Advertisement
ಕಳೆದ ಸುಮಾರು 15 ದಿನಗಳಿಂದ ಬಟ್ಟೆ ಚೀಲಗಳನ್ನು ಹೊಲಿಯುವ ಕಾರ್ಯ ಆರಂಭಗೊಂಡಿದ್ದು, ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಬಟ್ಟೆ ಚೀಲಗಳನ್ನು ಹೊಲಿಯಲಾಗುತ್ತಿದೆ. ಗ್ರಾಮದ ಪ್ರತೀ ಮನೆಗಳಿಗೂ ಈ ಮೂರು ಚೀಲಗಳನ್ನು ವಿತರಿಸಲಿದ್ದು, ಕನಿಷ್ಠ ಶುಲ್ಕ ವಿಧಿಸುವ ಉದ್ದೇಶವನ್ನು ಗ್ರಾ.ಪಂ. ಹೊಂದಿದೆ. ಡಿ. 31 ರಂದು ಗ್ರಾ.ಪಂ.ನಲ್ಲಿ ಚೀಲಗಳನ್ನು ಬಿಡುಗಡೆಗೊಳಿಸಿ ಬಳಿಕ ವಿತರಣೆಯ ಕಾರ್ಯ ನಡೆಯಲಿದೆ.
Related Articles
Advertisement
ಮೂರು ಬಗೆಯ ಬಟ್ಟೆ ಚೀಲಗಳ ಬಟ್ಟೆಗೆ ತಲಾ 22 ರೂ., 18 ರೂ. ಹಾಗೂ 9 ರೂ. ವೆಚ್ಚ ತಗುಲಲಿದ್ದು, ಒಟ್ಟು ಮೂರು ಬಗೆಯ ಚೀಲಗಳು ಸೇರಿ 80 ರೂ. ವೆಚ್ಚವಾಗಲಿದೆ. ಇದನ್ನು ಉಚಿತವಾಗಿ ನೀಡಿದರೆ ಎಸೆಯುವ ಸಾಧ್ಯತೆ ಇರುವುದರಿಂದ ಕನಿಷ್ಠ ಶುಲ್ಕ ನಿಗದಿ ಮಾಡಲು ಗ್ರಾ.ಪಂ. ನಿರ್ಧರಿಸಿದೆ.
ಗ್ರಾ.ಪಂ.ನ ಬಟ್ಟೆ ಚೀಲ ವಿತರಣೆಯ ಈ ಕಾರ್ಯ ಪೂರ್ಣಗೊಂಡ ಬಳಿಕ ಸಂಜೀವಿನಿ ಘಟಕ ಮುಂದುವರಿಯಲಿದ್ದು, ಇದರ ಸಿಬಂದಿ ಮುಂದೆ ಬೇರೆ ಬೇರೆ ಕಡೆಯಿಂದ ಬಂದ ಬೇಡಿಕೆಯಂತೆ ಚೀಲಗಳನ್ನು ಹೊಲಿಯುವ ಕುರಿತು ಯೋಜನೆ ರೂಪಿಸಿದ್ದಾರೆ. ಉಳಿದ ಸಮಯದಲ್ಲಿ ಇತರೆ ಹೊಲಿಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಗ್ರಾ.ಪಂ. ಮೂಲಗಳು ತಿಳಿಸಿದೆ.
ಸಂಜೀವಿನಿ ಘಟಕದ ಮಹಿಳೆಯರಿಂದ ಚೀಲ ತಯಾರಿಕೆ
ಪ್ರಸ್ತುತ ಸಂಜೀವಿನಿ ಗುಂಪಿನ 6 ಮಹಿಳೆಯರು ಈ ಕಾರ್ಯದಲ್ಲಿ ತೊಡಗಿದ್ದು, ಮೂರು ಮಂದಿ ಹೊಲಿಗೆ ಕಾರ್ಯ ಹಾಗೂ ಮೂರು ಮಂದಿ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಪ್ರಾರಂಭದ ಹಂತವಾಗಿರುವುದರಿಂದ ಹೊಲಿಗೆ ಕಾರ್ಯ ನಿಧಾನವಾಗಿ ನಡೆಯುತ್ತಿದ್ದು, ಈಗಾಗಲೇ ಮೂರು ಚೀಲಗಳು ಕೂಡ ತಲಾ 1 ಸಾವಿರದಂತೆ ಸಿದ್ಧಗೊಂಡಿದೆ.
ಪ್ರತೀ ಮನೆಗೆ ಬಟ್ಟೆ ಚೀಲಪ್ಲಾಸ್ಟಿಕ್ ಮುಕ್ತ ಗ್ರಾಮ ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿನ ದೃಷ್ಟಿಯಿಂದ ಗ್ರಾ.ಪಂ. ಈ ಕಾರ್ಯಕ್ಕೆ ಮುಂದಾಗಿದ್ದು, ಮಹಿಳೆಯರಿಗೆ ವೇತನ ಸೇರಿದಂತೆ ಎಲ್ಲ ವೆಚ್ಚವನ್ನು ಗ್ರಾ.ಪಂ. ನೀಡುತ್ತದೆ. ಅದರ ಲಾಭಾಂಶವನ್ನು ಸಂಜೀವಿನಿ ಘಟಕಕ್ಕೆ ನೀಡಲಿದ್ದೇವೆ. ಪ್ರತೀ ಮನೆಗೂ ಬಟ್ಟೆ ಚೀಲ ತಲುಪಿಸುವ ಉದ್ದೇಶ ಹೊಂದಲಾಗಿದೆ.
-ಪ್ರವೀಣ್ ಬಿ. ತುಂಬೆ,
ಅಧ್ಯಕ್ಷರು, ಗ್ರಾ.ಪಂ. ತುಂಬೆ¸ ಕಿರಣ್ ಸರಪಾಡಿ