Advertisement

ಭಸ್ಮಾಸುರ ಚೀನ! ಡ್ರ್ಯಾಗನ್‌ ಕೈ ಇಟ್ಟಲ್ಲೆಲ್ಲ ದಿವಾಳಿ

01:15 PM Apr 07, 2022 | Team Udayavani |
ಬಂದರು, ರಸ್ತೆ, ರೈಲ್ವೆ ಮಾರ್ಗ ನಿರ್ಮಾಣದ ಹೆಸರಿನಲ್ಲಿ ಶ್ರೀಲಂಕಾಕ್ಕೆ 8 ಬಿಲಿಯನ್‌ ಡಾಲರ್‌ ಹಣವನ್ನು ಚೀನ ಕೊಟ್ಟಿತ್ತು. ಇದನ್ನು ತೀರಿಸಲಾಗದೆ, 2017ರಲ್ಲಿ ಹಂಬಾಂಟೋಟಾ ಬಂದರನ್ನು 99 ವರ್ಷ ಅವಧಿಗೆ ಲೀಸ್‌ಗೆ ಪಡೆದ ಚೀನ, ಅಲ್ಲಿ ತನ್ನ ವಾಣಿಜ್ಯ ಚಟುವಟಿಕೆ ವಿಸ್ತರಿಸಿಕೊಂಡಿದೆ. ದ್ವೀಪರಾಷ್ಟ್ರದ ಹತ್ತಾರು ಬೃಹತ್‌ ಯೋಜನೆಗಳನ್ನು ಚೀನಾ ತನ್ನ ನಿಯಂತ್ರಣ­ದಲ್ಲಿಟ್ಟುಕೊಂಡಿದೆ. ಪ್ರಸ್ತುತ ಇತಿಹಾಸ ಕಂಡುಕೇಳರಿಯದಂತೆ ಲಂಕೆ ದಿವಾಳಿಯಾಗಿದೆ. "ಚೀನ ನಂಬಿ ನೀವೇಕೆ ಅಷ್ಟು ಸಾಲ ಪಡೆದ್ರಿ?' ಎಂಬ ವಿಪಕ್ಷಗಳು ಕೇಳುತ್ತಿದ್ದರೂ, ರಾಜಪಕ್ಸ ತುಟಿ ಬಿಚ್ಚುತ್ತಿಲ್ಲ...
Now pay only for what you want!
This is Premium Content
Click to unlock
Pay with

ಭಾರತದ ಪಾದ ತಳದಲ್ಲಿ, ಹಿಂದೂ ಮಹಾಸಾಗರದ ಬುಡದಲ್ಲಿ ಪುಟ್ಟ ಮಣಿಯಂತೆ ಗೋಚರಿಸುವ ಶ್ರೀಲಂಕಾ, ಇಂದು ಆ ಸಮುದ್ರದ ಅಲೆಗಳಿಗೂ ಮಿಗಿಲಾದ “ದಿವಾಳಿಯ ಸುನಾಮಿ’ಗೆ ಕೊಚ್ಚಿ ಹೋಗುತ್ತಿದೆ. ಸುದೀರ್ಘ‌ ಪರಂಪರೆ ಇದ್ದ ಒಂದು ಸಂಪದ್ಭರಿತ ದೇಶವನ್ನು ಹೀಗೆ ಪಾಪರ್‌ ಮಾಡಿದ ಕುಖ್ಯಾತಿ ಸಲ್ಲಬೇಕಾದದ್ದು ಚೀನಕ್ಕೆ. ಕ್ಸಿ ಜಿನ್‌ಪಿಂಗ್‌ ನೇತೃತ್ವದ ಕಮ್ಯುನಿಸ್ಟ್‌ ಪಕ್ಷದ ಸಾಮ್ರಾಜ್ಯ­ಶಾಹಿ ನೀತಿಯ ತಿಮಿಂಗಿಲಕ್ಕೆ ತುತ್ತಾಗುತ್ತಿರುವ ದೇಶ ಲಂಕಾ ಮಾತ್ರವೇ ಅಲ್ಲ. ಜಗವ್ಯಾಪಿ ಇದರ ಸಾಲದ ಜಾಲವಿದೆ…

