Advertisement

ಒಂದು ಬಿಝಿನೆಸ್‌ ಐಡಿಯಾ; ಅಕ್ವೇರಿಯಂ

11:37 AM Apr 27, 2020 | mahesh |

ಸಾಕುಪ್ರಾಣಿಗಳನ್ನು, ನಾನಾ ಕಾರಣಗಳಿಗೆ ಜನರು ಸಾಕುತ್ತಾರೆ. ಮೀನುಗಳು ಕೂಡಾ ಸಾಕುಪ್ರಾಣಿಗಳ ಸಾಲಿನಲ್ಲಿ ಬರುತ್ತವೆ. ಅಕ್ವೇರಿಯಂಗಳು ಮನೆಗಳ ಸೌಂದರ್ಯವನ್ನೂ ಹೆಚ್ಚಿಸುತ್ತವೆ. ಅಲ್ಲದೆ, ಆಪ್ತರಿಗೆ ಕೊಡುವ ಉಡುಗೊರೆಗಳಲ್ಲೂ ಅವು ಸ್ಥಾನ ಪಡೆಯುತ್ತಿವೆ. ಅಕ್ವೇರಿಯಂಗಳ ಬಿಜಿನೆಸ್‌ಗೆ ಇರುವ ಲಾಭವೆಂದರೆ, ಅದಕ್ಕೆ ಯಾವುದೇ ಸೀಸನ್‌ ಎನ್ನುವುದು ಇರುವುದಿಲ್ಲ.
ವರ್ಷವಿಡೀ ನಡೆಸಬಹುದಾಗಿದೆ. ಈ ಬ್ಯುಸಿನೆಸ್‌ ನಡೆಸುವವರು, ವಿವಿಧ ಅಳತೆಗಳ ಅಕ್ವೇರಿಯಂಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.

Advertisement

ಜೊತೆಗೆ, ಮೀನುಗಳಿಗೆ ಮಿಕ್ಸೆಡ್‌ ಆಕ್ಸಿಜನ್‌ ಒದಗಿಸುವ ಮೋಟಾರ್‌ ಉಪಕರಣ, ಮೀನಿನ ಆಹಾರ, ಮತ್ತಿತರ ಉಪಕರಣಗಳೂ ಇರಬೇಕಾಗುತ್ತದೆ. ತಮ್ಮ ಉದ್ಯಮವನ್ನು ಇನ್ನೂ ವಿಸ್ತರಿಸಿಕೊಳ್ಳಬೇಕು ಎನ್ನುವವರು, ಒಂದು ದೊಡ್ಡ ಟ್ಯಾಂಕಿನಲ್ಲಿ ವಿವಿಧ ಪ್ರಭೇದಗಳ ಮೀನುಗಳನ್ನು ಸಾಕಬಹುದು. ಈ ಉದ್ಯಮ ಶುರುಮಾಡುವ ಮುನ್ನ, ಮೀನು ಸಾಕಣೆ ಕುರಿತು ಮಾಹಿತಿ ಪಡೆದಿರಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next