Advertisement

ಬಡಿದೆಚ್ಚರಿಸುವ ಸಾಧನ, ಸಹಾನುಭೂತಿಯ ಸುಳ್ಳು

01:24 AM Dec 16, 2020 | mahesh |

ಸತ್ಯ ಹೇಳುವುದು ಒಂದು ಆದರ್ಶ. ಆದರೆ ಎಲ್ಲ ಸಂದರ್ಭಗಳಲ್ಲೂ ಸತ್ಯವನ್ನೇ ಹೇಳ ಲಾಗದು. ವಂಚನೆಯ ಉದ್ದೇಶದಿಂದ ಅನೃತವನ್ನಾಡುವುದು ತಪ್ಪು. ಆದರೆ ಸಹಾನು ಭೂತಿಯಿಂದ, ಇನ್ನೊಬ್ಬನಿಗೆ ಒಳಿತಾಗಬೇಕು ಎಂಬ ಉದ್ದೇಶದಿಂದ ಸುಳ್ಳು ಹೇಳಿದರೆ ಅದು ತಪ್ಪಾಗುತ್ತದೆಯೇ ಎಂಬುದು ಪ್ರಶ್ನೆ. ಹಾಗಾಗಿ ಸತ್ಯ ಅಥವಾ ಸುಳ್ಳು ಸಮಯ- ಸಂದರ್ಭಗಳನ್ನು ಆಧರಿಸಿರುತ್ತದೆ. ಅದು ವಿವೇಚನೆಯ ಪ್ರಶ್ನೆ. ಸಹಾನುಭೂತಿಯನ್ನು ಹೊಂದಿರುವಾತ ಸುಳ್ಳು ಹೇಳುತ್ತಾನೆ.

Advertisement

ಸಹಾನುಭೂತಿ ಎಂದರೆ ಸಹ ಅನುಭೂತಿ -ಸಹಜೀವಿಗಳು ಏನನ್ನು ಅನುಭವಿಸು ತ್ತಾರೆಯೋ ಅದರಲ್ಲಿ ಜತೆಗೂಡುವ ಸಹೃದ ಯತೆ ಹೊಂದಿರುವುದು. ಮನುಷ್ಯರೊಳಗೆ ಸಹಾನುಭೂತಿ, ಇತರ ಜೀವಿಗಳ ಬಗೆಗೆ ಸಹಾ ನುಭೂತಿ, ಸಸ್ಯ ಸಂಕುಲ ವನ್ನೂ ಸೇರಿಸಿ ಸಕಲ ಜೀವ ಜಗತ್ತಿನ ಜತೆಗೆ ಸಹಾನು ಭೂತಿ ಆದರ್ಶ ಪರಿಕಲ್ಪನೆ. ಅದರಿಂದಲೇ ಮನುಷ್ಯನು ಮನುಷ್ಯ ಎನಿಸಿಕೊಳ್ಳು ವುದು. ಮಾನವೀಯ ಗುಣ ಎಂದರೆ ಅದರಲ್ಲಿ ಸಹಾನುಭೂತಿಯೂ ಬಂತು. ಜೀವ ವಿಕಾಸ ಸರಪಣಿಯಲ್ಲಿ ಉಚ್ಚ ಸ್ಥಾನದಲ್ಲಿರುವ ಮನುಷ್ಯನಿಗಿರಬೇಕಾದ ಅತ್ಯುಚ್ಚ ಗುಣ “ಸಹಾನುಭೂತಿ’. ಅಂದರೆ ಇತರೆಲ್ಲ ಜೀವಿಗಳ ಬಗ್ಗೆ ಸಹಾನುಭೂತಿ.

ಸಹಾನುಭೂತಿಗೆ ನಿಯಮಗಳಿಲ್ಲ, ಷರತ್ತು ಗಳಿಲ್ಲ. ಅದಕ್ಕೆ ಸರಿ- ತಪ್ಪುಗಳು ಗೊತ್ತಿಲ್ಲ. ಸಹಾನುಭೂತಿಯು ಇನ್ನೊಬ್ಬನ ಒಳಿತಿಗಾಗಿ, ಉಳಿವಿಗಾಗಿ ಸುಳ್ಳು ಹೇಳುವುದಕ್ಕೆ ಅನುವು ಮಾಡಿಕೊಡಬಲ್ಲುದು.

