ಡೆಹ್ರಾಡೂನ್: ಯೋಗ ಸುಲಭದ್ದಲ್ಲ. ಯೋಗ ಟೀಚರ್ ಆಗಬೇಕೆಂದರೆ ಹಲವು ವರ್ಷಗಳ ಕಲಿಕೆಯಿರಬೇಕು. ಆದರೆ ದುಬೈನ 9 ವರ್ಷದ ಬಾಲಕ ಅತಿ ಚಿಕ್ಕ ವಯಸ್ಸಿನಲ್ಲೇ ಯೋಗ ಟೀಚರ್ ಆಗಿದ್ದಾನೆ. ಅದಷ್ಟೇ ಅಲ್ಲದೆ, ವಿಶ್ವದ ಅತ್ಯಂತ ಕಿರಿಯ ಯೋಗ ಟೀಚರ್ ಎಂದು ಗಿನ್ನೆಸ್ ದಾಖಲೆಯನ್ನೂ ಬರೆದಿದ್ದಾನೆ.
ರೆಯಾಂಶ್ ಸುರಾನಿ ಹೆಸರಿನ ಬಾಲಕ ತನ್ನ ತಂದೆ ತಾಯಿ ಯೋಗಾಭ್ಯಾಸ ಮಾಡುವುದನ್ನು ಕಂಡು ತಾನೂ 4ನೇ ವರ್ಷದಿಂದಲೇ ಯೋಗಾಭ್ಯಾಸ ಆರಂಭಿಸಿದ್ದಾನೆ. ನಂತರ ಪೋಷಕರು ಉತ್ತರಾಖಂಡದ ರಿಶೀಕೇಶದಲ್ಲಿ ಯೋಗ ತರಬೇತಿ ಪಡೆದುಕೊಳ್ಳಲು ತೆರಳಿದ್ದು ಕಂಡು ಆತನಿಗೂ ತಾನೊಬ್ಬ ಯೋಗ ಟೀಚರ್ ಆಗಬೇಕೆನ್ನುವ ಆಸೆ ಹುಟ್ಟಿದೆ.
ಇದನ್ನೂ ಓದಿ:ಗೂಗಲ್ ಮ್ಯಾಪ್‌ನಲ್ಲಿ ತಮಿಳು ಭಾಷೆಯಲ್ಲಿ ಆನೆಗೊಂದಿ ಹೆಸರು : ನೆಟ್ಟಿಗರ ಆಕ್ರೋಶ
ಅದೇ ಹಿನ್ನೆಲೆ, ಆನಂದ್ ಶೇಖರ್ ಯೋಗ ಶಾಲೆಯಲ್ಲಿ 200 ಗಂಟೆಗಳ ಯೋಗ ಟೀಚರ್ ಕೋರ್ಸ್ ಸೇರಿದ್ದಾನೆ.
ಆ ಕೋರ್ಸ್ 2021ರ ಜೂನ್‌ನಲ್ಲಿ ಸಂಪೂರ್ಣವಾಗಿದ್ದು, ಪ್ರಮಾಣ ಪತ್ರವೂ ಸಿಕ್ಕಿದೆ. ಈ ಬಾಲಕನ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಗಿನ್ನೆಸ್ ದಾಖಲೆ ಕೊಡಲಾಗಿದೆ.