ಮಂಗಳೂರು: ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್ (ಸುಹಾಸ್ ಗೋಪಾಲ ಪೈ ಸ್ಮರಣಾರ್ಥ) ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ 7 ವರ್ಷದ ಮಗುವಿಗೆ 5 ಲಕ್ಷ ರೂ. ಮೌಲ್ಯದ ಶ್ರವಣ ಸಾಧನವನ್ನು ಕೊಡುಗೆಯಾಗಿ ನೀಡಿದೆ.
ಈ ಬಾಲಕ 2 ವರ್ಷದವನಿರುವಾಗಲೇ ಕಿವಿ ಕೇಳಿಸ ದಾಗಿತ್ತು. 2016 ರಲ್ಲಿ ಕೇಂದ್ರ ಸರಕಾರದ ಎಡಿಐಪಿ ಯೋಜನೆಯಡಿ ಕೋಖೀÉಯರ್ ಶ್ರವಣ ಸಾಧನವನ್ನು ಜೋಡಿಸಲಾಗಿತ್ತು. ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತ್ತು. ಮಗು ಚೇತರಿಸಿದ್ದು, ವಾಕ್ ಶ್ರವಣ ಶಕ್ತಿ ಚೆನ್ನಾಗಿತ್ತು. ಆದರೆ 2021 ಅಕ್ಟೋಬರ್‌ನಲ್ಲಿ
ಈ ಹಿಂದೆ ಅಳವಡಿಸಿದ್ದ ಶ್ರವಣ ಸಾಧನ ನಿಷ್ಕ್ರಿಯವಾಗುತ್ತಾ ಬಂದಿತ್ತು. ಹಳೆಯದನ್ನು ಬದಲಾಯಿಸಿ ಹೊಸ ಶ್ರವಣ ಸಾಧನ ಅಳವಡಿಸಲು 5 ಲಕ್ಷ ರೂ. ಬೇಕಾಗಿದ್ದು, ಅಷ್ಟು ವೆಚ್ಚ ಭರಿಸುವ ಸಾಮರ್ಥ್ಯ ಆ ಬಡ ಕುಟುಂಬಕ್ಕೆ ಇರಲಿಲ್ಲ. ಈ ಸಂದರ್ಭದಲ್ಲಿ ಮಾಹೆ- ಪೈ ಎಂಡೋಮೆಂಟ್ ನೆರವಿಗೆ ಬಂತು.
ಮಾನವ ಪ್ರೇಮಿ ಅನುರಾಧಾ ಗೋಪಾಲ ಪೈ ಅವರ ವಚ್ಯುವಲ್ ಉಪಸ್ಥಿತಿಯಲ್ಲಿ ಕೆಎಂಸಿ ಡೀನ್ ಡಾ| ಬಿ. ಉಣ್ಣಿಕೃಷ್ಣನ್ ಅವರು ಶ್ರವಣ ಸಾಧನವನ್ನು ಹಸ್ತಾಂತರಿಸಿದರು. ಅಸೋಸಿಯೇಟ್ ಡೀನ್ ಮತ್ತು ಇತರ ವೈದ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ನಿವೃತ್ತ ಯೋಧರಿಗೆ ಪಿಂಚಣಿ ಸಮಸ್ಯೆ ನಿವಾರಿಸಲು ವೆಬ್‌ಸೈಟ್
ಶ್ರವಣ ಸಾಧನ ಅಳವಡಿಸಿದ ಮಗು ಈಗ ಇತರ ಮಕ್ಕಳ ಜತೆಗೆ ಶಾಲೆಯಲ್ಲಿ ಕಲಿಯುತ್ತಿದೆ. ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್ ಮುಖಾಂತರ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶ್ರವಣ ತಪಾಸಣಾ ಯಂತ್ರವನ್ನು ಅಳವಡಿಸಿದ್ದು, 2020ರಿಂದೀಚೆಗೆ ಅಲ್ಲಿ ಹುಟ್ಟಿದ ಸುಮಾರು 10,000 ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆ ನಡೆಸಲಾಗಿದೆ. ಅಗತ್ಯ ಇರುವ ಮಕ್ಕಳಿಗೆ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಶ್ರವಣ ದೋಷ ನಿವಾರಿಸಲು ಚಿಕಿತ್ಸೆ ನೀಡಲಾಗುತ್ತಿದೆ ಎಂದ ಆಸ್ಪತ್ರೆಯ ವಾಕ್ ಶ್ರವಣ ತಜ್ಞ ಡಾ| ರಾದಿಶ್ ಕುಮಾರ್ ಬಿ. ತಿಳಿಸಿದ್ದಾರೆ.