Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 8.48 ವಿದ್ಯಾರ್ಥಿಗಳು ನೋಂದಣಿ

07:08 AM Jun 23, 2020 | Lakshmi GovindaRaj |

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು 8.48 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸರ್ಕಾರಿ ಶಾಲೆಯ 3.31 ಲಕ್ಷ, ಅನುದಾನಿತ ಶಾಲೆ 2.29 ಲಕ್ಷ ಹಾಗೂ ಅನುದಾನ ರಹಿತ ಶಾಲೆ 2.87 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇದರಲ್ಲಿ 4.48 ಲಕ್ಷ ಹುಡುಗರು, 3.99 ಲಕ್ಷ ಹುಡುಗಿಯಒಖ ಸೇರಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

Advertisement

ಸಾಮಾಜಿಕ ಅಂತರದ ಹಿತ ದೃಷ್ಟಿಯಿಂದ ಬೆಂಗಳೂರು ವಿಭಾಗದಲ್ಲಿ 1,014  ಪರೀಕ್ಷಾ ಕೇಂದ್ರ, 72 ಬ್ಲಾಕ್‌, ಮೈಸೂರು ವಿಭಾಗದಲ್ಲಿ 587 ಪರೀಕ್ಷಾ ಕೇಂದ್ರ, 42 ಬ್ಲಾಕ್‌, ಬೆಳಗಾವಿ ವಿಭಾಗದಲ್ಲಿ 737 ಪರೀಕ್ಷಾ ಕೇಂದ್ರ, 134 ಬ್ಲಾಕ್‌, ಕಲಬುರಗಿ ವಿಭಾಗದಲ್ಲಿ 541 ಪರೀಕ್ಷಾ ಕೇಂದ್ರ, 82 ಬ್ಲಾಕ್‌ ಸೇರಿ ಒಟ್ಟು 2879  ಪರೀಕ್ಷಾ ಕೇಂದ್ರ ಹಾಗೂ 330 ಬ್ಲಾಕ್‌ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. 2,879 ಸ್ಥಾನಿಕ ಜಾಗೃತ ದಳ, 50,787 ಕೊಠಡಿ ಮೇಲಿcಚಾರಕರು, 1,246 ಮಾರ್ಗಾಧಿಕಾರಿ ಸೇರಿ 81,265 ಸಿಬ್ಬಂದಿ, ಅಧಿಕಾರಿಗಳನ್ನು ಭದ್ರತೆ ಹಾಗೂ ಸುರಕ್ಷತೆಗಾಗಿ ನೇಮಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.

ಪೊಲೀಸ್‌ -ಆರೋಗ್ಯ ಇಲಾಖೆ 19,222 ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 7,115 ಥರ್ಮಲ್‌ ಸ್ಕ್ರೀನಿಂಗ್‌ ಕೇಂದ್ರ, ಜಿಲ್ಲಾ ಕೇಂದ್ರದಲ್ಲಿ 34 ಸಹಾಯವಾಣಿ ಕೇಂದ್ರ,  ತಾಲೂಕು ಕೇಂದ್ರದಲ್ಲಿ 204 ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಪರೀಕ್ಷೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಮಂಡಳಿ ನಿರ್ದೇಶಕಿ ವಿ.ಸುಮಂಗಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next