Advertisement
ಈ ಸ್ವಾಗತ ನೋಡಿ ಆಟಗಾರ್ತಿ ಯರು ಸಂಭ್ರಮಗೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ನಾಯಕಿ ಪ್ರೀತಿ, “ಈ ಸ್ವಾಗತ ನೋಡಿ ನಾವೆಲ್ಲ ಬಹಳ ಸಂತಸಗೊಂಡಿದ್ದೇವೆ. ಇಡೀ ಕೂಟದಲ್ಲಿ ನಮಗೆ ಬಹಳ ಪ್ರೀತಿ, ಬೆಂಬಲ ಸಿಕ್ಕಿತ್ತು. ಇಂಥದ್ದೊಂದು ಸ್ವಾಗತವನ್ನು ನಾವು ಊಹಿಸಿಯೂ ಇರಲಿಲ್ಲ. ವಿಮಾನ ನಿಲ್ದಾಣದಿಂದ ಹಿಡಿದು ಹೋದ ಕಡೆಯಲ್ಲೆಲ್ಲ ನಮ್ಮ ಸಾಧನೆಗೆ ಬಹಳ ಮೆಚ್ಚುಗೆ ದೊರಕಿದೆ’ ಎಂದರು.
ಬಳಿಕ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹಾಕಿ ಸಾಧಕಿ ಯರನ್ನು ಸಮ್ಮಾನಿಸಲಾ ಯಿತು. ಇವರಲ್ಲಿ 17 ಮಂದಿ ಖೇಲೋ ಇಂಡಿಯಾ ಕ್ರೀಡಾಪಟು ಗಳಾಗಿದ್ದರು. ಎಲ್ಲರೂ ವಿವಿಧ ಸಾಯ್ ನ್ಯಾಶನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಭಾಗವಾ ಗಿದ್ದರು. ಆಯ್ಕೆ ಸಿದ್ಧತೆ, ತರಬೇತಿಯೆಲ್ಲ ಬೆಂಗಳೂರಿನಲ್ಲೇ ನಡೆದಿತ್ತು. ಈ ತಂಡ ವೀಗ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಬೆಂಗ ಳೂರಿನ ಪಾಲಿಗೂ ಹೆಮ್ಮೆಯ ಸಂಗತಿಯಾಗಿದೆ. “ನಮ್ಮ ಸಮಸ್ಯೆಗಳೇನೇ ಇದ್ದರೂ ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಒಂದು ಕರೆ ಮಾಡಿದರೆ ಸಾಕಿತ್ತು, ಸಮಸ್ಯೆ ಕೂಡಲೇ ಬಗೆಹರಿಯುತ್ತಿತ್ತು. ನಮ್ಮ ನೆರವಿಗೆ ನಿಂತ ಬೆಂಗಳೂರಿನ ಸಾಯ್ ಕೇಂದ್ರದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂಬುದಾಗಿ ನಾಯಕಿ ಪ್ರೀತಿ ಹೇಳಿದರು.
Related Articles
Advertisement