ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 968 ಕೊರೊನಾ ಪಾಸಿಟಿವ್ ವರದಿಯಾಗಿದ್ದು, 337 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ದ.ಕ. ಜಿಲ್ಲೆಯ ಓರ್ವ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
17784 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಶೇ. 5.44ರಷ್ಟು ಮಂದಿಯಲ್ಲಿ ಸೋಂಕು ವರದಿಯಾಗಿದೆ. ವಾರದ ಸೋಂಕಿನ ದರ ಶೇ. 3.69 ಇದೆ. ಸಕ್ರೀಯ ಪ್ರಕರಣ ಸಂಖ್ಯೆ 4918 ಗಡಿ ಸಮೀಪಿಸಿದೆ.
ಬೆಂಗಳೂರು ನಗರ 887, ದಕ್ಷಿಣಕನ್ನಡ 21, ಉಡುಪಿ 17, ಮೈಸೂರು 14, ಧಾರವಾಡ 10, ಬಳ್ಳಾರಿ, ಬೆಂಗಳೂರು ಗ್ರಾಮಾಂತರ 3, ಹಾಸನ , ಬೆಳಗಾವಿ, ಬೀದರ್ 2, ಹಾವೇರಿ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ವರದಿಯಾಗಿದೆ. ಉಳಿದ ಜಿಲ್ಲೆಯಲ್ಲಿ ಶೂನ್ಯ ಪಾಸಿಟಿವ್ ವರದಿಯಾಗಿದೆ.
ಕೇರಳದಲ್ಲಿ ಮಾಸ್ಕ್ ಕಡ್ಡಾಯ
ಕುಂಬಳೆ: ಕೇರಳದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಧರಿಸದವರಿಂದ ದಂಡ ವಸೂಲು ಮಾಡುವಂತೆ ಸರಕಾರ ಆದೇಶಿಸಿದೆ.
2 ತಿಂಗಳ ಹಿಂದೆ ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶಿಸಿತ್ತು. ಆದರೆ ಪಾಲನೆ ಯಾಗಿರಲಿಲ್ಲ. ಸೋಮವಾರ ರಾಜ್ಯದಲ್ಲಿ 2,994 ಮಂದಿಗೆ ಕೋವಿಡ್ ದೃಢಪಟ್ಟಿದೆ.