Advertisement

Bangladesh ಮಾಜಿ ಪ್ರಧಾನಿ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲು

01:26 AM Aug 14, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಕಿರಾಣಿ ಅಂಗಡಿಯ ಮಾಲಕರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಶೇಖ್‌ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ದೇಶದಿಂದ ಪರಾರಿಯಾಗಿರುವ ಮಾಜಿ ಪ್ರಧಾನಮಂತ್ರಿ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.

Advertisement

ಕೊಲೆಗೆ ಸಂಬಂಧಿಸಿದಂತೆ ಮಾಮುನ್‌ ಮಿಯಾ ಎಂಬ ವಕೀಲರು ಢಾಕಾ ಕೋರ್ಟ್‌ನಲ್ಲಿ ಈ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಕೋರ್ಟ್‌ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ. ಹಸೀನಾ ಅಷ್ಟೇ ಅಲ್ಲದೇ ಮಾಜಿ ಗೃಹ ಸಚಿವ ಹಾಗೂ ಇತರ ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿದೆ.

ಹಿಂಸಾಚಾರದಲ್ಲಿ ಅಮೆರಿಕ ಪಾತ್ರವಿಲ್ಲ:
ಬಾಂಗ್ಲಾ ಪ್ರತಿಭಟನೆ ಹಾಗೂ ಸರಕಾರ ಬೀಳಿಸುವಲ್ಲಿ ಅಮೆರಿಕದ ಪಾತ್ರವಿದೆ ಎಂಬ ಆರೋಪವನ್ನು ಅಮೆರಿಕ ತಳ್ಳಿಹಾಕಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್‌ ಜೀನ್‌ ಪಿಯರಿ, ನಾವು ಬಾಂಗ್ಲಾದೇಶದ ಆಂತರಿಕ ವಿಷಯದಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ಈ ಹಿಂಸಾಚಾರಕ್ಕೆ ಅಮೆರಿಕ ಕಾರಣ ಎಂಬುದು ಸಂಪೂರ್ಣ ಸುಳ್ಳು ಎಂದಿದ್ದಾರೆ.



ಢಾಕೇಶ್ವರಿ ದೇಗುಲಕ್ಕೆ ಬಾಂಗ್ಲಾ ಮುಖ್ಯಸ್ಥ ಭೇಟಿ

ಬಾಂಗ್ಲಾದೇಶ ಮಧ್ಯಾಂತರ ಸರಕಾರದ ನೇತೃತ್ವ ವಹಿಸಿಕೊಂಡಿರುವ ಮೊಹಮ್ಮದ್‌ ಯೂನುಸ್‌, ಮಂಗಳವಾರ ರಾಷ್ಟ್ರೀಯ ದೇಗುಲವಾದ “ಢಾಕೇಶ್ವರಿ’ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾವು ಒಂದೇ ಹಕ್ಕುಗಳನ್ನು ಹೊಂದಿರುವ ಜನ. ನಮಗೆ ಕೆಲಸ ಮಾಡಲು ಬಿಡಿ, ಇದಾದ ಬಳಿಕವೂ ನಾವು ವಿಫ‌ಲರಾದರೆ ಟೀಕಿಸಿ ಎಂದರು. ಇದೇ ವೇಳೆ, ಸರಕಾರವು ಸಹಾ ಯ ವಾ ಣಿ ಯೊಂದನ್ನು ಆರಂ ಭಿಸಿ, ಹಿಂದೂ ದೇಗು ಲ ಗಳು ಸೇರಿ  ಧಾರ್ಮಿಕ ಸ್ಥಳಗಳ ಮೇಲೆ ನಡೆದ ದಾಳಿಯ ಮಾಹಿತಿ ನೀಡು ವಂತೆ ದೇಶ ವಾಸಿಗಳಿಗೂ ಸೂಚಿಸಿದೆ.

ಬಾಂಗ್ಲಾ ಹಣದುಬ್ಬರ 11.66%: ಕಳೆದ 12 ವರ್ಷಗಳಲ್ಲೇ ಗರಿಷ್ಠ
ವಿವಾದಾತ್ಮಕ ಉದ್ಯೋಗ ಮೀಸಲು ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯ ಬೆನ್ನಲ್ಲೇ ಬಾಂಗ್ಲಾದೇಶವು ಭಾರೀ ಹಣದುಬ್ಬರಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಂಗ್ಲಾದ ಸಾಂಖ್ಯಿಕ ಬ್ಯೂರೊ, ಕಳೆದ 12 ವರ್ಷಗಳಲ್ಲೇ ಅಧಿಕ ಅಂದರೆ ಶೇ.11.66ರಷ್ಟು ಹಣದುಬ್ಬರ ಜುಲೈ ತಿಂಗ ಳಲ್ಲಿ ದಾಖಲಾಗಿದೆ ಎಂದು ತಿಳಿಸಿದೆ. ಈ ಪೈಕಿ ಆಹಾರ ಹಣ ದುಬ್ಬರ ಶೇ.14.10, ಆಹಾರೇತರ ಉತ್ಪನ್ನಗಳ ಹಣದುಬ್ಬರ ಶೇ.9.68 ತಲುಪಿದೆ. ಮೇಯಲ್ಲಿ ಹಣದುಬ್ಬರ ಶೇ.9.94, ಜೂನ್‌ನಲ್ಲಿ ಶೇ.9.72ರಷ್ಟಿದ್ದ ಹಣದುಬ್ಬರ ಪ್ರಮಾಣವು, ಜುಲೈಯಲ್ಲಿ ಪ್ರತಿಭಟನೆಯ ಕಾವಿನಂತೆಯೇ ಏರಿಕೆ ಕಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next