Advertisement

Zerodha: ಕಾಮತ್‌ ಸೋದರರಿಗೆ ತಲಾ 72 ಕೋಟಿ ವೇತನ!

10:02 PM Dec 09, 2023 | Team Udayavani |

ನವದೆಹಲಿ: ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಷೇರು ಬ್ರೋಕರೇಜ್‌ ಸಂಸ್ಥೆ ಜೆರೋಧಾದ ಸಂಸ್ಥಾಪಕರಾದ ನಿತಿನ್‌ ಕಾಮತ್‌ ಮತ್ತು ನಿಖೀಲ್‌ ಕಾಮತ್‌ ಕಳೆದ ಹಣಕಾಸು ವರ್ಷ 2022-23ರಲ್ಲಿ ತಲಾ ವಾರ್ಷಿಕ 72 ಕೋಟಿ ರೂ.ಗಳನ್ನು ವೇತನವಾಗಿ ಪಡೆದಿದ್ದಾರೆ!

Advertisement

ಇನ್ನು, ಸಂಸ್ಥೆಯ ಸಾರ್ವಕಾಲಿಕ ನಿರ್ದೇಶಕಿ, ಸಿಇಒ ನಿತಿನ್‌ ಕಾಮತ್‌ ಅವರ ಪತ್ನಿ ಸೀಮಾ ಪಾಟೀಲ್‌ ವಾರ್ಷಿಕ 36 ಕೋಟಿ ರೂ. ವೇತನ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೇಣು ಮಾಧವ್‌ ವಾರ್ಷಿಕ 15.4 ಕೋಟಿ ರೂ.ಗಳನ್ನು ವೇತನವಾಗಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ 2021-22ರ ಹಣಕಾಸು ವರ್ಷದಲ್ಲಿ ಕಂಪನಿಯ ಮೂವರು ನಿರ್ದೇಶಕರಿಗೆ ಗರಿಷ್ಠ 100 ಕೋಟಿ ರೂ.ಗಳನ್ನು ಕಂಪನಿಯ ಆಡಳಿತ ಮಂಡಳಿ ಹೆಚ್ಚುವರಿಯಾಗಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next