Advertisement
ಕೊಯ್ಲಿಗೆ ಬಂದಿದ್ದ ಭತ್ತ ಸಂಪೂರ್ಣ ನೆಲಕ್ಕಚ್ಚಿದೆ. ಕಟಾವು ಮಾಡಿದ ಭತ್ತದ ರಾಶಿಗಳು ಮಳೆ ನೀರಿಗೆ ತೊಯ್ದು ಮೊಳಕೆಯೊಡದಿವೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಭತ್ತ ಬೆಳೆದ ರೈತರು ನೋವು ಅನುಭವಿಸುವಂತಾಗಿದೆ.
ನಡೆಸಿದರು. ತಾಲೂಕಿನ ಕವಲೆತ್ತು, ಕೋಡಿಯಾಲ, ಮುದೆನೂರ, ನಾಗೇನಹಳ್ಳಿ, ಹೊಳೆಆನ್ವೇರಿ, ಕೋಟಿಹಾಳ, ತುಮ್ಮಿನಕಟ್ಟಿ, ಪತ್ಯಾಪುರ, ಗುಡಗೂರ, ಮೈದೂರ, ಚಿಕ್ಕಕುರವತ್ತಿ, ಚೌಡಯ್ಯದಾನಪುರ, ಗಂಗಾಪುರ, ಕಾಕೋಳ, ಹೂಲಿಹಳ್ಳಿ, ಕರೂರು, ಚಳಗೇರಿ, ಮಾಕನೂರ, ನದಿಹರಳಳ್ಳಿ, ಮೆಡ್ಲೆರಿ, ಐರಣಿ, ಸೋಮಲಾಪುರ, ಹಿರೇಬಿದರಿ, ಕೋಣನತಂಬಿಗಿ, ಉದಗಟ್ಟಿ, ಹೀಲದಹಳ್ಳಿ, ಬೇಲೂರ, ಕೆರೆಮಲ್ಲಾಪುರ, ಚಿಕ್ಕಹರಳಳ್ಳಿ, ದೇವರಗುಡ್ಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುರಿದ ಅಕಾಲಿಕ ಮಳೆಗೆ 892.3 ಹೆಕ್ಟೇರ್ ಬೆಳೆ ನಷ್ಟವಾಗಿ ಸುಮಾರ 1.25 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಹೀತೇಂದ್ರ ಗೌಡಪ್ಪಳವರ “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
Advertisement
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ನಗರದ 1ಮನೆ, ಗ್ರಾಮೀಣ ಭಾಗದ ಇಟಗಿ 1, ಕುದರಿಹಾಳ ಗ್ರಾಮದ 1, ದೇವರಗುಡ್ಡದ 2, ಕವಲೆತ್ತ ಗ್ರಾಮದ 2 ಮನೆ ಸೇರಿ ಒಟ್ಟು ಸುಮಾರು 7 ಮನೆಗಳು ಭಾಗಶಃ ಬಿದ್ದಿರುವ ವರದಿಯಾಗಿದೆ. ಇನ್ನೂ ಮಳೆ ಮುಂದುವರೆದಿದ್ದು, ಇದರ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.ಶಂಕರ ಜಿ.ಎಸ್., ತಹಶೀಲ್ದಾರ್