ಇಲ್ಲೊಂದು ಸಣ್ಣ ಕಥೆಯಿದೆ. ಯಿಂಗ್‌ ಉಯಿ ಪೇಟೆಗೆ ಹೊರಡಲು ತಯಾರಿ ನಡೆಸಿದ್ದ. ನಮ್ಮ ನಿಮ್ಮ ಹಾಗೆ ಅವನ ಮನೆಯಲ್ಲಿಯೂ ನಾಲ್ಕು ಮಕ್ಕಳಿದ್ದರು. ಒಬ್ಬೊಬ್ಬರದೂ ಒಂದೊಂದು ಬೇಡಿಕೆ, “ಆಟದ ರೈಲು ತನ್ನಿ, ಆಟಿಕೆ ಬಂಡಿ ಬೇಕು… ಅದೂ ಇದೂ…’

ಎಲ್ಲವನ್ನೂ ತರುವುದಾಗಿ ವಚನವಿತ್ತು ಯಿಂಗ್‌ ಉಯಿ ಪೇಟೆಗೆ ಹೊರಟ. ಅಲ್ಲಿ ವ್ಯವಹಾರ ಮುಗಿಸಿ ಹೊರಡುವಾಗ ಸಮಯವಾಯಿತು. ಆಟಿಕೆ ಮರೆತು ಹೋಯಿತು. ಯಿಂಗ್‌ ಉಯಿ ಹಾಗೆಯೇ ಊರಿನತ್ತ ಪ್ರಯಾಣ ಬೆಳೆಸಿದ. ಊರಿನ ಹೆಬ್ಟಾಗಿಲಿಗೆ ಬಂದು ನೋಡು ತ್ತಾನೆ, ಅವನ ಮನೆಗೆ ಬೆಂಕಿ ಬಿದ್ದಿದೆ. ಅಗ್ನಿಯ ಕೆನ್ನಾಲಿಗೆಗಳು ಹೊರಚಾಚುತ್ತಿವೆ. ಊರಿನ ಜನರೆಲ್ಲ ಗುಂಪುಗೂಡಿದ್ದಾರೆ. ಉಯಿ ಓಡೋಡಿ ಬಂದ.

Advertisement

ನೆರೆದಿದ್ದವರಲ್ಲಿ ಒಬ್ಬ ಹೇಳಿದ, “ಮಕ್ಕಳಿಗೆ ಹೊರಗೆ ಬನ್ನಿ ಎಂಬುದಾಗಿ ನಾವು ಕೂಗಿ ಹೇಳುತ್ತಿದ್ದೇವೆ. ಆದರೆ ಮಕ್ಕಳು ಒಪ್ಪುತ್ತಿಲ್ಲ. ಬೆಂಕಿ ಅರಳುತ್ತಿರುವುದು ಸುಂದರ ವಾಗಿ ಕಾಣಿಸುತ್ತಿದೆಯಂತೆ. ಅವರಿಗೆ ಅಪಾಯ ಗೊತ್ತಿಲ್ಲ…’ ಯಿಂಗ್‌ ಉಯಿ ಮಕ್ಕಳು ತರಲು ಹೇಳಿದ್ದ ಆಟಿಕೆಗಳನ್ನು ಮರೆತಿದ್ದ. ಆತ ಬೆಂಕಿ ಕಡಿಮೆ ಇದ್ದ ಮುಂಬಾಗಿಲಿನತ್ತ ಧಾವಿಸಿ ಬಾಗಿಲಿಗೆ ಒದ್ದ. ಮಕ್ಕಳು ಒಳಗಿನಿಂದ ಚಿಲಕ ಹಾಕಿದ್ದರು. “ಚಿಲಕ ತೆರೆಯಿರಿ’ ಎಂದು ಉಯಿ ಹೇಳಿದ. “ಇಲ್ಲಿ ಬಹಳ ಸುಂದರವಾಗಿದೆ ಅಪ್ಪಾ, ಹೊಗೆ ಸುರುಳಿ ಏಳುತ್ತಿದೆ…’ ಎಂದರು ಮಕ್ಕಳು.

ಈಗ ಉಯಿ ಕೂಗಿದ, “ಇಲ್ನೋಡಿ ನಾನು ನಿಮಗಾಗಿ ಆಟದ ಕಾರು, ರೈಲು ಎಲ್ಲ ತಂದಿದ್ದೇನೆ. ಬಂದೊ°àಡಿ’. ಅಪ್ಪ ಆಟಿಕೆಗಳ ಸುದ್ದಿ ತೆಗೆದಾಕ್ಷಣ ಬಾಗಿಲು ತೆರೆಯಿತು, ಮಕ್ಕಳು ಹೊರಗೋಡಿ ಬಂದರು. ಈಗ ಹೇಳಿ, ಯಿಂಗ್‌ ಉಯಿ ದೇವರಂತಹ ತನ್ನ ಮುಗ್ಧ ಕಂದಮ್ಮಗಳಿಗೆ ಸುಳ್ಳು ಹೇಳಿ ಪಾಪಿಯಾಗಿರುವನೆ?

“ಈ ಕಥೆಯೂ ಒಂದು ಸುಳ್ಳು. ಸಹಾನು ಭೂತಿಯ ಬಗ್ಗೆ ನಿಮ್ಮ ಕಣ್ಣನ್ನು ತೆರೆಸಲೆಂದು ನಾನು ಹೇಳಿದ್ದು. ಯಾರನ್ನಾದರೂ ಬಡಿದು ಎಚ್ಚರಿಸುವ ಸಾಧನ ಎಂದರೆ ಅದು ಸುಳ್ಳು ಮಾತ್ರ’ ಎಂದು ಕಥೆ ಮುಗಿಸಿದರು ಓಶೋ ರಜನೀಶ್‌.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next