ಬೀಜಿಂಗ್: ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಜನರು ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಈಶಾನ್ಯ ಪ್ರಾಂತ್ಯದ ಹೈಲಾಂಗ್ ಜಿಯಾಂಗ್ ನ ಜಿಕ್ಸಿ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಜೋಳದ ಹಿಟ್ಟಿನಲ್ಲಿ ಒಂದು ವರುಷಗಳ ಕಾಲ ನೂಡಲ್ಸ್ ಅನ್ನು ಇಡಲಾಗಿತ್ತು. ಈ ಖಾದ್ಯವನ್ನು ಸ್ಥಳೀಯವಾಗಿ ‘ಸುವಾಂಟಾಂಗ್ಜಿ’ ಎಂದು ಕರೆಯಲಾಗಿದ್ದು, ನೂಡಲ್ಸ್ ಸೇವಿಸಿದ 5 ದಿನಗಳ ನಂತರ ಒಂದೇ ಕುಟುಂಬದ 9 ಮಂದಿ ಪ್ರಾಣತ್ಯೆಜಿಸಿದ್ದಾರೆ.
ಅದೃಷ್ಟವಶಾತ್, ನೂಡಲ್ಸ್ ರುಚಿಯನ್ನು ಇಷ್ಟಪಡದೆ ಅದನ್ನು ಸೇವಿಸಲು ನಿರಾಕರಿಸಿದ ಮೂರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನೂಡಲ್ಸ್ ಅನ್ನು ಫ್ರೀಜರ್ ನಲ್ಲಿಟ್ಟ ಕಾರಣ ಅದು ‘Bongrekik Acid’ ಆಗಿ ಪರಿವರ್ತಿತವಾಗಿತ್ತು ಎಂದು ಹೈಲಾಂಗ್-ಜಿಯಾಂಗ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ನಲ್ಲಿ ಆಹಾರ ಸುರಕ್ಷತೆಯ ನಿರ್ದೇಶಕರಾಗಿರುವ ಗಾವೊ ಫೀ ತಿಳಿಸಿದ್ದಾರೆ.
ಇದನ್ನೂ ಓದಿ: CBI ತನಿಖೆಗಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದ ಠಾಕ್ರೆ ಸರ್ಕಾರ: ಏನಿದು ಬೆಳವಣಿಗೆ ?
ವರದಿಯ ಪ್ರಕಾರ, ಕಲುಷಿತ ಆಹಾರವನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ಬೊಂಗ್ಕ್ರೆಕ್ ವಿಷದ ಲಕ್ಷಣಗಳು ಸಾಮಾನ್ಯವಾಗಿ ತೋರಿಸಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ವ್ಯಕ್ತಿಗಳಿಗೆ ಹೊಟ್ಟೆ ನೋವು, ಬೆವರುವುದು, ಸಾಮಾನ್ಯ ದೌರ್ಬಲ್ಯ ಲಕ್ಷಣಗಳು ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಅಂತಿಮವಾಗಿ ಕೋಮಾಕ್ಕೆ ಜಾರುತ್ತಾರೆ. ಕೆಲವೊಮ್ಮೆ 24 ಗಂಟೆಗಳಲ್ಲಿ ಸಾವು ಸಂಭವಿಸಬಹುದು. ಇದು ಮೂತ್ರಪಿಂಡಗಳು, ಹೃದಯ ಮತ್ತು ಮೆದುಳು ಸೇರಿದಂತೆ ಅನೇಕ ಮಾನವ ಅಂಗಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ಗಾವೊ ಫೀ ಹೇಳಿದ್ದಾರೆ.
ಇದನ್ನೂ ಓದಿ: ಉದಯವಾಣಿ ಸಂದರ್ಶನ: ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್ ಚಾಳಿ!