Advertisement

Crime: 6 ತಿಂಗಳಲ್ಲಿ 9 ಮಹಿಳೆಯರ ಹತ್ಯೆ… ಸರಣಿ ಹಂತಕನ ಹುಡುಕಾಟದಲ್ಲಿ ಯುಪಿ ಪೊಲೀಸರು

12:09 PM Dec 01, 2023 | Team Udayavani |

ಉತ್ತರಪ್ರದೇಶ: ಕಳೆದ ಕೆಲವು ತಿಂಗಳುಗಳಿಂದ ಬರೇಲಿಯಲ್ಲಿ ಹಲವಾರು ಮಹಿಳೆಯರ ಹತ್ಯೆಯ ವರದಿಯಾಗಿದ್ದು ಇದೀಗ ಉತ್ತರ ಪ್ರದೇಶ ಪೊಲೀಸರು ಸರಣಿ ಹಂತಕನ ಹುಡುಕಾಟದಲ್ಲಿದ್ದಾರೆ.

Advertisement

ವಿವರಗಳ ಪ್ರಕಾರ, ಈ ವರ್ಷ ಜೂನ್‌ನಿಂದ ನಗರದಲ್ಲಿ ಇಲ್ಲಿಯವರೆಗೆ ಸುಮಾರು ಒಂಬತ್ತು ಮಹಿಳೆಯರ ಹತ್ಯೆ ಮಾಡಲಾಗಿದೆ, ಆದರೆ ಇದುವರೆಗೂ ಆರೋಪಿಗಳ ಪತ್ತೆ ಮಾತ್ರ ಆಗಲಿಲ್ಲ ಪೊಲೀಸರ ಪ್ರಕಾರ ಈ ಹತ್ಯೆಯ ಹಿಂದೆ ಓರ್ವ ವ್ಯಕ್ತಿಯ ಅಥವಾ ಒಂದು ಗುಂಪಿನ ಕೈವಾಡ ಇರಬಹುದು ಎಂದು ಹೇಳಲಾಗಿದ್ದು ಈ ನಿಟ್ಟಿನಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಅಧಿಕಾರಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು ಆರೋಪಿಗಳು ಸಿಗುವವರೆಗೆ ಗ್ರಾಮದ ಮಹಿಳೆಯರು ಹಗಲು ಅಥವಾ ರಾತ್ರಿ ಹೊತ್ತು ಒಬ್ಬಂಟ್ಟಿಯಾಗಿ ತಿರುಗಬಾರದು, ನಗರದ ಶಾಹಿ, ಫತೇಗಂಜ್ ಪಶ್ಚಿಮ ಮತ್ತು ಶೀಶ್‌ಗಢ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಬಲಿಪಶುಗಳಲ್ಲಿ 50 ರಿಂದ 65 ವರ್ಷ ವಯಸ್ಸಿನವರೇ ಹೆಚ್ಚಿನವರಾಗಿದ್ದಾರೆ, ಅಲ್ಲದೆ ಕೊಲೆಯಾದ ಮಹಿಳೆಯರನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದ್ದು ಜೊತೆಗೆ ದರೋಡೆಗಾಗಿ ಅಥವಾ ಲೈಂಗಿಕ ಕಿರುಕುಳ ನೀಡಲು ಮಾಡಿರುವ ಕೊಲೆಗಳು ಅಲ್ಲ ಎಂದು ಹೇಳಿದ್ದಾರೆ. ಎಲ್ಲ ಕೊಲೆಗಳು ಒಂದೇ ರೀತಿಯಲ್ಲಿ ನಡೆದಿರುವುದರಿಂದ ಇದರ ಹಿಂದೆ ಓರ್ವ ವ್ಯಕ್ತಿಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದ್ದು ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Team India; ರೋಹಿತ್ ಗೆ T20 ನಾಯಕತ್ವ ನೀಡಲಾಯಿತು, ಆದರೆ…: T20 ವಿಶ್ವಕಪ್ ಗೆ ಯಾರು ನಾಯಕ?

Advertisement

Udayavani is now on Telegram. Click here to join our channel and stay updated with the latest news.

Next