ಹಾಸನ: ಕನ್ನಡ ಸಿನಿಮಾ ನಿರ್ಮಾಪಕ ಕೆ. ಸುಧಾಕರ್ ವಂಚನೆ ಆರೋಪದಡಿ ಐದು ಕೋಟಿ ಪರಿಹಾರ ನೀಡುವುದರ ಜತೆಗೆ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಏನಿದು ಪ್ರಕರಣ ?
ಹಾಸನದ ಉದ್ಯಮಿಯೋರ್ವನಿಂದ ಸಾಲವಾಗಿ 2.90 ಕೋಟಿ ರೂ. ಪಡೆದಿದ್ದರು. ನಿಗಧಿತ ಸಮಯದಲ್ಲಿ ಹಣ ವಾಪಸ್ ಮಾಡದ ಸುಧಾಕರ್ ಸತಾಯಿಸಿದ್ದರು. ಕೊನೆಗೆ ಈ ಪ್ರಕರಣದಲ್ಲಿ ರಾಜಿ ಮಾತುಕತೆ ನಡೆದಿತ್ತು. ಈ ವೇಳೆ ಉದ್ಯಮಿಗೆ ಸುಧಾಕರ್ ಚೆಕ್ ನೀಡಿದ್ದರು. ಈ ಚೆಕ್ ಬ್ಯಾಂಕ್ಗೆ ಹಾಕಿದಾಗ ಬೌನ್ಸ್ ಆಗಿತ್ತು.
ಸಾಲ ನೀಡಿದ ಉದ್ಯಮಿ ನಿರ್ಮಾಪಕರ ವಿರುದ್ಧ ಹಾಸನದ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದರು. 2020ರ ಜನವರಿ 27ರಂದು ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಸುಧಾಕರ್ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ, ಐದು ಕೋಟಿ ಪರಿಹಾರ ನೀಡಲು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಸುಧಾಕರ್ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಈಗ ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು, ಕೆಳ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ. ಆದ್ದರಿಂದ ಸುಧಾಕರ್ ಶಿಕ್ಷೆ ಜತೆಗೆ ಐದು ಕೋಟಿ ಪರಿಹಾರ ನೀಡಬೇಕಾಗಿದೆ.
ಸುಧಾಕರ್ ಅವರು ‘ಕಥಾ ವಿಚಿತ್ರ’, ‘ಹುಲಿ ದುರ್ಗ’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.