Advertisement
ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯನ್ನು ನಾವು ಕಾಣಬಹುದಾಗಿತ್ತು.
Related Articles
Advertisement
ಇದರನ್ವಯ ತರಗತಿ, ತರಗತಿಗನುಗಣವಾಗಿ ಪಠ್ಯಗಳನ್ನು ಕೂಡ ಅಳವಡಿಸಲಾಯಿತು. ಪಠ್ಯದಲ್ಲಿರುವ ಪಾಠಗಳನ್ನು ಅಭ್ಯಸಿಸಿ ಅದಕ್ಕೆ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತಿತ್ತು. ಇದು ಲಾರ್ಡ್ ಮೆಕಾಲೆ ಶಿಕ್ಷಣದ ಒಂದು ಭಾಗವಾಗಿದೆ ಎಂದು ಹೇಳಬಹುದು. ತರುವಾಯ ಸದ್ಯ ಭಾರತದಲ್ಲಿ ನೂತನ ಶಿಕ್ಷಣ ಪದ್ಧತಿ-2020 ಎಂಬ ಕ್ರಮವನ್ನು ಘೋಷಿಸಲಾಗಿದೆ. ಇದು ಭಾರತದಲ್ಲಿ ಶಿಕ್ಷಣ ಕ್ರಾಂತಿಗೆ ಪೂರಕವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗೆ ದೇಶದ ಶಿಕ್ಷಣವೂ ಕಾಲ ಕಾಲಕ್ಕೆ ಬದಲಾವಣೆ ಕಂಡಿದೆ.
ಶಿಕ್ಷಣವೂ ವ್ಯಕ್ತಿಯೋರ್ವನಿಗೆ ಸಿಗಬೇಕಾದ ಮೂಲಹಕ್ಕುಗಳಲ್ಲಿ ಒಂದು. ಇದರಿಂದ ಆತನ ಜೀವನಕ್ಕೆ ಉದ್ಯೋಗ ನೀಡುವಷ್ಟೇ ಅಲ್ಲ, ಜೀವನ ಬೆಳಗಲೂ ಪ್ರೇರಣೆಯಾಗಬೇಕು. ಜ್ಞಾನ ವೃದ್ಧಿಗೆ ಶಿಕ್ಷಣ ಅತ್ಯಗತ್ಯ. ಈ ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯೂ ಬಾಯಿಪಾಠದ ಶಿಕ್ಷಣಕ್ಕಿಂತ ವ್ಯಕ್ತಿತ್ವ, ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡುತ್ತಿತ್ತು. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಿರುತ್ತಿದ್ದ. ಹಿರಿಯ-ಕಿರಿಯರಿಗೆ ಗೌರವಾಧರಗಳನ್ನು ನೀಡುವುದನ್ನು ಕಲಿತಿರುತ್ತಿದ್ದ. ಸಮಾಜದಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದ ಎಂದು ಓದಿ ಕೇಳಿದ್ದೇವೆ. ಆಗಂಥ ಈಗಿನ ಆಧುನಿಕ ಶಿಕ್ಷಣ ಮೌಲ್ಯ ಶಿಕ್ಷಣ ನೀಡುವುದನ್ನು ಕಲಿಸಲಿಲ್ಲವೇ ಎಂದರೆ ತಪ್ಪಾಗುತ್ತದೆ. ಆಧುನಿಕ ಶಿಕ್ಷಣ ಪದ್ಧತಿ ಮೌಲ್ಯ ಶಿಕ್ಷಣಕ್ಕೂ ಒತ್ತು ನೀಡಿದೆ ಆದರೆ ಕೆಲವೊಂದು ಬದಲಾವಣೆ ಅತ್ಯಾವಶ್ಯಕ ಅಗತ್ಯವಿದೆ ಎಂಬ ಬಲವಾದ ವಾದಗಳು ಆಗಾಗ ಕೇಳಿಬರುತ್ತಿದ್ದವು. ಇದಕ್ಕೆ ಕೇವಲ ಶಿಕ್ಷಣ ಪದ್ಧತಿ ಹೊಣೆಗೇಡಿಯಾಗಬೇಕಿಲ್ಲ. ಬದಲಾಗಿ ಇಡೀ ವ್ಯವಸ್ಥೆ ಹೊಣೆಯಾಗಬೇಕಿದೆ.
ಈ ನಿಟ್ಟಿನಲ್ಲಿ ಈಗಿನ ಜಾರಿಗೊಳಿಸಿರುವ ನೂತನ ಶಿಕ್ಷಣ ಪದ್ದತಿ ಅನುಕೂಲಿಯಾಗಲಿದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಬೇಕಿದೆ. ಅವರ ಆಸಕ್ತಿ, ಕೌಶಲ ವೃದ್ಧಿಗೆ ಪೂರಕವಾದ ಶಿಕ್ಷಣ ಮಾಧ್ಯಮ ಬೇಕಿದೆ. ಕೇವಲ ಉದ್ಯೋಗ ಸೃಷ್ಟಿಗೆ ಮಾತ್ರ ಶಿಕ್ಷಣ ಸೀಮಿತವಾಗದೇ ಇಡೀ ಮನುಷ್ಯನ ವ್ಯಕ್ತಿತ್ವ, ಸರ್ವತೋಮುಖ ಅಭಿವೃದ್ಧಿಯಾಗುವ ಶಿಕ್ಷಣ ಅಗತ್ಯವಿದೆ. ಇನ್ನು 2030ರ ವೇಳೆಗೆ ಭಾರತದಲ್ಲಿ ಶಿಕ್ಷಣ ಪದ್ಧತಿಯೂ ಮುಂದುವರಿದಿರುತ್ತದೆ. ಈಗಾಗಲೇ ವೃತ್ತಿ ಶಿಕ್ಷಣ, ಕೌಶಲ ವೃದ್ಧಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗುತ್ತಿದೆ. ತಂತ್ರಜ್ಞಾನವೂ ಅಭಿವೃದ್ಧಿಯಾಗಿದ್ದು ಶಿಕ್ಷಣದಲ್ಲಿ ಕೂಡ ಬಳಕೆಯಾಗುತ್ತಿದೆ. ವಿಧವಿಧವಾದ ಕೋರ್ಸ್‌ಗಳು ದೇಶಕ್ಕೆ ಪರಿಚಯವಾಗುತ್ತಿವೆ. ಇದು ಮುಂದುವರಿದ ಶಿಕ್ಷಣ ಭಾಗವಾಗಿದೆ. ಹೀಗಾಗಿ ನಾವು ಕೂಡ ಶಿಕ್ಷಣ ಪದ್ಧತಿಗೆ ಒಗ್ಗಿಕೊಳ್ಳಬೇಕಿದೆ.