Advertisement

ಸಮಗ್ರ ಬೆಳೆ ಲಾಭದ ಹೊಳೆ 

12:30 AM Mar 11, 2019 | |

ಕಬ್ಬಿನ ಜೊತೆಗೆ ಕಲ್ಲಂಗಡಿ, ಅರಿಷಿಣ, ಬಾಳೆ, ಬದನೆಕಾಯಿ, ಚಂಡು ಹೂ, ಮೆಣಸಿನಕಾಯಿ, ಗೋಧಿ, ಟೊಮೆಟೊ, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಪ್ರತಿವರ್ಷ ಸುಮಾರು 20 ರಿಂದ 25 ಲಕ್ಷ ಆದಾಯ ಪಡೆಯುತ್ತಿದ್ದಾರೆ. 

Advertisement

ಸಮ್ಮಿಶ್ರ ಬೆಳೆಗಳ ಮೂಲಕ ಲಾಭದ ಖುಷಿಯನ್ನು ಕಂಡು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಬಾಗಲಕೋಟ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಯುವ ರೈತ ಶ್ರೀಶೈಲ ಪುಂಡಲೀಕ ರಂಗಾಪೂರ.

ಶ್ರೀಶೈಲ ಅವರ ತಂದೆ 14 ಎಕರೆ ಜಮೀನಿನಲ್ಲಿ 10 ಎಕರೆ ಕಬ್ಬು, 4 ಎಕರೆ ಗೋವಿನ ಜೋಳ ಬೆಳೆಯುತ್ತಿದ್ದರು. ತಂದೆಯ ಮರಣದ ನಂತರ ಕೇವಲ 9 ತರಗತಿವರೆಗೆ ಶಿಕ್ಷಣವನ್ನು ಪಡೆದಿರುವ ಶ್ರೀಶೈಲ,  ಸಹೋದರ ಮಂಜುನಾಥ ಜೊತೆಗೆ ಸೇರಿಕೊಂಡು ವ್ಯವಸಾಯವನ್ನೇ ಮುಂದುವರಿಸಿದರು. ಆದರೆ, ಹಿಂದಿನ ಪದ್ಧತಿಯನ್ನು ಸ್ವಲ್ಪ ಬದಲಿಸಿಕೊಂಡರು. ಅಂದರೆ,  14 ಎಕರೆ ಜಮೀನಿನಲ್ಲಿ 5 ಎಕರೆ ಮಾತ್ರ ಕಬ್ಬು ಬೆಳೆಯಲು ನಿರ್ಧರಿಸಿದರು.   9 ಎಕರೆಯಲ್ಲಿ ಕಲ್ಲಂಗಡಿ, ಅರಿಷಿಣ, ಬಾಳೆ, ಬದನೆ, ಚಂಡುಹೂ, ಮೆಣಸಿನಕಾಯಿ, ಗೋದಿ, ಟೊಮೆಟೊ, ಗೋವಿನ ಜೋಳ ಸೇರಿದಂತೆ ವಾತಾವರಣಕ್ಕೆ ತಕ್ಕಂತೆ ಸಮಗ್ರ ಬೆಳೆಗಳ ಮೂಲಕ ಕೃಷಿಯಲ್ಲೇ ಲಾಭದ ದಾರಿಯನ್ನು ಕಂಡು ಕಂಡುಕೊಂಡರು. ಈಗ ತಂದೆಯವರು ಮಾಡುತ್ತಿದ್ದ ಲಾಭಕ್ಕಿಂತ ಹತ್ತುಪಟ್ಟು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

ಹನಿ ನೀರಾವರಿ 
ಪ್ರತಿಯೊಂದು ಬೆಳೆಗಳಿಗೂ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿದ್ದಾರೆ. ತರಕಾರಿ ಬೆಳೆಗಳಿಗೆ ಹೊದಿಕೆ ಪದ್ಧತಿ  ಅಳವಡಿಸಿಕೊಂಡಿದ್ದಾರೆ. ಇದರಿಂದ ಕಡಿಮೆ ಕೂಲಿಕಾರರು , ಸಮಯದ ಉಳಿತಾಯ ಮತ್ತು ಕಳೆ ನಿರ್ವಹಣೆಗೆ ಖರ್ಚು ಕಡಿಮೆಯಾಗುತ್ತಿದೆ.

ಲಾಭದ ಹೊಳೆ 
ಕಬ್ಬಿನ ಜೊತೆಗೆ ಕಲ್ಲಂಗಡಿ, ಅರಿಷಿಣ, ಬಾಳೆ, ಬದನೆಕಾಯಿ, ಚಂಡು ಹೂ, ಮೆಣಸಿನಕಾಯಿ, ಗೋಧಿ, ಟೊಮೆಟೊ, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಪ್ರತಿವರ್ಷ ಸುಮಾರು 20 ರಿಂದ 25 ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ. ಬೆಳೆದ ಚೆಂಡು ಹೂಗಳು ಪೂನಾ, ಹೈದ್ರಾಬಾದ್‌, ಬೆಂಗಳೂರು ಮಾರುಕಟ್ಟೆಗೆ ರವಾಣೆಯಾಗುತ್ತವೆ. 

Advertisement

ಶ್ರೀ ಶೈಲ ಅವರಿಗೆ  2016-17ನೇ ಸಾಲಿನ ಕೃಷಿ ಇಲಾಖೆಯ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ದೊರೆತಿದೆ. 

– ಚಂದ್ರಶೇಖರ ಮೋರೆ 

Advertisement

Udayavani is now on Telegram. Click here to join our channel and stay updated with the latest news.

Next