Advertisement

ಶೆಲ್ಟರ್‌ ನಿರ್ಮಾಣವಾದರೂ ಸ್ಥಳಾಂತರವಾಗದ ಬಸ್‌ ನಿಲ್ದಾಣ

03:49 PM Apr 15, 2023 | Team Udayavani |

ಲಾಲ್‌ಬಾಗ್‌: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ(ಜಂಕ್ಷನ್‌) ಕಡೆಯಿಂದ ಲಾಲ್‌ ಬಾಗ್‌ ಜಂಕ್ಷನ್‌ ಕಡೆಗೆ ತೆರಳುವ ಖಾಸಗಿ ಬಸ್‌ಗಳ ತಂಗುದಾಣವನ್ನು ಸ್ಥಳಾಂತರಿಸುವ ಉದ್ದೇಶದಿಂದ ಅಲ್ಲಿಯೇ ಸ್ವಲ್ಪ ದೂರದಲ್ಲಿ ಹೊಸದಾಗಿ ಶೆಲ್ಟರ್‌ ನಿರ್ಮಿಸಿದ್ದರೂ ಬಸ್‌ಗಳು ಮಾತ್ರ ಅಲ್ಲಿ ನಿಲುಗಡೆಯಾಗದೆ ಈ ಹಿಂದಿನ ಸ್ಥಳದಲ್ಲಿಯೇ ನಿಲುಗಡೆಯಾಗುತ್ತಿವೆ.

Advertisement

ವಾಹನ ದಟ್ಟಣೆ ಕಡಿಮೆಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು, ಪ್ರಯಾಣಿಕರ ಸುರಕ್ಷೆಯ ಉದ್ದೇಶದಿಂದ ನಗರದ ಪ್ರಮುಖ ಜಂಕ್ಷನ್‌ಗಳ ಸಮೀಪ ಇರುವ ಬಸ್‌ ತಂಗುದಾಣಗಳನ್ನು ಸ್ಥಳಾಂತರಿಸಲು ಪೊಲೀಸ್‌ ಆಯುಕ್ತರು ಸೂಚನೆ ನೀಡಿದ್ದರು. ಅದರಂತೆ ಕೆಎಸ್‌ಆರ್‌ಟಿಸಿ ಜಂಕ್ಷನ್‌ ಸಮೀಪದ ತಂಗುದಾಣ ಕೂಡ ಸ್ಥಳಾಂತರಿಸಲು ನಿರ್ಧರಿಸಿ ಸ್ವಲ್ಪ ದೂರದಲ್ಲಿ (ಲಾಲ್‌ಭಾಗ್‌ ವೃತ್ತ ಕಡೆಗೆ) ಬಸ್‌ ಶೆಲ್ಟರ್‌ ನಿರ್ಮಿಸಲಾಗಿತ್ತು. ಆದರೆ ಶೆಲ್ಟರ್‌ ನಿರ್ಮಿಸಿ ಹತ್ತು ದಿನಗಳು ಕಳೆದರೂ ಇನ್ನು ಕೂಡ ಬಸ್‌ಗಳು ಅಲ್ಲಿ ನಿಲುಗಡೆಯಾಗದೆ ಈ ಹಿಂದಿನಂತೆ ಜಂಕ್ಷನ್‌ ಪಕ್ಕದಲ್ಲಿಯೇ ನಿಲುಗಡೆಯಾಗುತ್ತಿವೆ.

ಈ ತಂಗುದಾಣದಲ್ಲಿ ಸಿಟಿ, ಸರ್ವಿಸ್‌ ಬಸ್‌ಗಳು ಮಾತ್ರವಲ್ಲದೆ ಸಂಜೆಯ ಅನಂತರ ಸಾಲು ಸಾಲು ಟೂರಿಸ್ಟ್‌ ಬಸ್‌ಗಳು ಕೂಡ ನಿಲ್ಲುತ್ತವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಇನ್ನೊಂದೆಡೆ ಫ‌ುಟ್‌ಪಾತ್‌ಗೆ ಮೀಸಲಿಟ್ಟ ಸ್ಥಳ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಹಾಗಾಗಿ ಈ ಸ್ಥಳ ಪಾದಚಾರಿಗಳಿಗೂ ಅಪಾಯಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next