Advertisement

ಮುಂಡ್ಕೂರು: ರಸ್ತೆಯಲ್ಲಿ ಬೃಹತ್‌ ಹೊಂಡ- ವಾಹನ ಸಂಚಾರಕ್ಕೆ ಕಿರಿಕಿರಿ

03:17 PM Jun 25, 2024 | Team Udayavani |

ಬೆಳ್ಮಣ್‌: ಮುಂಡ್ಕೂರು ಪಡಿತ್ತಾರು ಕಿರು ಸೇತುವೆ ನವೀಕರಣಗೊಂಡರೂ ಮತ್ತೆ ಗುಂಡಿ ಬಿದ್ದ ಪರಿಣಾಮ ಸಂಚಾರ ದುಸ್ತರವಾಗಿದೆ. ಮುಂಡ್ಕೂರು ಪೇಟೆಯಿಂದ ಕಿನ್ನಿಗೋಳಿ ಸಾಗುವ ದಾರಿಯಲ್ಲಿ ಹೆದ್ದಾರಿಯಲ್ಲೇ ಪಡಿತ್ತಾರು ಬಳಿ ಇದ್ದ ಹಳೆಯದಾದ ಮೋರಿ ಹಲವು ವರ್ಷಗಳಿಂದ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು, ಜತೆಯ ಮೋರಿಯ ಸಿಮೆಂಟ್‌ ಸ್ಲ್ಯಾಬ್‌ ಎಲ್ಲವೂ ಎದ್ದು ಮೋರಿಯು ಕುಸಿತ ಉಂಟಾಗಿತ್ತು.

Advertisement

ಆ ಬಳಿಕ ಉದಯವಾಣಿಯ ಸಕಾಲಿಕ ವರದಿ ಬಳಿಕ ನೂತನ ಕಿರು ಸೇತುವೆ ನಿರ್ಮಾಣಗೊಂಡರೂ ಸಮಸ್ಯೆ ಮಾತ್ರ ತಪ್ಪಿಲ್ಲ.
ಕಿರು ಸೇತುವೆ ನಿರ್ಮಾಣಗೊಂಡು ಹಲವು ಸಮಯಗಳು ಕಳೆದರೂ ಎರಡೂ ಭಾಗದ ರಸ್ತೆಯನ್ನು ಸಂಪರ್ಕಿಸುವಲ್ಲಿ ಸಮತಟ್ಟು ಮಾಡದ ಹಿನ್ನೆಲೆಯಲ್ಲಿ ಮೋರಿ ನಿರ್ಮಿಸಿದ ಜಾಗದಲ್ಲಿ ಬೃಹತ್‌ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ. ಬೆಳ್ಮಣ್‌ನಿಂದ ಸಂಪರ್ಕವನ್ನು ಪಡೆದು ಕಿನ್ನಿಗೋಳಿ, ಕಟೀಲು, ಮೂಡುಬಿದಿರೆ ಸಹಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಹೆಚ್ಚಿನ ವಾಹನ ಸವಾರರು ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ.

ಬೆಳ್ಮಣ್‌ನಿಂದ ಮುಂಡ್ಕೂರು ಜೈನ್‌ ಪೇಟೆಯ ವರೆಗೆ ರಸ್ತೆಯು ಇತ್ತೀಚೆಗೆ ವಿಸ್ತರಣೆಗೊಂಡು ಡಾಮರೀಕರಣಗೊಂಡಿದ್ದು ಮುಂಡ್ಕೂರು ಪೇಟೆ ಪ್ರದೇಶದಲ್ಲಿ ಮಾತ್ರ ಇನ್ನೂ ವಿಸ್ತರಣೆ ಕಾಮಗಾರಿ ನಡೆದಿಲ್ಲ. ಹಾಗೂ ಸಂಕಲಕರಿಯದಿಂದ
ಪಡಿತ್ತಾರು ವರೆಗೆ ರಸ್ತೆಯೂ ಸುಂದರಗೊಂಡಿದೆ. ಆದರೆ ಹೊಸದಾಗಿ ನಿರ್ಮಾಣಗೊಂಡ ಕಿರು ಸೇತುವೆಯ ಪ್ರದೇಶದಲ್ಲಿ ಮಾತ್ರ ವಾಹನ ಸವಾರರು ಹೊಂಡಕ್ಕೆ ಬಿದ್ದು ಎಡವಟ್ಟು ಮಾಡಿಕೊಳ್ಳುವುದು ನಿರಂತರವಾಗಿದೆ.