Advertisement

ಚೀನದ್ದು ಆಧುನಿಕ ಜೀತದಾಳು ನೀತಿ
ಹಿಂದೆ ಜಮೀನಾªರಿ ಪದ್ಧತಿ ಇದ್ದಂಥ ಕಾಲವನ್ನು ಸುಮ್ಮನೆ ನೆನಪಿಸಿಕೊಳ್ಳಿ. ಊರಿಗೊಬ್ಬ ಧಣಿ. ಅಲ್ಲೊಬ್ಬ ಬಡವ. ಆ ಬಡವನಿಗೆ ಧಣಿ, ಪುಡಿಗಾಸು ಸಾಲ ಕೊಟ್ಟು, ವಿಪರೀತ ಬಡ್ಡಿ ಹೇರುತ್ತಿದ್ದ. ಬೆಳೆ ಕೈ ಕೊಟ್ಟು, ಸಾಲ ತೀರಿಸಲಾಗದೆ, ಬಡವ ಒದ್ದಾಡುತ್ತಿದ್ದ. ಬಡವನ ಈ ಅಸಹಾಯಕತೆಯನ್ನೇ ದಾಳವಾಗಿಸಿ­ಕೊಳ್ಳುತ್ತಿದ್ದ ಧಣಿ, ಆತನ ಮೇಲೆ ದರ್ಪ ತೋರಿ, ಅವನ ಸಣ್ಣಪುಟ್ಟ ಜಮೀನನ್ನೆಲ್ಲ ಕಿತ್ತುಕೊಳ್ಳುತ್ತಿದ್ದ. ತನ್ನ ಸಾಲ ತೀರಿಸುವ ತನಕ ಅದೇ ಜಮೀನಿನಲ್ಲೇ ಜೀತದಾಳು­ವಾಗಿ ದುಡಿಸಿಕೊಳ್ಳುತ್ತಿದ್ದ. ಪ್ರಸ್ತುತ ಚೀನ ಜಗತ್ತಿನ ಸಣ್ಣಪುಟ್ಟ ದೇಶಗಳನ್ನೆಲ್ಲ ಸಾಲದ ಖೆಡ್ಡಾಕ್ಕೆ ಬೀಳಿಸಿ ಮಾಡುತ್ತಿರುವ ದಬ್ಟಾಳಿಕೆ ಇದೇ ಬಗೆಯದ್ದು!

ವನ್‌ ಬೆಲ್ಟ್, ವನ್‌ ರೋಡ್‌
2013ರಲ್ಲಿ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜಗತ್ತಿನಾದ್ಯಂತ ತಮ್ಮ ಕಮ್ಯುನಿಸ್ಟ್‌ ಆಡಳಿತದ ಛಾಪು ಮೂಡಿಸುವ ಸಲುವಾಗಿ “ಸಾಲದ ಬಲೆ ರಾಜತಾಂತ್ರಿಕತೆ’ಯ ಯೋಜನೆ ರೂಪಿಸಿತು. ಅದುವೇ, “ಒನ್‌ ಬೆಲ್ಟ್ ಒನ್‌ ರೋಡ್‌’ ಪಾಲಿಸಿ. ರಸ್ತೆ, ಸೇತುವೆ, ರೈಲ್ವೆ ಮಾರ್ಗ, ಮೂಲಸೌಕರ್ಯಗಳ ಹೆಸರಿನಲ್ಲಿ ಸಾಲ ನೀಡಿ, ಅದು ತೀರುವ ತನಕ ಅಂಥ ದೇಶಗಳ ಭೂಪ್ರದೇಶ ಮತ್ತು ಆರ್ಥಿಕ ಯೋಜನೆಗಳನ್ನು ತನ್ನದಾಗಿಸಿಕೊಳ್ಳುವ ಕುತಂತ್ರ. ಪ್ರಸ್ತುತ ಜಗತ್ತಿನ 78 ರಾಷ್ಟ್ರಗಳು ಚೀನದಿಂದ ಹೀಗೆ ಸಾಲಪಡೆದು, ತಲೆಮೇಲೆ ಕೈಹೊತ್ತು ಕುಳಿತಿವೆ.

ಇಲ್ಲೂ ಇದೆ, ದಿವಾಳಿ ಭಯ!
ಚೀನದಿಂದ ಸಾಲ ಪಡೆದ ಆಫ್ರಿಕನ್‌ ದೇಶಗಳು, ತಜಿಕಿಸ್ಥಾನ್‌, ಕಿರ್ಗಿಸ್ಥಾನ್‌, ಮಂಗೋಲಿಯಾ, ಲಾವೋಸ್‌, ಜಿಬೌಟಿ- ಇವತ್ತಿಗೂ ಏದುಸಿರು ಬಿಡುತ್ತಿವೆ.

