Advertisement
ನ. 20 ರಿಂದ ನ. 28 ರವರೆಗೆ ನಡೆಯುವ ಚಿತ್ರೋತ್ಸವ ಇಂದು ಸಂಜೆ 3.30 ಕ್ಕೆ (ನ.20) ಉದ್ಘಾಟನೆಗೊಳ್ಳಲಿದೆ. ಕೇಂದ್ರ ವಾರ್ತಾ ಮತ್ತು ಪ್ರಚಾರ, ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ರಾಜ್ಯ ಸಚಿವ ಡಾ. ಎಲ್. ಮುರುಗನ್, ರೊಂದಿಗೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್ ಮತ್ತಿತರರು ಭಾಗವಹಿಸುವರು.
Related Articles
Advertisement
ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ನಾಲ್ಕು ಚಿತ್ರಗಳು ಪ್ರಶಸ್ತಿಗೆ ಸೆಣಸಲಿವೆ. ಸಾಗರ್ ಪುರಾಣಿಕ್ ಅವರ ‘ಡೊಳ್ಳು’, ಮಂಸೋರೆಯವರ ‘ಆ್ಯಕ್ಟ್ 1978’, ಗಣೇಶ್ ಹೆಗಡೆಯವರ ‘ನೀಲಿ ಹಕ್ಕಿ’ ಹಾಗೂ ಪ್ರವೀಣ್ ಕೃಪಾಕರ್ ಅವರ ‘ತಲೆದಂಡ’ ಚಲನಚಿತ್ರಗಳು ಆಯ್ಕೆಯಾಗಿವೆ. ಇವುಗಳಲ್ಲಿ ಡೊಳ್ಳು ಚೊಚ್ಚಲ ನಿರ್ದೇಶನದ ಚಿತ್ರಗಳ ಪ್ರಶಸ್ತಿಗೆ ಸೆಣಸುತ್ತಿದೆ.
ಇವುಗಳಲ್ಲದೇ ಈ ವರ್ಷ ಅಗಲಿದ ಚಲನಚಿತ್ರ ರಂಗದ ಮಹನೀಯರಿಗೆ ಶ್ರದ್ಧಾಂಜಲಿ ಸಲ್ಲಿಸಲಿದೆ. ಈ ವಿಭಾಗದಲ್ಲಿ ಪುನೀತ್ ರಾಜಕುಮಾರ್ ರ ‘ರಾಜಕುಮಾರ’ ಹಾಗೂ ಸಂಚಾರಿ ವಿಜಯ್ ಅವರ ‘ನಾನು ಅವನಲ್ಲ, ಅವಳು’ ಚಿತ್ರಗಳು ಪ್ರದರ್ಶಿತವಾಗಲಿವೆ.
ಆಜಾದಿ ಕಿ ಅಮೃತ ಮಹೋತ್ಸವ ವಿಭಾಗದಡಿ ಹದಿನೆಂಟು ಭಾರತೀಯ ಭಾಷೆಗಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ವಿಭಾಗದಲ್ಲಿ ಪುನೀತ್ ರಾಜಕುಮಾರ್ ನಟನೆಯ ‘ಬೆಟ್ಟದ ಹೂವು’ ಹಾಗೂ ಡಾ. ರಾಜಕುಮಾರ್ ಅಭಿನಯದ ‘ಸಂಧ್ಯಾ ರಾಗ’ ಪ್ರದರ್ಶನಗೊಳ್ಳಲಿದೆ.
2019 ರಲ್ಲಿ ನಡೆದ ಉತ್ಸವದಲ್ಲಿ ಪಿಂಕಿ ಎಲ್ಲಿ ಪ್ರದರ್ಶನಗೊಂಡಿದ್ದ ಏಕೈಕ ಚಲನಚಿತ್ರವಾಗಿತ್ತು.