ಸೇವೆ ನಿಂತೇ ಹೋಗಿತ್ತು.
Advertisement
ಚಿಕ್ಕಮ್ಮ, ಚಿಕ್ಕಪ್ಪ ಮದುವೆಯಾಗಿ ಮುಂಬಯಿಗೆ ಹಡಗಿನಲ್ಲಿ ಹೊರಡುವಾಗ ನನಗೆ ನಿದ್ದೆಯಿಂದ ಕಣ್ಣೆಳೆದು ಬರುತ್ತಿತ್ತು. ಊಟಕ್ಕಾಗಿ ಕಾಯುತ್ತಾ, ಹಡಗಿನ ಕನಸು ಕಾಣುತ್ತಾ ಕುಳಿತಿದ್ದ ನನ್ನ ಕಣ್ಣುಗಳಲ್ಲಿ ಸಿಂದಬಾದ್‌ನ ಹಡಗೂ, ಅವನು ದ್ವೀಪವೆಂದು ಕೊಂಡು ವಿರಮಿಸಿ, ಮತ್ತದು ಚಲಿಸತೊಡಗಿದಾಗ ದ್ವೀಪವಲ್ಲ, ತಿಮಿಂಗಿಲವೆಂದರಿತ ರೋಚಕ ವಿವರವೂ ಸುಳಿಯುತ್ತಿತ್ತು.
ದರ್ಶನ, ಬಾಂದ್ರಾ ಕಲಾನಗರದ ಅಜ್ಜನ ಮನೆಯಿಂದ ಶಶಿ ಕಪೂರ್, ರಾಜೇಶ್ ಖನ್ನಾ ಎಂದು ಉತ್ಸಾಹದಿಂದ ಪುಟಿಯುತ್ತಾ ಥಿಯೇಟರ್‌ಗಳಿಗೆ ಲಗ್ಗೆ, ವರ್ಲಿ, ಸಾಂತಾಕ್ರಾಸ್, ಗೋರೆಗಾಂವ್ ಗಳ ನಿಯಮಿತ ಭೇಟಿ, ವಸಾಯ್‌ಯ ಬಂಧುಗಳಲ್ಲಿಗೂ ಬಹುದೂರವೆನಿಸುವ ಪಯಣ!
Related Articles
ಕರ್ಮಭೂಮಿ ಎಂಬ ಧನ್ಯತಾಭಾವ ಹೃದಯವನ್ನು ತುಂಬಿತು.
Advertisement
ಮನೆಕೆಲಸದ ಸಹಾಯಕರ ಉಸ್ತುವಾರಿಗೆ ಮನೆಯನ್ನೇ ಬಿಟ್ಟು ಹೋಗಬಹುದಾದ ನಂಬುಗೆ, ವಿಶ್ವಾಸದ ಪ್ರತೀಕ, ನಮ್ಮ ಮುಂಬಯಿ. ಊರಿನಿಂದ ದೂರಾಗಿ ಈ ಪರನಾಡಿನಲ್ಲಿ ನನ್ನ ಕನ್ನಡನುಡಿ ಕಿವಿಗೆ ಬೀಳಲೆಂದು ಹಾತೊರೆದ ಕಾಲವೆಷ್ಟು! ಯಾರೂ ಕನ್ನಡದವರಿಲ್ಲವೇ ಎಂದು ಹೃದಯ ತಳಮಳಿಸಿದ ಬಗೆಯೆಂತು! ಮತ್ತೆ ನನ್ನ ಪ್ರಥಮ ಅನುವಾದ ಕೃತಿಯ ಲೋಕಾರ್ಪಣೆಯೊಂದಿಗೆ ಮುಂಬಯಿ ಕನ್ನಡ ಸಾಹಿತ್ಯಲೋಕದಲ್ಲಿ ಒಂದಾದ ಸಂತಸ, ಸಂಭ್ರಮದ ಪರಿ ಎಂತಹುದು!
