ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಮತ್ತಷ್ಟು ಸರಳಗೊಳಿಸುವ ಸುಳಿವು ನೀಡಿದೆ. ಶೇ. 28ರ ವ್ಯಾಪ್ತಿಯಲ್ಲಿರುವ ಹಲವು ವಸ್ತುಗಳನ್ನು ಶೇ. 18ರ ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬಯಿನಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು ಜಿಎಸ್‌ಟಿ ಜಾರಿಯಾಗುವ ಮೊದಲು 65 ಲಕ್ಷ ನೋಂದಾ À ುತ ಸಂಸ್ಥೆಗಳು ಇದ್ದವು. ಅದು ಈಗ 55 ಲಕ್ಷಕ್ಕಿಂತ ಹೆಚ್ಚಾಗಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಲು ಚಿಂತನೆ ನಡೆಸು ತ್ತಿದ್ದೇವೆ. ಶೇ.99ರಷ್ಟು ವಸ್ತುಗಳನ್ನು ಶೇ. 28ರ ತೆರಿಗೆ ಪಾವತಿ ವ್ಯವಸ್ಥೆಯಿಂದ ಶೇ. 18ರ ವ್ಯವಸ್ಥೆ ತಂದು, ಅಲ್ಲಿ ಕೇವಲ ಆಯ್ದ ಐಷಾರಾಮಿ ವಸ್ತುಗಳನ್ನು ಇರಿಸಿ ಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸಂಸ್ಥೆಗಳಿಗೆ ಜಿಎಸ್‌ಟಿಯನ್ನು ಅತ್ಯಂತ ಸರಳ ತೆರಿಗೆ ವ್ಯವಸ್ಥೆಯನ್ನಾಗಿ ಮಾರ್ಪಾಡು ಮಾಡಲು ಮುಂದಾಗಿದ್ದೇವೆ. ಈ ಹಿಂದೆ ಆಯಾ ರಾಜ್ಯಗಳಲ್ಲಿರುವ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅಥವಾ ಅಬಕಾರಿ ಸುಂಕದ ಪ್ರಮಾಣದ ಆಧಾರದಲ್ಲಿ ಜಿ ಎಸ್‌ಟಿ ನಿರ್ಧರಿಸಲಾಗುತ್ತಿತ್ತು. ದಶಕ ಗಳಿಂದ ಈ ರೀತಿಯ ಹೊಸ ಮಾದರಿಯ ತೆರಿಗೆ ವ್ಯವಸ್ಥೆ ಜಾರಿಗೆ ಕಾಯಲಾಗುತ್ತಿತ್ತು . ಈ ವ್ಯವಸ್ಥೆ ಜಾರಿಯಿಂದಾಗಿ ವ್ಯಾಪಾರ ವಹಿ ವಾಟುಗಳಲ್ಲಿರುವ ಭಿನ್ನತೆ ನಿವಾರಣೆ ಯಾಗಿದೆ ಮತ್ತು ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ತೆರಿಗೆ ಸುಧಾರಣೆ ಜಾರಿ ಮಾಡುವುದು ಕ್ಲಿಷ್ಟಕರವಾಗಿದೆ ಎಂದಿದ್ದಾರೆ. ಎಲ್ಲ ಹಂತಗಳಲ್ಲಿಯೂ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡುವುದು ಕೇಂದ್ರ ಸರಕಾರದ ಗುರಿಯಾಗಿದೆ ಎಂದು ಹೇಳಿ ದ್ದಾರೆ. ಪ್ರತಿಯೊಬ್ಬರೂ ಕೂಡ ಇದು ಭಾರತ. ಇಲ್ಲಿ ಇಷ್ಟೇ ಆಗುತ್ತದೆ ಎಂದು ಮಾತ ನಾಡಿಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ. 2014ರ ವರೆಗೆ ಶೇ.55ರಷ್ಟು ಮನೆಗಳಿಗೆ ಮಾತ್ರ ಅಡುಗೆ ಅನಿಲ ಸಂಪರ್ಕ ಇತ್ತು. ಅದರ ಪ್ರಮಾಣ ಈಗ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕಾಮಗಾರಿಗೆ ಚಾಲನೆ: ಮುಂಬಯಿನಲ್ಲಿ ಮಹಾರಾಷ್ಟ್ರ ಸರ್ಕಾ ರದ 18 ಸಾವಿರ ಕೋಟಿ ರೂ. ಮೌಲ್ಯದ ಸಾಮೂಹಿಕ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರದಲ್ಲಿನ ಎನ್‌ಡಿಎ ಸರಕಾರ ನಿಜವಾದ ಆದರ್ಶ ಸಮಾಜ ನಿರ್ಮಿಸಲು ಯತ್ನಿಸುತ್ತಿದೆ ಎಂದರು. ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಸರಕಾರದ ಅವಧಿಯಲ್ಲಿ ಬಹಿ ರಂಗವಾಗಿ ಆದರ್ಶ ಸೊಸೈಟಿ ಹಗರಣ ವನ್ನು ಪ್ರಧಾನಿ ಪರೋಕ್ಷವಾಗಿ ಪ್ರಸ್ತಾವಿಸಿದರು.