ಚಿಕ್ಕಬಳ್ಳಾಪುರ: ಇತ್ತೀಚಿಗೆ ಭಾರೀ ಮಳೆಗೆ ನಂದಿಬೆಟ್ಟದ ಬಳಿಯ ಬ್ರಹ್ಮಗಿರಿ ಬೆಟ್ಟದಿಂದ ಭೂಕುಸಿತ ಉಂಟಾಗಿ ರಸ್ತೆ ಕೊಚ್ಚಿ ಹೋಗಿತ್ತು, ರಸ್ತೆ ಮರುನಿರ್ಮಾಣ ಕಾಮಗಾರಿಗೆ ಸರ್ಕಾರ ಇದೀಗ 80 ಲಕ್ಷ ರೂ. ಹಣ ಮಂಜೂರು ಮಾಡಿದೆ.
ಆ.24 ರಂದು ಭಾರೀ ಮಳೆ ಆಗಿ ಬ್ರಹ್ಮಗಿರಿ ಬೆಟ್ಟದ ಮೇಲಿಂದ ಬೃಹತ್ ಗಾತ್ರದ ಬಂಡೆಗಳು ಉರುಳಿಬಂದು ರಸ್ತೆ ಸಂಪೂರ್ಣ ಹಾಳಾಗಿತ್ತು. ಅಲ್ಲದೆ, ರಸ್ತೆಗಳು ಭೂಕುಸಿತದಿಂದಾಗಿ ಸಂಪೂರ್ಣ ಕೊಚ್ಚಿ ಹೋಗಿ ಈ ಮಾರ್ಗವಾಗಿ ವಾಹನ ಸಂಚಾರವನ್ನು ನಿಷೇಸಲಾಗಿತ್ತು.
ಈಗಲೂ ನಂದಿಗಿರಿಧಾಮಕ್ಕೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಸೋಮವಾರದಿಂದ ಲೋಕೋಪ ಯೋಗಿ ಇಲಾಖೆ ವತಿಯಿಂದ ಪ್ರಗತಿ ಕಾಮಗಾರಿ ಆರಂಭವಾಗಲಿದೆ. 45 ದಿನಗಳ ಒಳಗಾಗಿ ಕಾಮಗಾರಿ ಮುಗಿ ಯುವ ವಿಶ್ವಾಸವನ್ನು ಲೋಕೋಪ ಯೋಗಿ ಇಲಾಖೆ ಅ ಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ. ನಂದಿಬೆಟ್ಟದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಹ ತುದಿಗಾಲಲ್ಲಿ ನಿಂತಿದ್ದು, ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಯಲಿ ಎಂದು ಕಾಯುತ್ತಿದ್ದಾರೆ.
ಇದನ್ನೂ ಓದಿ:ನಿಗಮದಿಂದ ಗ್ರಾಮದಲ್ಲೇ ಕೌಶಲ್ಯ ತರಬೇತಿ ನೀಡಲು ಚಿಂತನೆ
ಜಿಲ್ಲೆಯ ವಿಶ್ವ ವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮದ ರಸ್ತೆ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರ ಮನವಿಗೆ ಸ್ಪಂದಿಸಿ ಸರ್ಕಾರ 80 ಲಕ್ಷ ರೂ. ಕಾಮಗಾರಿಯನ್ನು ನಡೆಸಲು ಮಂಜೂರಾತಿ ನೀಡಿದೆ. ಇದರಿಂದ ಕರ್ನಾಟಕದ ಊಟಿಯೆಂದು ಖ್ಯಾತಿ ಹೊಂದಿರುವ ನಂದಿಗಿರಿಧಾಮದ ರಸ್ತೆ ತ್ವರಿತವಾಗಿ ಅಭಿವೃದ್ಧಿ ಹೊಂದಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.