Advertisement

Aodhya ಪ್ರಧಾನ ಗರ್ಭಗುಡಿಯಲ್ಲಿ ಶ್ಯಾಮಲವರ್ಣದ ಮೂರ್ತಿ

10:47 PM Jan 07, 2024 | Team Udayavani |

ಲಕ್ನೋ: ಅಯೋಧ್ಯೆಯ ರಾಮಮಂದಿರದ ಮುಖ್ಯ ಗರ್ಭಗುಡಿಯಲ್ಲಿ ಶ್ಯಾಮಲ ವರ್ಣದ, ನಿಂತ ಭಂಗಿಯ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

Advertisement

ರಾಮಲಲ್ಲಾ ಮೂರ್ತಿ ಕುರಿತು ಟ್ರಸ್ಟ್‌ನ ಪದಾಧಿಕಾರಿಯೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿರುವುದು ಇದೇ ಮೊದಲು. ಇವರ ಹೇಳಿಕೆ ಯನ್ನು ಗಮನಿಸಿದರೆ, ಕರ್ನಾಟಕದ ಶಿಲ್ಪಿಗಳಾದ ಅರುಣ್‌ ಯೋಗಿರಾಜ್‌ ಮತ್ತು ಗಣೇಶ್‌ ಭಟ್‌ ಅವರ ಕೆತ್ತಿರುವ ವಿಗ್ರಹಗಳ ಪೈಕಿ ಒಂದು ವಿಗ್ರಹವನ್ನು ಅಂತಿಮಗೊಳಿ ಸುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಇವರು ಕೆತ್ತಿರುವ ವಿಗ್ರಹಗಳು ಕರ್ನಾಟಕದ ಶ್ಯಾಮಲ ಬಣ್ಣದ ಕಲ್ಲಿನಿಂದ ಕೂಡಿದೆ. ಉಳಿದಂತೆ, ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಅವರು ಮಾರ್ಬಲ್‌(ಅಮೃತಶಿಲೆ) ಬಳಸಿ ವಿಗ್ರಹ ಕೆತ್ತಿದ್ದಾರೆ.

“ರಾಮಲಲ್ಲಾ ಮೂರ್ತಿಯ ವಿಗ್ರಹ ಪಾದಗಳಿಂದ ಹುಬ್ಬುಗಳವರೆಗೆ 51 ಇಂಚು ಇರಲಿದೆ. ಹಾಲು, ಮೊಸರು, ಜೇನುತುಪ್ಪ, ನೀರು..ಹೀಗೆ ಇವುಗಳನ್ನು ಬಳಸಿ ಅಭಿಷೇಕ ಮಾಡಿದರೂ ವಿಗ್ರಹಕ್ಕೆ ಏನೂ ಆಗಲಾರದು. ಆ ರೀತಿಯ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಡಿ.29ರ ಸಭೆಯಲ್ಲಿ ಟ್ರಸ್ಟ್‌ನ ಎಲ್ಲಾ 11 ಪದಾಧಿಕಾರಿಗಳು ರಾಮಲಲ್ಲಾ ವಿಗ್ರಹ ಆಯ್ಕೆ ಕುರಿತು ತಮ್ಮ ಅಭಿಪ್ರಾಯವನ್ನು ಲಿಖಿತರೂಪದಲ್ಲಿ ಟ್ರಸ್ಟ್‌ನ ಅಧ್ಯಕ್ಷರಿಗೆ ತಿಳಿಸಿದ್ದಾರೆ’ ಎಂದು ಚಂಪತ್‌ ರಾಯ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next