Advertisement

ಕೋವಿಡ್ : ರಾಜ್ಯದಲ್ಲಿಂದು 14975 ಸೋಂಕಿತರು ಗುಣಮುಖ, 8249 ಜನರಿಗೆ ಕೋವಿಡ್

07:10 PM Jun 11, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖ ಕಂಡಿದೆ.

Advertisement

ಇಂದು ( ಜೂನ್ 11) ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣನ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆ ( ದಿನಾಂಕ : 10:06:2021, 00:00 ರಿಂದ 23:59 ರವರೆಗೆ)ಗಳ ಅವಧಿಯಲ್ಲಿ  ಹೊಸದಾಗಿ 8249 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದೆ. ಹಾಗೂ ಇದೆ ಅವಧಿಯಲ್ಲಿ 159 ಜನರು ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.

ಗುಣಮುಖರ ಸಂಖ್ಯೆ :

ಇನ್ನು ಮೇಲೆ ತಿಳಿಸಿದ ಅವಧಿಯಲ್ಲಿ 14975 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2511105 ಏರಿಕೆಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

Advertisement

ಬಾಗಲಕೋಟೆ-73, ಬಳ್ಳಾರಿ-189, ಬೆಳಗಾವಿ-436, ಬೆಂಗಳೂರು ಗ್ರಾಮಾಂತರ-234, ಬೆಂಗಳೂರು ನಗರ-1154, ಬೀದರ್-9,  ಚಾಮರಾಜನಗರ-162, ಚಿಕ್ಕಬಳ್ಳಾಪುರ-168, ಚಿಕ್ಕಮಗಳೂರು-332, ಚಿತ್ರದುರ್ಗ-123,  ದಕ್ಷಿಣ ಕನ್ನಡ-506, ದಾವಣಗೆರೆ-260, ಧಾರವಾಡ-217,  ಗದಗ-66, ಹಾಸನ-733, ಹಾವೇರಿ-65, ಕಲಬುರಗಿ-29, ಕೊಡಗು-189, ಕೋಲಾರ-179, ಕೊಪ್ಪಳ-98, ಮಂಡ್ಯ-366,  ಮೈಸೂರು-817, ರಾಯಚೂರು-61, ರಾಮನಗರ-57, ಶಿವಮೊಗ್ಗ-429, ತುಮಕೂರು-576,  ಉಡುಪಿ-215, ಉತ್ತರ ಕನ್ನಡ-311, ವಿಜಯಪುರ-174, ಯಾದಗಿರಿ-21.

Advertisement

Udayavani is now on Telegram. Click here to join our channel and stay updated with the latest news.

Next