ಹೊಸದಿಲ್ಲಿ: ಕಾಶ್ಮೀರದ ಉರಿಯಲ್ಲಿ ರುವ ಭಾರತೀಯ ಸೇನಾ ಶಿಬಿರದ ಮೇಲಿನ ದಾಳಿಗೆ ಪ್ರತಿಯಾಗಿ ಪಾಕಿಸ್ಥಾನದ ಬಾಲಾಕೋಟ್‌ನ ಉಗ್ರರ ಶಿಬಿರದ ಮೇಲೆ 2019ರ ಫೆಬ್ರವರಿಯಲ್ಲಿ ಭಾರತ ವಾಯುದಾಳಿ ನಡೆಸಿತ್ತು. ಇದ ರಿಂದ ಕೆರಳಿದ್ದ ಪಾಕಿಸ್ಥಾನವು ಭಾರತದ ಮೇಲೆ ವಾಯು ದಾಳಿ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿ, ಐಎಎಫ್ ನಿಂದ ಹಿಮ್ಮೆ ಟ್ಟಿಸಿಕೊಂಡಿತು.
ಈ ಸಂದರ್ಭ ದಲ್ಲಿ ಐಎಎಫ್ ವಿಂಗ್ ಕಮಾಂ ಡರ್ ಅಭಿನಂದನ್ ವರ್ಧಮಾನ್ ಪಾಕ್ ಪ್ರದೇಶದಲ್ಲಿ ಲ್ಯಾಂಡ್ ಆದರು. ಅವರನ್ನು ಪಾಕ್ ಸೇನೆ ವಶದಲ್ಲಿಟ್ಟು ಕೊಂಡದ್ದು ಎಲ್ಲರಿಗೂ ತಿಳಿದೇ ಇದೆ.
2019ರ ಫೆ.26ರಿಂದ ಫೆ.28ರವರೆಗೆ ನಡೆದ ವಿದ್ಯಮಾನಗಳ ಕುರಿತು ಪಾಕಿಸ್ಥಾನಕ್ಕೆ ಆಗಿನ ಭಾರತದ ಹೈಕಮಿಶನರ್ ಅಜಯ್ ಬಿಸಾರಿಯಾ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. “ಈ ಸಂದರ್ಭದಲ್ಲಿ ಅಭಿನಂದನ್ ಬಿಡುಗಡೆಗೆ ಪಾಕ್ ಮೇಲೆ ಭಾರತ ತೀವ್ರ ಒತ್ತಡ ಹಾಕುತ್ತಿತ್ತು. ಪಾಕ್ ಗಡಿಯಲ್ಲಿ ಭಾರತದ 9 ಕ್ಷಿಪಣಿಗಳು ದಾಳಿಗೆ ಸಿದ್ಧವಾಗಿದ್ದವು. ಇದನ್ನು ಅರಿತ ಪಾಕ್ ಸರಕಾರ ಗಡ ಗಡ ನಡುಗಲು ಆರಂ ಭಿಸಿತು. ಪಾಕ್ ಸರಕಾರದ ಉನ್ನತ ಅಧಿಕಾರಿಗಳು 2019ರ ಫೆ.27ರ ಮಧ್ಯ ರಾತ್ರಿಯೇ ನನ್ನ ಮನೆಗೆ ಧಾವಿಸಿದರು. ಪ್ರಧಾನಿ ಮೋದಿ ಮತ್ತು ಪ್ರಧಾನಿ ಇಮ್ರಾನ್ ಖಾನ್ ನಡುವೆ ಮಾತುಕತೆಗೆ ವೇದಿಕೆ ಕಲ್ಪಿಸುವಂತೆ ಕೋರಿದರು. ಭಾರತದ ಸಂಭಾವ್ಯ ದಿಟ್ಟ ಉತ್ತರಕ್ಕೆ ಹೆದರಿ 2 ದಿನಗಳಲ್ಲಿ ಅಭಿನಂದನ್ ಅವರನ್ನು ಪಾಕ್ ಬಿಡುಗಡೆ ಮಾಡಿತು’ ಎಂದಿದ್ದಾರೆ.