Advertisement
ತಾಲೂಕಿನಲ್ಲಿ ಇರುವ 277 ಸರಕಾರಿಪ್ರಾಥಮಿಕ ಶಾಲೆಗಳ ಒಟ್ಟು 720 ವಠಾರ ಶಾಲೆಗಳನ್ನು ಪ್ರಾರಂಭಿಸಲಾಗಿದೆ. 33 ಸರಕಾರಿ ಪ್ರೌಢಶಾಲೆಗಳ ಒಟ್ಟು 124 ವಠಾರ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಕಲಿಕೆ ಮತ್ತು ಬೋಧನೆ ಮಾಡಲಾಗುತ್ತಿದೆ. ನಿರಂತರ ಕಲಿಕೆ ಹಾಗೂ ಮಕ್ಕಳಲ್ಲಿರುವ ಸಾಮರ್ಥ್ಯ ಆಧಾರಿತವಾಗಿ ಕಲಿಕಾ ಪ್ರಕ್ರಿಯೆ ನಡೆಸಲಾಗುತ್ತಿದೆ. ಕಾಲ್ಪನಿಕ ಶಾಲೆ ಆನ್‌ಲೈನ್ ಮೂಲಕ 63 ಸಹಶಿಕ್ಷಕರು ಬೋಧಿಸುವಲ್ಲಿ ತೊಡಗಿದ್ದಾರೆ
Related Articles
Advertisement
ಅಫಜಲಪುರ: ಲಾಕ್‌ಡೌನ್‌ನಿಂದಾಗಿ ಶಾಲೆಗಳು ಬಂದ್ ಮಾಡಲಾಗಿತ್ತು. ಅನ್ ಲಾಕ್ ಘೋಷಣೆ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ವಠಾರ ಶಾಲೆಗಳನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಹಾಗೆಯೇ ಖಾಸಗಿ ಅನುದಾನ ರಹಿತ ಶಾಲೆಗಳಲ್ಲೂ ವಿದ್ಯಾರ್ಥಿಗಳ ವ್ಯಾಸಂಗಕ್ಕೆತೊಂದರೆ ಆಗಬಾರದೆಂದು ವಠಾರ ಶಾಲೆಗಳನ್ನು ತೆರೆದು ಕಲಿಕೆ ಆರಂಭಿಸಿದ್ದೇವೆ ಎಂದು ಮುಖ್ಯಗುರು ನಿಂಗಣ್ಣ ಪೂಜಾರಿ ಹೇಳಿದರು.
ತಾಲೂಕಿನ ಮಲ್ಲಾಬಾದ ಗ್ರಾಮದ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ವಠಾರ ಶಾಲೆ ಆರಂಭಗೊಂಡ ಕುರಿತು ಮಾತನಾಡಿದ ಅವರು, ಸರ್ಕಾರಿ ಶಾಲೆಗಳುಹಾಗೂ ಅನುದಾನಿತ ಶಾಲೆಗಳಲ್ಲಿ ವಠಾರ ಶಾಲೆ ಆರಂಭಿಸಿ ಪಾಠ ಬೋಧನೆ ಮಾಡಲಾಗುತ್ತಿದೆ. ಆದರೆ ಅನುದಾನ ರಹಿತ ಶಾಲೆಗಳ ಮಕ್ಕಳು ಪಾಠದಿಂದಇನ್ನೂ ದೂರ ಉಳಿದಿದ್ದಾರೆ. ಹೀಗಾಗಿ ನಮ್ಮ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರು ಗಂಭೀರ ಚಿಂತನೆ ಮಾಡಿ ಅನುದಾನ ರಹಿತ ಶಾಲೆಯಾದರೂ ಸರಿ ಪಾಠ ಬೋಧನೆ ಆರಂಭಿಸಿ. ಸರ್ಕಾರ, ಇಲಾಖೆಯಿಂದ ಏನು ಸಲಹೆ,ಸಹಕಾರ ಸಿಗುತ್ತದೋ ಆಮೇಲೆ ನೋಡೋಣ. ಮೊದಲು ಮಕ್ಕಳ ಕಲಿಕೆ ಶುರುವಾಗಲಿ ಎಂದು ಸಲಹೆ ನೀಡಿದ್ದರಿಂದ ನಾವು ವಠಾರ ಶಾಲೆ ಆರಂಭಿಸಿದ್ದೇವೆ ಎಂದರು. ಶಿಕ್ಷಕರಾದ ಗುರು ಮಗಿ, ಶಿವಸಂಗಪ್ಪ ಬಬಲೇಶ್ವರ, ಯಲ್ಲಾಲಿಂಗ ಮೈಲಾರಿ ಇದ್ದರು.