ಸುಷ್ಮಾ.

ಸೂಡದಂತಹ ಕುಗ್ರಾಮ ಗುರುತಿಸಿ
ನಮ್ಮೂರಿಗೆ ಬೆಳಗ್ಗೆ 2ರಿಂದ 3 ಬಸ್ಸುಗಳು ಬರುತ್ತವೆ, ಅವುಗಳನ್ನು ನಂಬಿ ಕೂರುವ ಹಾಗೆಯೂ ಇಲ್ಲ. ಸಂಜೆ ಅಂದ್ರೆ ಶಾಲೆ
ಬಿಡುವ ಹೊತ್ತಿಗೆ ಬಸ್‌ ವ್ಯವಸ್ಥೆಯೇ ಇಲ್ಲವಾಗಿದ್ದು, ಬಸ್‌ ನಿಂದ ಇಳಿದು 2 ಕಿ. ಮೀ. ನಡೆಯಬೇಕಾಗಿದೆ. ಮಳೆಗಾಲದಲ್ಲಿ
ಕಾಲ್ನಡಿಗೆ ಪಯಣ ಕಷ್ಟಸಾಧ್ಯವಾದರೂ ಅನಿವಾರ್ಯವಾಗಿದೆ. ವಿಶೇಷವಾಗಿ ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೆ, ಸಣ್ಣ ಮಕ್ಕಳಿಗೆ ತುಂಬಾ ಕಷ್ಟವಾಗುತ್ತದೆ ಎನ್ನುತ್ತಾರೆ ಸೂಡ ಗ್ರಾಮದ ಬಿಎಸ್ಸಿ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ.

Advertisement

ಕಾರ್ಕಳ-ಉಡುಪಿ ಬಸ್‌ ಟ್ರಿಪ್‌ ಕಟ್‌ ಮಾಡಿ ಹಳ್ಳಿಗಳ ಕಡೆ ಹೋಗಿ ಬರಲಿ
ಕಾರ್ಕಳ-ಉಡುಪಿ ಮಧ್ಯೆ ಖಾಸಗಿ, ಸರಕಾರಿ ಬಸ್ಸು ಇವುಗಳ ಪೈಕಿ ಐದು ನಿಮಿಷಕ್ಕೊಂದು ಬಸ್ಸು ಓಡಾಡುತ್ತಿರುತ್ತದೆ. ಅನೇಕ ಬಾರಿ ಬಸ್ಸುಗಳು ಖಾಲಿ ಓಡಾಡುತ್ತಿರುತ್ತವೆ. ಇದರ ಮಧ್ಯೆ ತಾಸುಗಟ್ಟಲೆ ವಿಶ್ರಾಂತಿಯಲ್ಲಿ ಅನೇಕ ಬಸ್ಸುಗಳು ನಿಂತಿರುತ್ತವೆ. ಇದೇ ಸಮಯವನ್ನು ಟ್ರಿಪ್‌ ಕಟ್‌ ಮಾಡಿ ಹಳ್ಳಿಗಳ ಒಳರೂಟ್‌ಗಳಲ್ಲಿ ಒಂದೊಂದು ಟ್ರಿಪ್‌ ಹೋಗಿ ಬಂದರೂ ಇಲ್ಲಿನ ಗಂಬೀರ ಬಸ್‌ ಸಮಸ್ಯೆ ಬಗೆಹರಿಯುತ್ತದೆ. ಮಕ್ಕಳಿಗೆ ಶಾಲೆಗೆ ಬರಲು, ಮನೆಗೆ ಹೋಗಲು ನುಕೂಲವಾಗುತ್ತದೆ. ಎನ್ನುವುದು ಪೋಷಕರಲ್ಲೊಬ್ಬರಾದ ಶ್ರೀನಿವಾಸ್‌ ಕಾಮತ್‌ ಅವರ ಸಲಹೆಯಾಗಿದೆ.

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next