ನೆರೆದೇಶಗಳಿಗೆ ಚೀನ ಸಾಲದ ಬರೆ

Advertisement

1. ಶ್ರೀಲಂಕಾ  – $8 ಬಿಲಿಯನ್‌
ಬಂದರು, ರಸ್ತೆ, ರೈಲ್ವೆ ಮಾರ್ಗ ನಿರ್ಮಾಣದ ಹೆಸರಿನಲ್ಲಿ ಶ್ರೀಲಂಕಾಕ್ಕೆ 8 ಬಿಲಿಯನ್‌ ಡಾಲರ್‌ ಹಣವನ್ನು ಚೀನ ಕೊಟ್ಟಿತ್ತು. ಇದನ್ನು ತೀರಿಸಲಾಗದೆ, 2017ರಲ್ಲಿ ಹಂಬಾಂಟೋಟಾ ಬಂದರನ್ನು 99 ವರ್ಷ ಅವಧಿಗೆ ಲೀಸ್‌ಗೆ ಪಡೆದ ಚೀನ, ಅಲ್ಲಿ ತನ್ನ ವಾಣಿಜ್ಯ ಚಟುವಟಿಕೆ ವಿಸ್ತರಿಸಿಕೊಂಡಿದೆ. ದ್ವೀಪರಾಷ್ಟ್ರದ ಹತ್ತಾರು ಬೃಹತ್‌ ಯೋಜನೆಗಳನ್ನು ಚೀನಾ ತನ್ನ ನಿಯಂತ್ರಣ­ದಲ್ಲಿಟ್ಟುಕೊಂಡಿದೆ. ಪ್ರಸ್ತುತ ಇತಿಹಾಸ ಕಂಡುಕೇಳರಿಯದಂತೆ ಲಂಕೆ ದಿವಾಳಿಯಾಗಿದೆ. “ಚೀನ ನಂಬಿ ನೀವೇಕೆ ಅಷ್ಟು ಸಾಲ ಪಡೆದ್ರಿ?’ ಎಂಬ ವಿಪಕ್ಷಗಳು ಕೇಳುತ್ತಿದ್ದರೂ, ರಾಜಪಕ್ಸ ತುಟಿ ಬಿಚ್ಚುತ್ತಿಲ್ಲ.

2. ಪಾಕಿಸ್ಥಾನ- $30 ಬಿಲಿಯನ್‌
ಶತ್ರುವಿನ ಶತ್ರು ಮಿತ್ರ ಎಂಬ ಪಾಲಿಸಿಯನ್ನು ವರ್ಕೌಟ್ ಮಾಡಿಕೊಳ್ಳಲು ಹೋಗಿ ಪಾಕಿಸ್ಥಾನ, ಚೀನದ ಖೆಡ್ಡಾಕ್ಕೆ ಬಿದ್ದು ಕೆಲವಾರು ವರ್ಷಗಳೇ ಆಗಿವೆ. ಈ ಅಲ್ಪಾವಧಿಯಲ್ಲಿ ಪಾಕ್‌ ಮಾಡಿಕೊಂಡ ಸಾಲ ಬೆಟ್ಟದಷ್ಟು. ಇದನ್ನು ತೀರಿಸಲು ಪಾಕ್‌ಗೆ ಕನಿಷ್ಠ 40 ವರ್ಷಗಳೇ ಬೇಕು ಎನ್ನಲಾಗುತ್ತಿದೆ. ಚೀನ- ಪಾಕಿಸ್ಥಾನ ಎಕನಾಮಿಕ್‌ ಕಾರಿಡಾರ್‌ ಇಲ್ಲಿ ದೊಡ್ಡ ಬೋಗಸ್‌. ಬಂದರಿನ ಮೇಲೂ ಚೀನ ಹಿಡಿತ ಸಾಧಿಸಿದೆ.

3. ಮ್ಯಾನ್ಮಾರ್‌- $11.9 ಬಿಲಿಯನ್‌
ಚೀನವನ್ನು ಬ್ಯುಸಿನೆಸ್‌ ಪಾಟ್ನìರ್‌ ಮಾಡಿಕೊಂಡು ತನ್ನ ಕಾಲಿನ ಮೇಲೆ ತಾನೇ ಚಪ್ಪಡಿ ಎಳೆದುಕೊಂಡ ರಾಷ್ಟ್ರ ಮ್ಯಾನ್ಮಾರ್‌. ರಾಜಕೀಯ ವ್ಯವಸ್ಥೆ, ಆರ್ಥಿಕತೆ ಎರಡೂ ಇಲ್ಲಿ ಹಳ್ಳ ಹಿಡಿದಿದೆ.ಜಿಡಿಪಿಯ ಶೇ.42 ಹಣವನ್ನು ಚೀನಕ್ಕೆ ಮರುಪಾವತಿಸುತ್ತಿದೆ.

