Advertisement

ಒಂದು ದಿನದಲ್ಲಿ 82 ಪ್ರಕರಣ

06:50 PM Apr 02, 2020 | Suhan S |

ಮುಂಬಯಿ, ಎ. 1: ರಾಜ್ಯದಲ್ಲಿ ಮಂಗಳವಾರ ಒಟ್ಟು 82  ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಇದು ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳ ದಾಖಲಾದಂತಾಗಿದೆ. ಆದರೆ ಅಧಿಕಾರಿಗಳು ಜನತೆ ಚಿಂತಿಸುವ ಅಗತ್ಯವಿಲ್ಲ. ಖಾಸಗಿ ಪ್ರಯೋಗಾಲಯಗಳ ಫ‌ಲಿತಾಂಶಗಳ ಕಾರಣದಿಂದಾಗಿ ಈ ಏರಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೊಸ ಪ್ರಕರಣಗಳಲ್ಲಿ ಮುಂಬಯಿಯಿಂದಲೆ 59 ಪ್ರಕರಣಗಳು ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ನಗರದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ 151 ಆಗಿದೆ. ಅಹ್ಮದ್‌ನಗರದಲ್ಲಿ ಮೂರು ಪ್ರಕರಣಗಳು ವರದಿಯಾಗಿದ್ದು, ಪುಣೆ, ಥಾಣೆ, ವಸಾಯಿ, ವಿರಾರ್‌ಮತ್ತು ಕಲ್ಯಾಣ್-ಡೊಂಬಿವಾಲಿ ನಗರಗಳಲ್ಲಿ ತಲಾ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಹೇಳಿದರು.

ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ ಪಶ್ಚಿಮ ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನು ಎಂಟಕ್ಕೆ ಇಳಿಸಿದೆ. ಮಾರ್ಚ್‌ 22ರಂದು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸ್ಥಗಿತಗೊಳಿಸುವ ಘೋಷಣೆ ಮಾಡಿದ ಮೊದಲ ರಾಜ್ಯವಾದ ಮಹಾರಾಷ್ಟ್ರವು ಭಾರತದ ಎಲ್ಲ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವು ನೋವುಗಳನ್ನು ಹೊಂದಿದೆ. 59 ಪ್ರಕರಣಗಳ ಸಂಖ್ಯೆ ಖಾಸಗಿ ಪ್ರಯೋಗಾಲಯಗಳು ಕಳೆದ ಮೂರು ದಿನಗಳಲ್ಲಿ ನಡೆಸಿದ ಪರೀಕ್ಷಾ ವರದಿಗಳ ಸಂಗ್ರಹವಾಗಿದೆ. ಇದನ್ನು ರಾಜ್ಯ ಪ್ರಯೋಗಾಲಯಗಳು ಮೌಲ್ಯೀಕರಿಸಿದೆ ಎಂದು ಹಿರಿಯ ಐಎಎಸ್‌ ಅಧಿಕಾರಿ ಭೂಷಣ್‌ ಗಗ್ರಾನಿ ಹೇಳಿದರು.

ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಖಾಸಗಿ ಪ್ರಯೋಗಾಲಯದ ಮೊದಲ 10 ಪರೀಕ್ಷಾ ವರದಿಗಳನ್ನು ಸರ್ಕಾರಿ ನಡೆಸುವ ಪ್ರಯೋಗಾಲಯದಿಂದ ಮೌಲ್ಯೀಕರಿಸಬೇಕಾಗಿದೆ. ಅದರ ನಂತರವೇ ಖಾಸಗಿ ಲ್ಯಾಬ್‌ಗಳ ಪರೀಕ್ಷಾ ವರದಿಗಳನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ. ಕಳೆದ ಮೂರು ದಿನಗಳ ಪರೀಕ್ಷಾ ವರದಿಗಳು ಸಂಗ್ರಹವಾಗಲು ಇದು ಕಾರಣವಾಗಿದ್ದು ಇದು ಸ್ಪೈಕ್‌ ಇದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸಿದೆ ಎಂದು ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ, ರಾಜ್ಯವು ದಿನಕ್ಕೆ 5,000 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಅವುಗಳಲ್ಲಿ, 13 ಸರ್ಕಾರಿ ಪ್ರಯೋಗಾಲಯಗಳ ಸಾಮರ್ಥ್ಯವು ದಿನಕ್ಕೆ 2,300 ಮಾದರಿಗಳಲ್ಲಿದೆ. ಎಂಟು ಖಾಸಗಿ ಪ್ರಯೋಗಾಲಯಗಳು ದಿನಕ್ಕೆ 2,800 ಮಾದರಿಗಳನ್ನು ಪರೀಕ್ಷಿಸಬಹುದು ಎಂದು ಸಚಿವ ರಾಜೇಶ್‌ ತೋಪೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next