Advertisement

Karnataka: ಎಸೆಸೆಲ್ಸಿ ಪರೀಕ್ಷೆ ನೋಂದಣಿಗೆ ನ. 11 ಕೊನೆಯ ದಿನ

12:18 AM Oct 19, 2024 | Team Udayavani |

ಬೆಂಗಳೂರು: ಮುಂದಿನ ಮಾರ್ಚ್‌/ಎಪ್ರಿಲ್‌ನಲ್ಲಿ ನಡೆಯ ಲಿರುವ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ವಿದ್ಯಾರ್ಥಿ ಗಳ ನೋಂದಣಿ ಪ್ರಕ್ರಿಯೆ ನವೆಂಬರ್‌ 11ರ ವರೆಗೆ ಜಾರಿಯಲ್ಲಿರಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ (ಕೆಎಸ್‌ಇಎಬಿ)ಯ ಅಧ್ಯಕ್ಷೆ ಎನ್‌. ಮಂಜುಶ್ರೀ ತಿಳಿಸಿದ್ದಾರೆ.

Advertisement

ಪರೀಕ್ಷೆಗೆ ಹಾಜರಾಗ ಬಯಸುವ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರೌಢ ಶಾಲೆಯ ಅರ್ಹ ವಿದ್ಯಾರ್ಥಿಗಳು, ಪುನರಾವರ್ತಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾ ಗಿದೆ. ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ ಲಾಗಿನ್‌ ಬಳಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಕೆಎಸ್‌ಇಎಬಿಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡು ವಂತೆ ಸೂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next