ನಮ್ಮ ಸಂಘ, ಸಂಸ್ಥೆಗಳು, ಕನ್ನಡ ಪತ್ರಿಕೆಗಳ ಮೂಲಕ ಹೃದಯವನ್ನು ತಟ್ಟಿದ ಕನ್ನಡ ನುಡಿ, ನಗರದ ಸಾಹಿತಿ ಶ್ರೇಷ್ಠರ ಸಹೃದಯ ಸಂಸರ್ಗ, ಸಾಹಿತ್ಯಲೋಕದಲ್ಲಿ ಮನವರಳಿಸಿದ ಪುಸ್ತಕ ಸಂಪದ, ನನ್ನ ನೆಲೆವೀಡು ಘಾಟ್‌ಕೋಪರ್‌ನ ಸಸ್ಯಕಾಶಿ, ಅಲ್ಲಿ ಮನಕ್ಕೆ ತಂಪೆರೆವ ಆಕರ್ಷಕ ಪಕ್ಷಿಲೋಕದ ಸಿರಿಸಂಪದ.
ಆದರೆ ಕಳೆದೊಂದು ವರ್ಷದಿಂದ ಎಲ್ಲವೂ ಸ್ತಬ್ಧವಾದಂತೆ ಬಂದೆರಗಿದ ಕೊರೊನಾದ ಆಘಾತ ಜೀವಸಂಕುಲವನ್ನೇ ತಾಡಿಸಿದಂತಿದೆ. ಪಕ್ಷಿಗಳೂ ಸಹಜಸ್ವಭಾವವನ್ನು ಮರೆತಿವೆ. ಸದಾ ನನ್ನ ಹೂಕುಂಡಗಳಲ್ಲಿ ಮೊಟ್ಟೆಯಿಡುತ್ತಿದ್ದ ಪಾರಿವಾಳಗಳು ಈ ವರ್ಷ ಒಂದು ಮೊಟ್ಟೆಯಿಟ್ಟದ್ದು ಕಾಣಲಿಲ್ಲ. ನಗರವೀಗ ಸಹಜ ಸ್ಥಿತಿಗೆ ಮರಳುತ್ತಿರುವಾಗ, ಬಂಧುತ್ವ, ಸ್ನೇಹದ ಬೆಸುಗೆ ಇನ್ನಷ್ಟು ಬಿಗಿಯಾಗುವಂತಿದ್ದರೆ, ವಿಶ್ವವನ್ನೇ ಕಬಳಿಸುತ್ತಿರುವ ವೈರಾಣುವಿನ ಕಬಂಧ ಬಾಹುವಿನಿಂದ ನಗರ ಹೊರಬರಲೆತ್ನಿಸಿದ ಪರಿ ಅನನ್ಯ! ಈ ದಿಸೆಯಲ್ಲಿ ನಗರ ನೈರ್ಮಲ್ಯ ಕಾಪಾಡುವ ಮುಂಬಯಿ ಮಹಾನಗರಪಾಲಿಕೆಯ ಸ್ಮರಣೀಯ ನಗರ ಸೇವಕರುಗಳಿಗೆ, ಅಗತ್ಯ ವಸ್ತುಗಳು ಜನರ ಕೈ ಸೇರುವಂತೆ ಶ್ರಮಿಸಿದವರೆಲ್ಲರಿಗೆ, ಅಹರ್ನಿಶಿ ಇತರರಿಗಾಗಿ ಜೀವತೇದ ವೈದ್ಯಕೀಯ ಕ್ಷೇತ್ರದ ಧನ್ವಂತರಿಗಳಿಗೆ, ಸೇವಾದೀಪ್ತಿಯ ದಾದಿಯರಿಗೆ ಈ ನಗರ ಎಂದೆಂದೂ ಋಣಿಯಾಗಬೇಕಿದೆ.ಶ್ಯಾಮಲಾ ಮಾಧವ
ಮುಂಬಯಿ
ಅನುವಾದಕಿ