Advertisement

78th Independence Day;ತಿರಂಗಾ ಜತೆ ಸೆಲ್ಫಿ ತೆಗೆದು ಅಪ್‌ಲೋಡ್‌ ಮಾಡಿ: ಮೋದಿ ಮನವಿ

12:56 AM Jul 29, 2024 | Team Udayavani |

ಹೊಸದಿಲ್ಲಿ: ಈ ಬಾರಿ 78ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ (ಹರ್‌ ಘರ್‌ ತಿರಂಗಾ) ಅಭಿಯಾನ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. 112ನೇ ಆವೃತ್ತಿಯ ತಿಂಗಳ ಕಾರ್ಯಕ್ರಮ “ಮನ್‌ ಕೀ ಬಾತ್‌’ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರಧ್ವಜದ ಜತೆಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣ ಗಳಲ್ಲಿ ಫೋಟೋ ಅಪ್‌ಲೋಡ್‌ ಮಾಡಬೇಕು ಎಂದು ಮನವಿ ಮಾಡಿ ದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವಪಾರಂಪರಿಕ ಪಟ್ಟಿಗೆ ಅಸ್ಸಾಂನ ಮೊಯಿಡಮ್ಸ್‌ ಸೇರ್ಪಡೆ ಯಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

1.5 ಲ.ಕೋ.ರೂ. ವ್ಯವಹಾರ: ದೇಶದಲ್ಲಿ ಇದೇ ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂ.ಗೂ ಅಧಿಕ ಖಾದಿ ಗ್ರಾಮೋದ್ಯೋಗ ವ್ಯವಹಾರ ನಡೆದಿದೆ. ಖಾದಿ ಮತ್ತು ಕೈಮಗ್ಗ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ, ಖಾದಿ ಉತ್ಪನ್ನಗಳ ಮಾರಾಟದಲ್ಲಿ ಶೇ.400ರಷ್ಟು ಹೆಚ್ಚಳವಾಗಿದೆ. ಈ ಉದ್ಯಮದಿಂದ ಮಹಿಳೆಯರಿಗೆ ಹೆಚ್ಚು ಲಾಭವಾಗಿದೆ ಎಂದು ತಿಳಿಸಿದರು.

ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಿ
ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸುವಂತೆ ಮೋದಿ ಕರೆ ನೀಡಿದರು. ಅಂತಾರಾಷ್ಟ್ರೀಯ ಮ್ಯಾಥ್‌ಮ್ಯಾಟಿಕ್ಸ್‌ ಒಲಂಪಿಯಾಡ್‌ನ‌ಲ್ಲಿ ಭಾರತೀಯ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಪ್ರದರ್ಶನ ತೋರಿ, 4 ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕ ಗೆದ್ದಿದೆ ಎಂದು ಹೇಳಿದರು.

ಹುಲಿ ಮಿತ್ರ ಕಾರ್ಯಕ್ರಮಕ್ಕೆ ಮೋದಿ ಹರ್ಷ: ಯೋಗಿ
ಉತ್ತರಪ್ರದೇಶದ ಪಿಲಿಭಿತ್‌ ಜಿಲ್ಲೆಯಲ್ಲಿ ಕೈಗೊಳ್ಳ ಲಾಗು ತ್ತಿರುವ ಬಾಘ ಮಿತ್ರ(ಹುಲಿ ಸ್ನೇಹಿತರು) ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ, ಮೋದಿ ನಾಯಕತ್ವದಲ್ಲಿ ಹುಲಿ ಸಂರಕ್ಷಣೆಗೆ ಬದ್ಧ ಎಂದು ತಿಳಿಸಿದರು.

ಕೇಂದ್ರ-ರಾಜ್ಯ ಸರಕಾರ ಪ್ರಯತ್ನದಿಂದ “ವಿಕಸಿತ ಭಾರತ’ ಸಾಧ್ಯ
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಘಟಿತ ಪ್ರಯತ್ನದಿಂದ “ವಿಕಸಿತ ಭಾರತ’ದ ಗುರಿಯನ್ನು ಸಾಧಿಸುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದರು. ಪರಂಪರೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಅಭಿವೃದ್ಧಿಯ ಪರಂಪರೆಯನ್ನು ಬೆಳೆಸುವುದು ಎರಡೂ, “ವಿಕಸಿತ ಭಾರತ’ದ ಕಲ್ಪನೆಯಲ್ಲಿ ವಿಶೇಷ ಸ್ಥಾನ ಪಡೆದಿವೆ ಎಂದು ಪ್ರಧಾನಿ ಹೇಳಿರುವುದಾಗಿ ಬಿಜೆಪಿಯ ಹಿರಿಯ ಮುಖಂಡ ವಿನಯ್‌ ಸಹಸ್ರ ಬುದ್ಧೆ ಹೇಳಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳ 13 ಮುಖ್ಯಮಂತ್ರಿಗಳು ಹಾಗೂ 15 ಉಪಮುಖ್ಯಮಂತ್ರಿ ಗಳನ್ನೊಳಗೊಂಡ “ಮುಖ್ಯಮಂತ್ರಿ ಪರಿಷದ್‌’ ಸಭೆಯಲ್ಲಿ ಮೋದಿ ಮಾತನಾಡಿದ್ದು, ಸರಕಾರದ ಯೋಜನೆ ಜನರಿಗೆ ತಲುಪಲು ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆಯಾಗಲಿ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next