ಸಂಪೂರ್ಣ ಕೆಸರುಮಯ
ಹೊಂಡದಲ್ಲಿ ಕೆಸರು ನೀರು ನಿಂತಿದ್ದು ಕಾರು, ಬಸ್ಸು, ಲಾರಿಯಂತಹ ವಾಹನಗಳು ಓಡಾಡುವ ಸಂದರ್ಭದಲ್ಲಿ ದಾರಿಯಲ್ಲಿ ನಡೆದುಕೊಂಡು ಸಾಗುವ ದಾರಿಹೋಕರು, ಶಾಲಾ ಮಕ್ಕಳ ಸಹಿತ ಬೈಕ್‌ ಸವಾರರ ಮೇಲೆಯೂ ಕೆಸರು ನೀರಿನ ಸಿಂಚನವಾಗುತ್ತದೆ. ಹಲವು ತಿಂಗಳಿಂದ ನಿತ್ಯ ಈ ಭಾಗದ ಜನ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ಸ್ಥಳೀಯಾಡಳಿತ ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪ.

ಎರಡೂ ಕಡೆಯಿಂದ ರಸ್ತೆ ಚೆನ್ನಾಗಿದೆ; ಮಧ್ಯದಲ್ಲಿ ಗುಂಡಿ  ಎರಡೂ ಕಡೆಗಳಿಂದ ರಸ್ತೆಯೂ ಸುಂದರವಾಗಿದೆ ಎಂದು ವೇಗವಾಗಿ ಬರುವ ವಾಹನ ಸವಾರರು  ಪಡಿತ್ತಾರು ಬಳಿಯ ಈ ಕಿರು ಸೇತುವೆಯ ಬಳಿ ಹೊಂಡಗಳ ಗೊತ್ತು ಗುರಿ ಇಲ್ಲದೆ ಸಮಸ್ಯೆಗಳು ಎದುರಾಗುತ್ತಿದೆ. ಹೊಸದಾಗಿ ಈ ಭಾಗದ ರಸ್ತೆಯಲ್ಲಿ ಪ್ರಯಾಣಿಸುವ ಬೆ„ಕ್‌ ಸವಾರರಂತೂ ಮೋರಿಯ ಹೊಂಡದಿಂದ ಬಿದ್ದು ಗಾಯಗೊಂಡ ನಿದರ್ಶನ ಸಾಕಷ್ಟಿವೆ. ಇಲ್ಲಿ ಸೇತುವೆ ನಿರ್ಮಾಣ ಮಾಡಿದ ಸಮೀಪದ ಅಗೆದು ಹಾಕಿರುವ
ಗುಂಡಿಯೂ ಹಾಗೆಯೇ ಇದ್ದು ದಿನೇ ದಿನೇ ರಸ್ತೆಯ ಹೊಂಡ ದೊಡ್ಡದಾಗುತ್ತಿದ್ದು, ವಾಹನ ಸವಾರು ಸಂಕಟವನ್ನು ಅನುಭವಿಸುವಂತಾಗಿದೆ.

Advertisement

ಕಾಮಗಾರಿ ನಡೆದು ಹಲವು ಸಮಯ ಕಳೆದರೂ ರಸ್ತೆಯ ಹೊಂಡವನ್ನು ಸರಿಪಡಿಸುವಲ್ಲಿ ಗುತ್ತಿಗೆದಾರರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮೋರಿಯ ನಿರ್ಮಾಣ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

*ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next