Advertisement

Swachh Bharat Mission ನಿಂದ ವರ್ಷಕ್ಕೆ 70,000 ಶಿಶು ರಕ್ಷಣೆ!

01:04 AM Sep 06, 2024 | Team Udayavani |

ಹೊಸದಿಲ್ಲಿ: ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣವಾದ್ದರಿಂದ ಪ್ರತೀ ವರ್ಷ 60ರಿಂದ 70 ಸಾವಿರ ಶಿಶುಗಳ ಮರಣ ತಪ್ಪಿದೆ ಎಂದು ಅಧ್ಯಯನವೊಂದು ಹೇಳಿದೆ. ಅಮೆರಿಕ ದ ಇಂಟರ್‌ನ್ಯಾಶನಲ್‌ ಫ‌ುಡ್‌ ಪಾಲಿಸಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಸಂಶೋಧಕರ ತಂಡ ದೇಶಾದ್ಯಂತ ನಡೆ ಸಿದ ಸಮೀಕ್ಷೆಗಳ 20 ವರ್ಷಗಳ ಅಂಕಿ -ಅಂಶಗಳನ್ನು ಅಧ್ಯಯನ ನಡೆಸಿ ಈ ವರದಿ ನೀಡಿದೆ. 2000ದಿಂದ 2020ರ ವರೆಗೆ ಶಿಶುಗಳು ಹಾಗೂ 5 ವರ್ಷದೊಳ ಗಿನ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿರುವುದಕ್ಕೂ, ಸ್ವಚ್ಛ ಭಾರತ್‌ ಮಿಷನ್‌ ಅಡಿ ಶೌಚಾಲಯ ನಿರ್ಮಾಣ ವಾಗಿರುವುದಕ್ಕೂ ಸಂಬಂಧ ವಿರುವುದನ್ನು ಕಂಡುಕೊಂಡಿದೆ.

Advertisement

ಜಿಲ್ಲಾ ಮಟ್ಟದಲ್ಲಿ ಶೌಚಾಲಯ ಬಳಕೆ ಶೇ.10ರಷ್ಟು ಹೆಚ್ಚಳವಾಗಿ ಪ್ರತೀವರ್ಷ ಶಿಶುಗಳ ಮರಣ ಪ್ರಮಾಣ ಶೇ.0.9 ರಷ್ಟು, 5 ವರ್ಷದೊಳಗಿನ ಮಕ್ಕಳ ಮರಣ ಶೇ.1.1ರಷ್ಟು ಇಳಿಕೆಯಾಗಿದೆ. ಪ್ರತೀವರ್ಷ 60-70 ಸಾವಿರ ಶಿಶುಗಳ ಮರಣ ತಪ್ಪಿದೆ ಎನ್ನಲಾಗಿದೆ. ಶೌಚಾಲ ಯ ಬಳಕೆ ಹೆಚ್ಚಳದಿಂದ ಮಹಿಳಾ ಸುರ ಕ್ಷತೆ, ವೈದ್ಯಕೀಯ ವೆಚ್ಚ ಕಡಿಮೆಯಾಗಿ ಆರ್ಥಿಕ ಉಳಿತಾಯ, ಸೇರಿ ಸಾಕಷ್ಟು ಪ್ರಯೋಜನವಾಗುತ್ತಿವೆ ಎಂದು ಹಲವು ಅಧ್ಯಯನಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next