Advertisement

ಸಿಬಂದಿ ನಿರ್ಲಕ್ಷ್ಯ; ಬ್ಯಾಂಕ್ ಲಾಕರ್ ರೂಂನೊಳಗೆ ಬಂಧಿಯಾದ ಅಜ್ಜ…18 ಗಂಟೆ ಬಳಿಕ ರಕ್ಷಣೆ

03:50 PM Mar 30, 2022 | Team Udayavani |

ಹೈದರಾಬಾದ್: 85 ವರ್ಷದ ಅಜ್ಜನನ್ನು ಬ್ಯಾಂಕ್ ಸಿಬಂದಿ ಆಕಸ್ಮಿಕವಾಗಿ ಬ್ಯಾಂಕ್ ಲಾಕರ್ ರೂಂನೊಳಗೆ ಲಾಕ್ ಮಾಡಿ ಹೋಗಿರುವ ಘಟನೆ ಸೋಮವಾರ (ಮಾರ್ಚ್ 28) ಹೈದರಾಬಾದ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಟಿಪ್ಪು ಸುಲ್ತಾನ್ ಇತಿಹಾಸವೆಂದರೆ ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ: ಬಿಜೆಪಿ

ಇಡೀ ರಾತ್ರಿ ಬ್ಯಾಂಕ್ ಲಾಕರ್ ರೂಂನೊಳಗೆ ಕಳೆದಿದ್ದ 85 ವರ್ಷದ ವ್ಯಕ್ತಿಯನ್ನು ಮಂಗಳವಾರ ಬೆಳಗ್ಗೆ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮಂಗಳವಾರ ಬೆಳಗ್ಗೆ ಬ್ಯಾಂಕ್ ತೆರೆದಾಗ ವಯಸ್ಸಾದ ವ್ಯಕ್ತಿಯೊಬ್ಬರು ಲಾಕರ್ ರೂಂನೊಳಗೆ ಇದ್ದಿರುವುದನ್ನು ಸಿಬಂದಿಗಳು ಗಮನಿಸಿರುವುದಾಗಿ ವರದಿ ತಿಳಿಸಿದೆ.

ವಿ.ಕೃಷ್ಣ ರೆಡ್ಡಿ (85ವರ್ಷ) ಎಂಬವರು ಸುಮಾರು 18 ಗಂಟೆಗಳ ಕಾಲ ಬ್ಯಾಂಕ್ ನ ಲಾಕರ್ ರೂಂನೊಳಗೆ ಕಳೆದ ಪರಿಣಾಮ ತೀವ್ರ ಆಘಾತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ?

Advertisement

ಜುಬಿಲಿ ಹಿಲ್ಸ್ ರಸ್ತೆಯ ನಿವಾಸಿಯಾಗಿರುವ ವಿ.ಕೃಷ್ಣಾ ರೆಡ್ಡಿ ಅವರು ಸೋಮವಾರ ಸಂಜೆ 4.30ರ ಹೊತ್ತಿಗೆ ಬಂಜಾರಾ ಹಿಲ್ಸ್ ಪ್ರದೇಶದಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯ ಲಾಕರ್ ನಲ್ಲಿರುವ ಕೆಲವೊಂದು ಆಸ್ತಿಗೆ ಸಂಬಂಧಪಟ್ಟ ದಾಖಲೆಯನ್ನು ತೆಗೆದುಕೊಂಡು ಬರಲು ತೆರಳಿದ್ದರು.

ಪರಿಶೀಲನೆಯ ನಂತರ ರೆಡ್ಡಿ ಅವರನ್ನು ಲಾಕರ್ ರೂಂನೊಳಗೆ ಕಳುಹಿಸಲಾಗಿತ್ತು. ಆದರೆ ಬ್ಯಾಂಕ್ ಕೆಲಸದ ಮುಕ್ತಾಯದ ಅವಧಿ ಬಗ್ಗೆ ರೆಡ್ಡಿ ಅವರ ಗಮನಕ್ಕೆ ಬಂದಿರಲಿಲ್ಲ. ಬ್ಯಾಂಕ್ ಲಾಕರ್ ರೂಂನಲ್ಲಿದ್ದ ರೆಡ್ಡಿಯವರನ್ನು ಯಾರೂ ಗಮನಿಸಲಿಲ್ಲ, ಬ್ಯಾಂಕ್ ಕೆಲಸದ ಸಮಯ ಮುಕ್ತಾಯಗೊಂಡಿದ್ದರಿಂದ ಸಿಬಂದಿಗಳು ಬ್ಯಾಂಕ್ ಗೆ ಬೀಗ ಹಾಕಿ ತೆರಳಿಬಿಟ್ಟಿದ್ದರು.

ರಾತ್ರಿಯಾದರೂ ರೆಡ್ಡಿಯವರು ಮನೆಗೆ ಬಾರದಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿ, ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಮಂಗಳವಾರ ಬೆಳಗ್ಗೆ ಬ್ಯಾಂಕ್ ಸಿಬಂದಿಗಳು ಬಂದ ನಂತರವೇ ರೆಡ್ಡಿಯವರು ಲಾಕರ್ ಕೋಣೆಯೊಳಗೆ ಇದ್ದಿರುವುದು ತಿಳಿದು ಬಂದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next