ಮೆಕ್ಸಿಕೊ ಸಿಟಿ:ಆಗ್ನೇಯ ಮೆಕ್ಸಿಕೊ ದಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
Advertisement
ಮೆಕ್ಸಿಕೊದ ಹಲವು ರಾಜ್ಯಗಳಲ್ಲಿ ಕಂಪನದ ಅನುಭವವಾಗಿದ್ದು ಜನರು ಭಯಭೀತರಾಗಿ ಕಾಲ ಕಳೆದಿರುವ ಬಗ್ಗೆ ವರದಿಯಾಗಿದೆ.
ಕರಾವಳಿ ಪ್ರದೇಶದಲ್ಲಿ ಯಾವುದೇ ತ್ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.
ಹಲವು ಕಟ್ಟಡಗಳಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು ಇದುವರೆಗೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Related Articles
ಕಳೆದ ವರ್ಷ ಸಪ್ಟಂಬರ್ 7 ರಂದು ಮೆಕ್ಸಿಕೊದಲ್ಲಿ ಸಂಭವಿಸಿದ 8.2 ತೀವ್ರತೆಯ ಭೂಕಂಪದಲ್ಲಿ 96 ಮಂದಿ ಸಾವನ್ನಪ್ಪಿದ್ದರು.
Advertisement