4.ಮಾಲ್ಡೀವ್ಸ್‌- $5.6 ಬಿಲಿಯನ್‌
ಮಾಲ್ಡೀವ್ಸ್‌ಗೆ ತಾನು 50 ವರ್ಷದಿಂದ ಕುಚ್ಚಿಕ್ಕು ಗೆಳೆಯ ಅಂತ ಹೇಳಿಕೊಳ್ಳುತ್ತಲೇ, ಈ ದೇಶವನ್ನು ದರಿದ್ರವಾಗಿ ಸಿದ ಹೆಗ್ಗಳಿಕೆ ಚೀನದ್ದು. ಬಂದರು, ಏರ್‌ಪೋರ್ಟ್‌, ವಿದ್ಯುತ್‌ ಯೋಜನೆಗಳಲ್ಲಿ ಚೀನದ ನೆರಳಿದೆ.

5. ನೇಪಾಲ- $2.4 ಬಿಲಿಯನ್‌
ಭಾರತದ ಭೂಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ನೇಪಾಲದ ಹೆಗಲ ಮೇಲೆ ಕೈ ಇಟ್ಟ ಚೀನ, ಆ ದೇಶವನ್ನು ಉದ್ಧಾರವಾಗಲು ಬಿಟ್ಟಿಲ್ಲ. ಸಾಲಕ್ಕೆ ಪ್ರತಿಯಾಗಿ ನೇಪಾಲದ ಕೆಲವು ಹಳ್ಳಿಗಳಲ್ಲಿ ಮಿಲಿಟರಿ ಹಿಡಿತ ಸಾಧಿಸಿದೆ.

ಕೊನೆಗೆ ಕೈಹಿಡಿದೆತ್ತಲು ಭಾರತವೇ ಬೇಕು!
ವಾರಗಳ ಕೆಳಗೆ ಶ್ರೀಲಂಕಾದ ವಿತ್ತ ಸಚಿವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಸಂಕಷ್ಟದ ಈ ಪರಿಸ್ಥಿತಿಯಲ್ಲಿ ನೆರವಾಗಲು ಕೋರಿದ್ದರು. 1 ಬಿಲಿಯನ್‌ ಡಾಲರ್‌ ಅಗತ್ಯ ನೆರವಿನ ಜತೆಗೆ ವೈದ್ಯಕೀಯ ನೆರವನ್ನೂ ಭಾರತ ನೀಡಿದೆ.

2017ರಲ್ಲಿ ಚೀನದ ದೋಸ್ತ್ ಅಬ್ದುಲ್ಲಾ ಯಾಮೀನ್‌, ಮಾಲ್ಡೀವ್ಸ್‌ನ ಅಧ್ಯಕ್ಷರಾಗಿದ್ದ ವೇಳೆ “ಇಂಡಿಯಾ ಔಟ್‌’ ಕ್ಯಾಂಪೇನ್‌ ನಡೆಸಿದ್ದರು. ಅನಂತರ ಅದೇ ಮಾಲ್ಡೀವ್ಸ್‌, ಚೀನದಿಂದ ಕೊಂಚ ದೂರ ಸರಿದು, ಭಾರತಕ್ಕೆ ಹತ್ತಿರವಾಗುತ್ತಿದೆ. ವೈದ್ಯಕೀಯ, ರಕ್ಷಣ ನೆರವುಗಳನ್ನು ಪಡೆದಿದೆ.

ಚೀನದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ನೇಪಾಲ ಕೂಡ ಬುದ್ಧಿ ಕಲಿತಿದೆ. ಇತ್ತೀಚೆಗೆ ಭಾರತ ಈ ದೇಶಕ್ಕೆ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಯೋಜನೆಗಳಿಗೆ ದೇಣಿಗೆ ನೀಡಿದೆ.

ತನಗೆ ಅಂಟಿಕೊಂಡಂತಿರುವ ಪುಟಾಣಿ ದೇಶ ಭೂತಾನ್‌ ಅನ್ನು ಕಬಳಿಸಲು ಚೀನ ಹೊಂಚು ಹಾಕಿಕೊಂಡೇ ಕುಳಿತಿದೆ. ಆದರೆ, ಭಾರತದ ಜತೆಗಿನ ಈ ದೇಶದ ಗಟ್ಟಿ ಬಾಂಧವ್ಯ ಚೀನಕ್ಕೆ ಹಿನ್ನಡೆ ಆಗಿಸುತ್ತಿದೆ. ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಆಫ್ರಿಕಾ, ಏಷ್ಯಾದ ಬಡರಾಷ್ಟ್ರಗಳಿಗೆ ಭಾರತ ಲಸಿಕೆ, ಮಾತ್ರೆ ಸಹಿತ ಉಚಿತ ವೈದ್ಯಕೀಯ ನೆರವು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.