ನವ ದೆಹಲಿ: 1 ಜನವರಿ 2021 ರ ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಘೋಷಣೆ ಇನ್ನೂ ವಿಳಂಬವಾಗಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರವು ಜೂನ್‌ನಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಪ್ರಕಟಿಸಬಹುದು. ಆದರೆ, ಕೇಂದ್ರದ ಉದ್ಯೋಗಿಗಳಿಗೆ ಡಿಎ ಹೆಚ್ಚಳವು ಮೂಲ ವೇತನದ ಕನಿಷ್ಠ ಶೇಕಡಾ 4 ರಷ್ಟು ಇರಲಿದೆ ಎಂದು ಜೆಸಿಎಂ ಅಧಿಕಾರಿಯೊಬ್ಬರು ಹೇಳಿರುವುದಾಗಿ ನ್ಯಾಷನಲ್ ಕೌನ್ಸಿಲ್ ಜೆಸಿಎಂ ಸ್ಟಾಫ್ ಸೈಡ್ ತಿಳಿಸಿದೆ.
ಇದನ್ನೂ ಓದಿ : ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ
ಈ ಬಗ್ಗೆ ಮಾಹಿತಿ ನೀಡಿದ ಸ್ಟಾಫ್ ಸೈಡ್ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ, ಆರ್ಥಿಕ ಸಚಿವಾಲಯದ ಖರ್ಚು ಮತ್ತು ವೈಯಕ್ತಿಕ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೋವಿಡ್ ಕಾರಣದಿಂದಾಗಿ ಏಪ್ರಿಲ್ ಅಂತ್ಯ ಅಥವಾ ಮೇ ಎರಡನೇ ಅಥವಾ ಮೂರನೇ ವಾರದಲ್ಲಿ ಘೋಷಿಸಬೇಕಿದ್ದ ಡಿಎ ಹೆಚ್ಚಳವು ಈಗ ಜೂನ್ ಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಕೇಂದ್ರ ನೌಕರರ 7 ನೇ ಸಿಪಿಸಿ ವೇತನ ಮ್ಯಾಟ್ರಿಕ್ಸ್ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಕೇಂದ್ರ ಸರ್ಕಾರವು ಈಗಾಗಲೇ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ನನ್ನು 2021 ಜೂನ್ ವರೆಗೆ ಸ್ಥಗಿತಗೊಳಿಸಿದೆ.
ಡಿಎ, ಡಿಆರ್ ಹೆಚ್ಚಿಸುವದನ್ನು ಜುಲೈ 1 ರಿಂದ ಪುನರಾರಂಭಿಸಲಾಗುತ್ತದೆ, ಮಾರ್ಚ್ 2021 ರಲ್ಲಿ ರಾಜ್ಯ ಆರ್ಥಿಕ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ : ಇಂಡಿಯಾ ಬುಲ್ಸ್ ಮ್ಯೂಚುವಲ್ ಫಂಡ್ ಕಂಪನಿಯ ‘ಗ್ರೋವ್’ ದಾಪುಗಾಲು..!?