Advertisement

ಭತ್ತ ಬೆಳೆಯುವ ಪ್ರಮಾಣ ಇಳಿಕೆ: ಕೇಂದ್ರ ಸಿದ್ಧಪಡಿಸಿದ ಮಾಹಿತಿಯಲ್ಲಿ ಉಲ್ಲೇಖ

07:53 PM Jul 26, 2022 | Team Udayavani |

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ತೃಪ್ತಿಕರವಾಗಿದ್ದರೂ, ಭತ್ತವನ್ನು ಬೆಳೆಯುವ ಪ್ರಮಾಣದಲ್ಲಿ ಕುಂಠಿತವಾಗಿದೆ. ಕೇಂದ್ರ ಸರ್ಕಾರವೇ ಜೂ.22ರವ ವರೆಗೆ ದೇಶಾದ್ಯಂತ ವಿವಿಧ ಆಹಾರ ಬೆಳೆಗಳಿಗೆ ಸಂಬಂಧಿಸಿದ ಬಿತ್ತನೆ ವಲಯದ ಬಗ್ಗೆ ಸಿದ್ಧಪಡಿಸಿದ ಮಾಹಿತಿಯಲ್ಲಿ ಈ ಅಂಶ ವ್ಯಕ್ತವಾಗಿದೆ.

Advertisement

ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮಳೆ ಪ್ರಮಾಣ ಶೇ.45ರಿಂದ ಶೇ.60 ಕೊರತೆಯಾಗಿದೆ. ಹೀಗಾಗಿ, ಆ ರಾಜ್ಯಗಳಲ್ಲಿ ಭತ್ತದ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.

ಆ ರಾಜ್ಯಗಳಲ್ಲಿನ ರೈತರು ಇತರ ಬೆಳೆಗಳತ್ತ ಆಸಕ್ತಿ ವಹಿಸಿರುವುದೇ ಇದಕ್ಕೆ ಕಾರಣ.ಜು.15ಕ್ಕೆ ಮುಕ್ತಾಯವಾದಂತೆ ದೇಶದ ವಿವಿಧ ಭಾಗಗಳಲ್ಲಿ 12.8 ಮಿಲಿಯ ಹೆಕ್ಟೇರ್‌ ಪ್ರದೇಶದಲ್ಲಿ ಪ್ರಸಕ್ತ ವರ್ಷ ಭತ್ತವನ್ನು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬೆಳೆಯ ಪ್ರಮಾಣ ಶೇ.17ರಷ್ಟು ಕಡಿಮೆಯಾಗಿದೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲ ಬೇಗೆಯಿಂದಾಗಿ ಗೋಧಿಯ ಬೆಳೆಯಲ್ಲಿ ಕೂಡ ಶೇ.5 ಇಳಿಕೆಯಾಗಿದೆ.

ಜು.22ಕ್ಕೆ ಮುಕ್ತಾಯವಾದಂತೆ ಬೇಳೆ-ಕಾಳುಗಳು, ರಾಗಿ, ಎಣ್ಣೆ ಬೀಜಗಳ ಬಿತ್ತನೆ ಹೇರಳವಾಗಿ ನಡೆಸಲಾಗಿದೆ. ಶೇ.6.49 ಪ್ರದೇಶದಲ್ಲಿ ಬೇಳೆ-ಕಾಳುಗಳ ಬಿತ್ತನೆ ನಡೆಸಲಾಗಿದೆ. ಶೇ.15.7ರಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆ ನಡೆಸಲಾಗಿದೆ. ಇದ ಹೊರತಾಗಿಯೂ ಕಳೆದ ವರ್ಷದ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಕಡಿಮೆಯೇ ಎಂದು ಕೇಂದ್ರ ಕೃಷಿ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಉಕ್ರೇನ್‌ ಸಂಘರ್ಷದ ಕಾರಣದಿಂದಾಗಿ ಜಗತ್ತಿನ ಕೆಲವು ಭಾಗಗಳಲ್ಲಿ ಆಹಾರದ ಕೊರತೆಯ ಅನುಭವ ಉಂಟಾಗಿರುವುದರಿಂದ ಮುಂದಿನ ವರ್ಷವನ್ನು ಗಮನದಲ್ಲಿ ಇರಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ವಿವಿಧ ರೀತಿಯ ಆಹಾರ ವಸ್ತುಗಳ ಉತ್ಪಾದನೆ ಗರಿಷ್ಠ ಮಟ್ಟದಲ್ಲಿ ಆಗಬೇಕಾಗುವ ಅನಿವಾರ್ಯತೆ ಸೃಷ್ಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next