Advertisement

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

03:08 PM Jul 31, 2020 | Karthik A |

ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆ ಕಂಡು ಬಂದಿದ್ದು ತ್ವರಿತ ಗತಿಯ ಆಹಾರ ಪದ್ಧತಿಗಳನ್ನು ಬಿಟ್ಟು ಜನರು ಸ್ವ-ಅವಲಂಬಿತ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

Advertisement

ಅದರಂತೆ ಜನರು ಮನೆಗಳಲ್ಲಿ ನಗರ ತೋಟಗಾರಿಕೆ, ಟೆರೆಸ್‌ ಗಾರ್ಡ್‌ನಿಂಗ್‌ನಂತಹ ಹೊಸ ರೀತಿಯ ಜೀವನ ಶೈಲಿಯನ್ನು ಆರಂಭಿಸಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಕೇರಳದ ತಿರುವನಂತಪುರಂನಲ್ಲಿರುವ ಕುಟುಂಬವೊಂದು 12 ವರ್ಷಗಳಿಂದ ಮನೆಗೆ ಬೇಕಾದ ಅಕ್ಕಿ, ತರಕಾರಿಗಳನ್ನು 20 ಸೆಂಟ್ಸ್‌ನಲ್ಲಿ ಬೆಳೆದು ಮಾದರಿಯಾಗಿದ್ದಾರೆ.

ವೆಲ್ಲಾಯಣಿಯಲ್ಲಿ ಕೃಷಿ ಮಹಾವಿದ್ಯಾಲಯದ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಉಮಾ ಮಹೇಶ್ವರ್‌ ಭೂಮಿ ಉಳುಮೆ ಮಾಡಲು, ನೆಲಸಮಗೊಳಿಸಲು ಮನೆ ಹತ್ತಿರದಲ್ಲಿರುವ ಕೃಷಿ ಭವನದ ಸಹಾಯ ಪಡೆಯುತ್ತಾರೆ. ಅಲ್ಲದೆ ಇವರ ಮನೆಯಲ್ಲಿ ಬೆಳೆಯಲಾದ ಹೆಚ್ಚಿನ ಸಸಿಗಳನ್ನು ಅಲ್ಲಿಂದಲೇ ತರಲಾಗಿದ್ದು, ಇಳುವರಿ ಕೂಡ ಚೆನ್ನಾಗಿದೆ.

ಉಮಾ ಮಹೇಶ್ವರ್‌ ಅವರ ಪತ್ನಿ ರಾಜಶ್ರೀ ತಿರುವನಂತಪುರಂನ ಕೃಷಿ ನಿರ್ದೇಶನಾಲಯದಲ್ಲಿ ಸಸ್ಯ ಸಂರಕ್ಷಣಾ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮನೆಯವರೆಲ್ಲರೂ ಸೇರಿ ತಮ್ಮ ಜಾಗದಲ್ಲಿ 400 ಕೆ.ಜಿ. ಭತ್ತದ ಕೃಷಿ ಬೆಳೆಯುತ್ತಾರೆ. ನವೆಂಬರ್‌ನಲ್ಲಿ ಭತ್ತ ಕೊಯ್ಲು ಮಾಡುತ್ತಾರೆ. ಉಳಿದ ತಿಂಗಳು ಆ ಜಾಗದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಸುತ್ತಾರೆ. ಇದರಲ್ಲಿ ಅವರು ವರ್ಷಕ್ಕೆ 10 ಕೆ.ಜಿ. ಇಳುವರಿ ಪಡೆಯುತ್ತಿದ್ದಾರೆ.

Advertisement

20 ಸೆಂಟ್ಸ್‌ನಲ್ಲಿ ಭತ್ತ ಬೆಳೆದರೆ ಮನೆಯ ಅಕ್ಕ ಪಕ್ಕ ಇರುವ 6 ಸೆಂಟ್ಸ್‌ ಜಾಗದಲ್ಲಿ ಶುಂಠಿ, ಅರಿಶಿನ, ಮೆಣಸು, ಟೊಮೆಟೊ, ಬಾಳೆಹಣ್ಣು, ಹೂಕೋಸು, ಬೆಂಡೆಕಾಯಿ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಾರೆ.  ತಂಪು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ತರಕಾರಿಗಳನ್ನು ಕೂಡ ಇವರು ಬೆಳೆಯುತ್ತಿದ್ದು ಈರುಳ್ಳಿ, ಬಟಾಟೆ, ಬೆಳ್ಳುಳ್ಳಿ, ಬದನೆಕಾಯಿ, ಬಿನ್ಸ್‌, ಸ್ಥಳೀಯ ತರಕಾರಿಗಳಾದ ಸಿಹಿ ಕುಂಬಳಕಾಯಿ, ಸೋರೆಕಾಯಿ ಮುಂತಾದ ಕೃಷಿ ಮಾಡುತ್ತಾರೆ.ಇದಲ್ಲದೆ ಟೆರೆಸ್‌ನಲ್ಲಿ ಗ್ರೋ ಬ್ಯಾಗ್‌ಗಳನ್ನು ಬಳಸಿ ಗಿಡಗಳನ್ನು ಬೆಳೆಸಲಾಗುತ್ತಿದೆ.

ಉಮಾ ಮಹೇಶ್ವರ್‌-ರಾಜಶ್ರೀ ದಂಪತಿ ಪುತ್ರ ಆನಂದ ಕೂಡ ಚಿಕ್ಕಂದಿನಿಂದಲೇ ಕೃಷಿಯಲ್ಲಿ ತೊಡಗಿಕೊಂಡಿದ್ದು, ಅದರಲ್ಲಿ ಆಸಕ್ತಿ ಹೊಂದಿದ್ದಾರೆ. ಸಮಯ ಸಿಕ್ಕಾಗೆಲ್ಲ ಕೃಷಿಗೆ ಇವರೂ ನೆರವಾಗುತ್ತಾರೆ.

ಒಟ್ಟಿನಲ್ಲಿ ಇದೇ ರೀತಿ ಪ್ರತಿ ಮನೆಯಲ್ಲಿಯೂ ಅಗತ್ಯಕ್ಕೆ ತಕ್ಕ ತರಕಾರಿ, ಧಾನ್ಯಗಳನ್ನು ಬೆಳೆಯುವುದರಿಂದ ಪ್ರತಿಯೊಂದಕ್ಕೂ ಅಂಗಡಿಯನ್ನು ಅವಲಂಭಿಸುವುದನ್ನು ತಪ್ಪಿಸಬಹುದು ಮತ್ತು ರಾಸಾಯನಿಕಯುಕ್ತ ಆಹಾರ ಸೇವನೆಗೆ ನಿಯಂತ್ರಣ ಹೇರಬಹುದು.

-ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next