Advertisement

Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ

12:21 AM Jul 03, 2024 | Team Udayavani |

ಕುಂದಾಪುರ/ಬೈಂದೂರು: ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ದಿಲ್ಲಿಯಲ್ಲಿ ಮಂಗಳವಾರ ಭೇಟಿಯಾದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ – ಶೃಂಗೇರಿ – ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ ಮಾಡಿದರು.

Advertisement

ದಶಕದ ಹಿಂದೆ ಮಲೆನಾಡು ಕರಾವಳಿ ಸಂಪರ್ಕಿಸುವ ಈ ಯೋಜನೆಯ ಸಮೀಕ್ಷೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ಅನಂತರ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಈ ಉದ್ದೇಶಿತ ಯೋಜನೆಯು ಮಲೆನಾಡು ಪ್ರದೇಶದಿಂದ ಕರಾವಳಿ ಕರ್ನಾಟಕಕ್ಕೆ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಮಂಜೂರಾತಿ ನೀಡುವಂತೆ ಸಂಸದರು ಇದೇ ವೇಳೆ ಸಚಿವರಿಗೆ ಮನವಿ ಮಾಡಿದ್ದಾರೆ.

ತಿರುನೆಲ್ವೇಲಿ, ಎರ್ನಾಕುಲಂ ರೈಲು
ನಿಲುಗಡೆಗೆ ಮನವಿ
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಹೆಚ್ಚಿನ ರೈಲುಗಳ ನಿಲುಗಡೆಯಾಗಬೇಕಿದೆ. ಕೇರಳ ಮತ್ತು ತಮಿಳುನಾಡಿನಿಂದ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ ದಾದರ್‌ ಸೆಂಟ್ರಲ್‌-ತಿರುನೆಲ್ವೇಲಿ-ದಾದರ್‌ (ಸಂ. 22629/22630) ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು (ಸಾಪ್ತಾಹಿಕ) ಮತ್ತು ಎರ್ನಾಕುಲಂ-ಹಜರತ್‌ ನಿಜಾಮುದ್ದೀನ್‌- ಎರ್ನಾಕುಲಂ (ಸಂ. 12617/12618 ) ಮಂಗಳಾ ಲಕ್ಷದ್ವೀಪ್‌ ಎಕ್ಸ್‌ಪ್ರೆಸ್‌ (ಕೆ.ಆರ್‌.ಸಿ.ಎಲ್‌. ನಿತ್ಯ) ರೈಲು ನಿಲುಗಡೆಯನ್ನು ಮಂಜೂರು ಮಾಡುವಂತೆ ವಿನಂತಿಸಿದರು. ಕೊಂಕಣ್‌ ರೈಲ್ವೇ ಸಹ ಈ ರೈಲುಗಳಿಗೆ ನಿಲುಗಡೆ ನೀಡಲು ರೈಲ್ವೇ ಮಂಡಳಿಗೆ ಶಿಫಾರಸ್ಸು ಮಾಡಿದೆ.

ಸೇನಾಪುರ: ಹೆಚ್ಚಿನ ರೈಲು ನಿಲುಗಡೆಗೆ ಮನವಿ
ಸೇನಾಪುರ ರೈಲು ನಿಲ್ದಾಣವು ಉಡುಪಿಯ ಪ್ರಮುಖ ರೈಲು ನಿಲ್ದಾಣವಾಗಿದ್ದು, ಸುತ್ತಮುತ್ತಲಿನ ಜನರು ಸೇನಾಪುರದಿಂದ ದೂರದಲ್ಲಿರುವ ಮೂಕಾಂಬಿಕಾ ರಸ್ತೆ ಅಥವಾ ಕುಂದಾಪುರ ರೈಲು ನಿಲ್ದಾಣದಲ್ಲಿ ರೈಲುಗಳನ್ನು ಹತ್ತುವ ಮೂಲಕ ಬೆಂಗಳೂರು, ಮುಂಬಯಿಗೆ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಸೇನಾಪುರ ರೈಲು ನಿಲ್ದಾಣದಲ್ಲಿ ಮಂಗಳೂರು ಮತ್ತು ಮುಂಬಯಿ ನಡುವೆ ಸಂಚರಿಸುವ ಮತ್ಸÂಗಂಧ ಸೂಪರ್‌ ಫಾಸ್ಟ್‌ (ಸಂ.12619/20) ಎಕ್ಸ್‌ಪ್ರೆಸ್‌ ಹಾಗೂ ಕಾರವಾರ – ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ (ಸಂ. 16595/96) ಸೇನಾಪುರದಲ್ಲಿ ನಿಲುಗಡೆ ಒದಗಿಸುವಂತೆ ಸಹ ಇದೇ ಸಂದರ್ಭದಲ್ಲಿ ಸಚಿವರನ್ನು ಮನವಿ ಮಾಡಿಕೊಂಡರು.ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next